Airtel Down: ದೇಶಾದ್ಯಂತ Airtel ಸೇವೆ ಸ್ಥಗಿತ! ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್ ಚಲ್

Airtel Latest News: ದೇಶಾದ್ಯಂತ ಏರ್‌ಟೆಲ್ ಬಳಕೆದಾರರು ಔಟೆಜ್ (Airtel Outage) ಎದುರಿಸುತ್ತಿದ್ದಾರೆ. ಅಂದರೆ, ಏರ್‌ಟೆಲ್ ಬಳಕೆದಾರರು ಕಂಪನಿಯ ಸೇವೆಗಳನ್ನು ಬಳಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏರ್‌ಟೆಲ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. 

Written by - Nitin Tabib | Last Updated : Feb 11, 2022, 01:43 PM IST
  • ದೇಶಾದ್ಯಂತ ಹಲವು ನಗರಗಳಲ್ಲಿ ಏರ್ಟೆಲ್ ಸೇವೆ ಸ್ಥಗಿತ.
  • ಮೀಮ್ಸ್ ಹಂಚಿಕೊಂಡು ತಮಾಷೆ ಮಾಡಿದ ಬಳಕೆದಾರರು.
  • ಔಟೇಜ್ ಕುರಿತು ಕಂಪನಿ ಹೇಳಿದ್ದೇನು?
Airtel Down: ದೇಶಾದ್ಯಂತ Airtel ಸೇವೆ ಸ್ಥಗಿತ! ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಹಲ್ ಚಲ್  title=
Airtel Down (File Photo)

Airtel Latest News: ದೇಶಾದ್ಯಂತ ಏರ್‌ಟೆಲ್ ಬಳಕೆದಾರರು ಔಟೆಜ್ (Airtel Outage) ಎದುರಿಸುತ್ತಿದ್ದಾರೆ. ಅಂದರೆ, ಏರ್‌ಟೆಲ್ ಬಳಕೆದಾರರು ಕಂಪನಿಯ ಸೇವೆಗಳನ್ನು ಬಳಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏರ್‌ಟೆಲ್ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳಲ್ಲಿ ಒಂದಾಗಿದೆ. ನೆಟ್‌ವರ್ಕ್ ಸಮಸ್ಯೆಗಳನ್ನು ಎದುರಿಸುತ್ತಿರುವ ನೂರಾರು ಬಳಕೆದಾರರು ಟ್ವಿಟರ್‌ಗೆ ಧಾವಿಸಿ ದೂರು ದಾಖಲಿಸುತ್ತಿದ್ದಾರೆ. ಏರ್‌ಟೆಲ್‌ನ ಮೊಬೈಲ್ ಇಂಟರ್ನೆಟ್ ಸೇವೆ ಮಾತ್ರವಲ್ಲ, ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ (Airtel Thanks App) ಮತ್ತು ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಸೇವೆಗಳು (Airtel Broadband Service) ಸಹ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿವೆ ಎಂದು ಹಲವಾರು ಬಳಕೆದಾರರು ಟ್ವಿಟರ್‌ನಲ್ಲಿ ವರದಿ ಮಾಡಿದ್ದಾರೆ.

ಈ ನಗರಗಳಲ್ಲಿನ ಬಳಕೆದಾರರು ಪ್ರಭಾವಕ್ಕೆ ಒಳಗಾಗಿದ್ದಾರೆ
ಇಂಟರ್ನೆಟ್ ಔಟೇಜ್ ಟ್ರ್ಯಾಕ್ ಮಾಡುವ Downdetector ಪ್ರಕಾರ, ಈ ಔಟೇಜ್ ದೇಶದ ವಿವಿಧ ಭಾಗಗಳಲ್ಲಿನ ಏರ್‌ಟೆಲ್ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿದೆ. Downdetectorನಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಬೆಳಗ್ಗೆ 11 ಗಂಟೆಯ ಸುಮಾರಿಗೆ ಸಮಸ್ಯೆ ಕಾಣಿಸಿಕೊಂಡಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಅಹಮದಾಬಾದ್, ಜೈಪುರ, ಕೋಲ್ಕತ್ತಾ ಸೇರಿದಂತೆ ಭಾರತದ ಹಲವಾರು ಪ್ರಮುಖ ನಗರಗಳಲ್ಲಿ ಈ ಸ್ಥಗಿತವು ಪರಿಣಾಮ ಬೀರಿದೆ ಎಂದು ಡೌನ್ ಡಿಟೆಕ್ಟರ್ ವರದಿ ಮಾಡಿದೆ. ಆದರೆ ಇನ್ನೊಂದೆಡೆ, ಈ ಸಮಸ್ಯೆಯು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತಿಲ್ಲ ಎನ್ನಲಾಗಿದೆ. ಏಕೆಂದರೆ ಕೆಲವರು ಯಾವುದೇ ಸಮಸ್ಯೆಗಳಿಲ್ಲದೆ ಕರೆ ಮತ್ತು ಡೇಟಾ ಸೇವೆಗಳನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ-ಭಾರತಕ್ಕೆ ಲಗ್ಗೆ ಇಟ್ಟ Redmi Note 11, Redmi Note 11S; ಇಲ್ಲಿದೆ ಬೆಲೆ, ವೈಶಿಷ್ಟ್ಯ

ಮೀಮ್ಸ್ ಹಂಚಿಕೊಂಡು ತಮಾಷೆ ಮಾಡುತ್ತಿರುವ ಬಳಕೆದಾರರು
ದೂರು ದಾಖಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಟ್ವಿಟ್ಟರ್ ಗೆ ಧಾವಿಸುತ್ತಿದ್ದಾರೆ. ಔಟೇಜ್ ಬಳಿಕ ಮೀಮ್ಸ್ ಗಳನ್ನು ಹಂಚಿಕೊಳ್ಳುವ ಮೂಲಕ ಬಳಕೆದಾರರು ಕಂಪನಿಯ ಕುರಿತು ತಮಾಷೆ ಮಾಡುತ್ತಿದ್ದಾರೆ. 

ಇದನ್ನೂ ಓದಿ-The Largest Comet: Manhattan ಗಾತ್ರಕ್ಕಿಂತ 7 ಪಟ್ಟು ದೊಡ್ಡ ಮತ್ತು 137 ಕಿ.ಮೀ ಉದ್ದದ ಧೂಮಕೇತು ಪತ್ತೆ

ಕಂಪನಿ ಹೇಳಿದ್ದೇನು?
ಔಟೇಜ್ ಆಗಿರುವ ಸಂಗತಿ ನಿಜ ಎಂದು ಕಂಪನಿ (Airtel) ಕೂಡ ಒಪ್ಪಿಕೊಂಡಿದೆ ಹಾಗೂ ಈ ಕುರಿತು ಟ್ವೀಟ್ ಹಂಚಿಕೊಂಡಿರುವ ಕಂಪನಿ, ಪ್ರಭಾವಿತಗೊಂಡ ಕ್ಷೇತ್ರಗಲ್ಲಿ ಸೇವೆ ಮತ್ತೆ ಯಥಾಸ್ಥಿತಿಗೆ ಬಂದಿವೆ ಎಂದಿದೆ. 

ಇದನ್ನೂ ಓದಿ-Gmail ಬಳಸುತ್ತೀರಾ? ಹಾಗಿದ್ರೆ ತಕ್ಷಣ ಅಪ್ಡೇಟ್ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News