Airtel 5G Service: ಈ ತಿಂಗಳಿನಿಂದ ಏರ್‌ಟೆಲ್ 5G ಸೇವೆ ಆರಂಭ: ಆದರೆ, ಈ ದುಬಾರಿ ಫೋನ್‌ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ ಸೇವೆ

Airtel 5G Service: ಎಲ್ಲಾ 5G ಸ್ಮಾರ್ಟ್‌ಫೋನ್‌ಗಳು 5G ಸೇವೆಯನ್ನು ಪಡೆಯುತ್ತವೆ. ಆದರೆ ಈ ದುಬಾರಿ ಶ್ರೇಣಿಯ ಫೋನ್‌ಗಳು ಕಾಯಬೇಕಾಗಿದೆ ಎಂದು ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಹೇಳಿದ್ದಾರೆ. 

Written by - Yashaswini V | Last Updated : Nov 3, 2022, 09:28 AM IST
  • ಏರ್‌ಟೆಲ್ 5G ಸೇವೆಯು ಈ ತಿಂಗಳು ಲಭ್ಯವಿರುತ್ತದೆ
  • ಆದರೆ ಕೆಲವು ದುಬಾರಿ ಫೋನ್‌ಗಳು ಇದಕ್ಕಾಗಿ ಕಾಯಬೇಕಾಗಿದೆ
  • ಯಾವ ಸ್ಮಾರ್ಟ್‌ಫೋನ್‌ಗಳಲ್ಲಿ ಏರ್‌ಟೆಲ್ 5G ಸೇವೆಯನ್ನು ಲಭ್ಯವಾಗಲಿದೆ ತಿಳಿಯಿರಿ
Airtel 5G Service: ಈ ತಿಂಗಳಿನಿಂದ ಏರ್‌ಟೆಲ್ 5G ಸೇವೆ ಆರಂಭ: ಆದರೆ, ಈ ದುಬಾರಿ ಫೋನ್‌ಗಳಲ್ಲಿ ಸದ್ಯಕ್ಕೆ ಲಭ್ಯವಿಲ್ಲ ಸೇವೆ  title=
Airtel 5G Service

Airtel 5G Service: ಏರ್‌ಟೆಲ್ ತನ್ನ 5G ಸೇವೆಯನ್ನು ಈ ತಿಂಗಳು ಹೊರತರುತ್ತಿದೆ. ಆದರೆ ಕೆಲವು ಹ್ಯಾಂಡ್‌ಸೆಟ್‌ಗಳು ಈ ಸೇವೆಗಾಗಿ ಇನ್ನೂ ಕೆಲ ಸಮಯ ಕಾಯಬೇಕಿದೆ. ಈ ಕುರಿತಂತೆ ಮಾಹಿತಿ ಒದಗಿಸಿದ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಈ ತಿಂಗಳಿನಿಂದ ಎಲ್ಲಾ 5G ಸ್ಮಾರ್ಟ್‌ಫೋನ್‌ಗಳು 5G ಸೇವೆಗಳನ್ನು ಪಡೆಯಲು ಪ್ರಾರಂಭಿಸುತ್ತವೆ. ಆದರೆ ಐಫೋನ್ ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್‌ಗಾಗಿ ಕಾಯಬೇಕಾಗುತ್ತದೆ. ಏರ್‌ಟೆಲ್ ಹೊಂದಿರುವ ಆಂಡ್ರಾಯ್ಡ್ ಬಳಕೆದಾರರು ಈ ತಿಂಗಳಿನಿಂದ ಈ 5ಜಿ ಸೇವೆಯನ್ನು ಪಡೆಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ವಾಸ್ತವವಾಗಿ, ಆಪಲ್ ಇನ್ನೂ ತನ್ನ ಐಫೋನ್‌ಗಳನ್ನು 5ಜಿ ಸೇವೆಗಾಗಿ ಸಿದ್ಧಪಡಿಸಿಲ್ಲ. ಆಪಲ್ ನವೆಂಬರ್‌ನಲ್ಲಿ ಸಾಫ್ಟ್‌ವೇರ್ ಅನ್ನು ಬಿಡುಗಡೆ ಮಾಡುತ್ತದೆ ಮತ್ತು ಡಿಸೆಂಬರ್‌ನಲ್ಲಿ ಅದರ ಸಾಧನಗಳು 5G ಗೆ ಸಿದ್ಧವಾಗಲಿದೆ. ಪ್ರಸ್ತುತ, ಏರ್‌ಟೆಲ್ ತನ್ನ 5G ಸೇವೆಗಳನ್ನು 4G ವೆಚ್ಚದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಮುಂದೆಯೂ ಹೀಗೆಯೇ ಆಗುತ್ತದೆ ಎಂದು ಹೇಳಲಾಗದು. ಕಂಪನಿಯು ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಬಹುದು. ಆದಾಗ್ಯೂ, ಮುಂದಿನ 6 ರಿಂದ 9 ತಿಂಗಳುಗಳವರೆಗೆ ಬೆಲೆ ಏರಿಕೆ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಮನೆಯ 2 ಗ್ಯಾಜೆಟ್‌ಗಳನ್ನು ಬದಲಾಯಿಸಿದರೆ ಅರ್ಧಕ್ಕಿಂತ ಕಡಿಮೆ ಆಗುತ್ತೆ ವಿದ್ಯುತ್ ಬಿಲ್

