AI ಮಿಷನ್ ಗಾಗಿ ಮುಂದಿನ 5ವರ್ಷಗಳಲ್ಲಿ 10,372 ಕೋಟಿ ಒದಗಿಸಲು ಅನುಮೋದನೆ : ಕೇಂದ್ರ ಸಚಿವ ಸಂಪುಟ

AI Mission : ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕೃತಕ ಬುದ್ಧಿ ಮತ್ತೆ ಮಿಷನ್ ಗಾಗಿ 10,372 ಕೋಟಿ ಒದಗಿಸಲು ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. 

Written by - Zee Kannada News Desk | Last Updated : Mar 8, 2024, 01:33 AM IST
  • ಯೋಜನೆಯನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಅಂಗಸಂಸ್ಥೆಯಾಗಿರುವ ಇಂಡಿಯಾ ಎಐ ಇಂಡಿಪೆಂಡೆಂಟ್ ಡಿಜಿಜನ್ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ
  • ಈ ಮೂಲಕ ದೇಶದಲ್ಲಿ ಉನ್ನತ ಮಟ್ಟದ ಎಐ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ.
  • ಎಐ ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ದೇಶದ ಸ್ಟಾರ್ಟಪ್ ಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಹಾಗೂ ಸಂಶೋಧಕರಿಗೂ ಒದಗಿಸಲಾಗುತ್ತದೆ
AI ಮಿಷನ್ ಗಾಗಿ ಮುಂದಿನ 5ವರ್ಷಗಳಲ್ಲಿ 10,372 ಕೋಟಿ ಒದಗಿಸಲು ಅನುಮೋದನೆ : ಕೇಂದ್ರ ಸಚಿವ ಸಂಪುಟ title=

next 5 years for AI Mission : AI ತಂತ್ರಜ್ಞರಿಗೆ ಅನುಕೂಲವಾಗಬೇಕು ಮತ್ತು 10,000 ಸಿಪಿಯು ಒಳಗೊಂಡ ಸೂಪರ್ ಕಂಪ್ಯೂಟರ್ ಘಟಕವನ್ನು ಸ್ಥಾಪಿಸಬೇಕು ಎನ್ನುವ ನಿಟ್ಟಿನಲ್ಲಿ ಈ ವ್ಯವಸ್ಥೆಯನ್ನು ನಿರ್ಮಾಣ ಮಾಡಲಾಗಿದೆ.

ಈ ಅನುಮೋದನೆಯ ಮೊತ್ತವನ್ನು ಬೃಹತ್ ಕಂಪ್ಯೂಟಿಂಗ್ ಮೂಲ ಸೌಕರ್ಯ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ 

ಇದನ್ನು ಓದಿ : ಮಹಾಶಿವರಾತ್ರಿ : ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಸೂಚನೆ : ಮುಜರಾಯಿ ಇಲಾಖೆ ಸುತ್ತೋಲೆ 

ಯೋಜನೆಯನ್ನು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಅಂಗಸಂಸ್ಥೆಯಾಗಿರುವ ಇಂಡಿಯಾ ಎಐ ಇಂಡಿಪೆಂಡೆಂಟ್ ಡಿಜಿಜನ್ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ

 ಈ ವಿಷಯ ಕುರಿತು ಮಾತನಾಡಿದ ಕೇಂದ್ರ ಸಚಿವ ಪಿಯೂಷ್ ಗೋಯಲ್ ಐದು ವರ್ಷಗಳ ಅವಧಿಯ ಈ ಯೋಜನೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ವಿಧಾನದಲ್ಲಿ ಅನುಷ್ಠಾನಗೊಳಿಸಲಾಗುವುದು ಈ ಮೂಲಕ ದೇಶದಲ್ಲಿ ಉನ್ನತ ಮಟ್ಟದ ಎಐ ವ್ಯವಸ್ಥೆಯನ್ನು ನಿರ್ಮಿಸಲಾಗುವುದು ಎಂದು ಸಚಿವ ಸಂಪುಟ ಸಭೆಯ ಬಳಿಕ ತಿಳಿಸಿದ್ದಾರೆ. 

ನವೋದ್ಯಮ ವಿದ್ಯಾರ್ಥಿಗಳು ಸಂಶೋಧಕರು ಮತ್ತು ಕೈಗಾರಿಕೋದ್ಯಮಿಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಎಐ ಮಿಷನ್ ಅಡಿ ಸೂಪರ್ ಕಂಪ್ಯೂಟಿಂಗ್ ವ್ಯವಸ್ಥೆಯಲ್ಲಿ ನಿರ್ಮಾಣಗಳಿಸಲಿದೆ.  ದತ್ತಾಂಶದ ಗುಣಮಟ್ಟ ವೃದ್ಧಿ ಮತ್ತು ಎಐ ಅಭಿವೃದ್ಧಿ ಹಾಗೂ ನಿಯೋಜನೆಗೆ ಅಂಕಿ ಅಂಶದ ಲಭ್ಯತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳ ಜೊತೆ ಸಮನ್ವಯ ಸಾಧಿಸುವ ಕೆಲಸ ಮಾಡುತ್ತದೆ ಎಂದು ತಿಳಿಸುತ್ತಾರೆ

ಇದನ್ನು ಓದಿ : ಬಹು ನಿರೀಕ್ಷಿತ 'ಲವ್ ಸೆಕ್ಸ್ ಔರ್ ಧೋಖಾ 2' ಹೊಸ ಪೋಸ್ಟರ್ ಬಿಡುಗಡೆ

ಎಐ ಸೂಪರ್ ಕಂಪ್ಯೂಟಿಂಗ್ ಮೂಲಸೌಕರ್ಯವನ್ನು ದೇಶದ ಸ್ಟಾರ್ಟಪ್ ಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಹಾಗೂ ಸಂಶೋಧಕರಿಗೂ ಒದಗಿಸಲಾಗುತ್ತದೆ ಈ ಯೋಜನೆ ಅಡಿ ಎಐ ಇನ್ನೋವೇಶನ್ ಸೆಂಟರ್ ನ್ಯಾಷನಲ್ ಡೇಟಾ ಮ್ಯಾನೇಜ್ಮೆಂಟ್ ಆಫೀಸ್ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News