Rajya Sabha Election: ಕೇಂದ್ರ ಚುನಾವಣೆ ಆಯೋಗವು ರಾಜ್ಯಸಭಾ ಚುನಾವಣೆಯ ದಿನಾಂಕ ಘೋಷಿಸಿದೆ. ಕರ್ನಾಟಕದ ೪ ಸೇರಿದಂತೆ 15 ರಾಜ್ಯಗಳ ಒಟ್ಟು 56 ರಾಜ್ಯಸಭೆ ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ.
ಚಿಕ್ಕಮಗಳೂರಲ್ಲಿ ಶಾಸಕ ಸಿ.ಟಿ.ರವಿ ಮತದಾನ. ನಗರದ ಬಸವನಹಳ್ಳಿ ಶಾಲೆಯಲ್ಲಿ ಮತದಾನ. ಬಸವನಹಳ್ಳಿ ಶಾಲೆ ಮತಗಟ್ಟೆ ಸಂಖ್ಯೆ 200ರಲ್ಲಿ ಮತದಾನ. ಪತ್ನಿ, ತಾಯಿ, ಮಗನ ಜೊತೆ ಆಗಮಿಸಿ ವೋಟಿಂಗ್.
ಮತದಾನಕ್ಕೂ ಮುನ್ನ ಸಿಎಂ ಬೊಮ್ಮಾಯಿ ಪೂಜೆ. ಗಾಯತ್ರಿ ತಪೋಭೂಮಿಗೆ ಬೊಮ್ಮಾಯಿ ಭೇಟಿ. ಶಿಗ್ಗಾವಿ ತಾ. ತಡಸ ಗ್ರಾಮದಲ್ಲಿರುವ ತಪೋಭೂಮಿ. ಗಾಯತ್ರಿ ದೇವಿ, ಆಂಜನೇಯನ ದರ್ಶನ ಪಡೆದ ಸಿಎಂ. ಪುತ್ರ ಭರತ್, ಪತ್ನಿ ಚೆನ್ನಮ್ಮ, ಮಗಳು ಅದಿತಿ ಸಾಥ್.
ಮತ ಜಾತ್ರೆಯಲ್ಲಿ ಸ್ಟಾರ್ ನಟರ ವೋಟಿಂಗ್. ನಾವು ಮತ ಹಾಕಿದ್ದೇವೆ.. ನೀವೂ ಮತ ಹಾಕಿ, ಹಾಕಿಸಿ. ಯಾರು ಅಭಿವೃದ್ಧಿ ಮಾಡಿದ್ದಾರೆ ಅವರಿಗೆ ಮತ ಹಾಕಿ. ವೋಟಿಂಗ್ ಮಾಡಿ ಎಂದು ನಟ ಗಣೇಶ್ ಮನವಿ.
ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ. ಕುಟುಂಬಸ್ಥರ ಜೊತೆ ಬಂದು ಲಕ್ಷ್ಮೀ ಮತ ಚಲಾವಣೆ. ವಿಜಯನಗರದ ಮರಾಠಿ ಶಾಲೆಯ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ. ಹೆಬ್ಬಾಳ್ಕರ್ಗೆ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸಾಥ್. ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾಮೀಣ ಶಾಸಕಿ.
Karnataka Assembly Elections 2023: ಮತದಾನ ಮುಗಿಯುವ ಒಂದೂವರೆ ಗಂಟೆ ಮುಂಚಿತವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ ಯಶ್ ತಮ್ಮ ಹಕ್ಕು ಚಲಾಯಿಸಿದರು. ಪತ್ನಿ ರಾಧಿಕಾ ಪಂಡಿತ್ ಬೇರೆ ಕೇಂದ್ರದಲ್ಲಿ ಮತದಾನ ಮಾಡಿದ್ದರಿಂದ ಯಶ್ ಒಬ್ಬರೇ ಬಂದು ವೋಟ್ ಮಾಡಿದರು.
ಬಿರುಸಿನ ಮತದಾನದ ನಡುವೆ ಕೈ ಕೊಟ್ಟ EVM. ಚಾಮರಾಜನಗರ ಮತಗಟ್ಟೆಯ ಇವಿಎಂನಲ್ಲಿ ದೋಷ. ಸಂತೇಮರಹಳ್ಳಿ ವೃತ್ತ ಸಮೀಪದ ಮತಗಟ್ಟೆಯಲ್ಲಿ ಘಟನೆ. ಉಪ್ಪಾರ ಬೀದಿಯ ಮತಗಟ್ಟೆ 69ರಲ್ಲಿ ತಾಂತ್ರಿಕ ದೋಷ. ಬಳಿಕ ಅಧಿಕಾರಿಗಳಿಂದ ಸರಿಪಡಿಸುವ ಕಾರ್ಯ ಪೂರ್ಣ. ಮತದಾರರು ಅರ್ಧ ಗಂಟೆ ಕಾದು ಕಾದು ಅಸಮಾಧಾನ. ಚಾಮರಾಜನಗರದ ಉಳಿದೆಲ್ಲೆಡೆ ಬಿರುಸಿನ ಮತದಾನ.
ಶಿಕಾರಿಪುರದಲ್ಲಿ ಮತದಾನ ಮಾಡುವ ಮೊದಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ತಮ್ಮ ಮನೆ ದೇವರಾದ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು.
ಬೆಂಗಳೂರಲ್ಲಿ ಸಚಿವ ಭೈರತಿ ಬಸವರಾಜ್ ಮತದಾನ. ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ಮತದಾನ. ಪತ್ನಿ ಪದ್ಮವತಿಯೊಂದಿಗೆ ಆಗಮಿಸಿ ಸಚಿವರ ವೋಟಿಂಗ್. ಮತ ಚಲಾವಣೆಗೂ ಮುನ್ನ ಗೋಪೂಜೆ ಸಲ್ಲಿಕೆ. ಎಲ್ಲರೂ ಮತದಾನ ಮಾಡುವಂತೆ ಭೈರತಿ ಮನವಿ.
ಕರ್ನಾಟಕ ಚುನಾವಣೆ 2023: ಹುಬ್ಬಳ್ಳಿಯಲ್ಲಿ ಮತದಾರರ ಜೊತೆಗೆ ಬೆಕ್ಕು ಕೂಡ ಮತಗಟ್ಟೆಗೆ ಬಂದಿರುವ ಘಟನೆ ನಡೆದಿದೆ. ಈ ಬೆಕ್ಕನ್ನು ಕಂಡು ಮತಗಟ್ಟೆ ಸಿಬ್ಬಂದಿ ಅಚ್ಚರಿ ಗೊಂಡಿದ್ದು, ಅದನ್ನು ದೂರ ಕಳುಹಿಸಲು ಕೂಡ ಪ್ರಯತ್ನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.