ಸ್ಯಾಮ್‌ಸಂಗ್‌ನ ಸುಮಾರು 27 ಮಾದರಿಗಳು 5G ಅನ್ನು ಬೆಂಬಲಿಸುತ್ತವೆ. ಅದೇ ಸಮಯದಲ್ಲಿ, OnePlus ನ 17 ಮಾದರಿಗಳು ಏರ್‌ಟೆಲ್‌ನ 5G ನೆಟ್‌ವರ್ಕ್‌ನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. Vivo ನ ಎಲ್ಲಾ 34 ಮಾದರಿಗಳು, Realme ನ 34 ಮಾದರಿಗಳು ಸಹ ಈ ನೆಟ್‌ವರ್ಕ್‌ಗೆ ಸಿದ್ಧವಾಗಿವೆ. Xiaomi ಕುರಿತು ಹೇಳುವುದಾದರೆ, ಅದರ 33 ಮಾದರಿಗಳು ಮತ್ತು Oppo ನ 14 ಮಾದರಿಗಳು ಇದರಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆಪಲ್ 13 ಮಾದರಿಗಳನ್ನು ಹೊಂದಿದೆ, ಸಾಫ್ಟ್‌ವೇರ್ ಅಪ್‌ಡೇಟ್ ನಂತರ ಡಿಸೆಂಬರ್ ಮಧ್ಯದ ವೇಳೆಗೆ ಈ ಐಫೋನ್‌ಗಳೂ ಸಹ  5G ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ- Instagramನಲ್ಲಿ ನಿಮ್ಮ ಅಕೌಂಟ್‌ ಸಹ ನಿಷ್ಕ್ರಿಯಗೊಂಡಿದ್ಯಾ? ಮರಳಿ ಪಡೆಯುಲು ಹೀಗೆ ಮಾಡಿ!

ಮಾರ್ಚ್ 2024 ರ ವೇಳೆಗೆ ಹಳ್ಳಿ ಹಳ್ಳಿಗೂ ತಲುಪಲಿದೆ ಏರ್‌ಟೆಲ್ 5G ಸೇವೆ- ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್
ಏರ್‌ಟೆಲ್ ಈಗಾಗಲೇ ಹಲವಾರು ಹಂತಗಳಲ್ಲಿ 5G ಸೇವೆಯನ್ನು ಹೊರತರಲು ಪ್ರಾರಂಭಿಸಿದೆ. ದೆಹಲಿ, ಗುರುಗ್ರಾಮ್ ಮತ್ತು ಚೆನ್ನೈನಲ್ಲಿ ಕೆಲವು ಬಳಕೆದಾರರು ಏರ್‌ಟೆಲ್ 5G ಸೇವೆಗಳನ್ನು ಪಡೆಯುತ್ತಿದ್ದಾರೆ. ಏರ್‌ಟೆಲ್ ಅಕ್ಟೋಬರ್ 1 ರಂದು 5ಜಿ ಸೇವೆಯನ್ನು ಅಧಿಕೃತವಾಗಿ ಹೊರತಂದಿದೆ ಮತ್ತು ಮೊದಲ ಹಂತದಲ್ಲಿ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದೆ. ಇದರ ನಂತರ, ಮುಂದಿನ ವರ್ಷ ಎರಡನೇ ಹಂತದಲ್ಲಿ ಇತರ ಹಲವು ನಗರಗಳಲ್ಲಿಯೂ ಈ ಸೇವೆ ಲಭ್ಯವಾಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News