Airtelನ ಅತ್ಯಂತ ಅಗ್ಗದ ಯೋಜನೆ, ಕೇವಲ 59 ರೂ.ಗೆ ಸಿಗಲಿದೆ 3GB ಹೈ ಸ್ಪೀಡ್ ಡೇಟಾ

ಇಂದು ನಾವು ಏರ್‌ಟೆಲ್‌ನ ರೀಚಾರ್ಜ್  ಮತ್ತು ಡೇಟಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ಅತ್ಯಂತ  ಅಗ್ಗದ ಯೋಜನೆಯಾಗಿದೆ.

Written by - Ranjitha R K | Last Updated : Feb 2, 2022, 01:39 PM IST
  • ಅಗ್ಗದ ಏರ್ಟೆಲ್ ಯೋಜನೆಗಳು
  • 59 ರೂಪಾಯಿಗೆ ಸಿಗಲಿದೆ 3GB ಡೇಟಾ
  • ಏರ್ಟೆಲ್ ನೀಡುತ್ತಿದೆ ಅತ್ಯಂತ ಅಗ್ಗದ ರೀಚಾರ್ಜ್ ಪ್ಲಾನ್
Airtelನ ಅತ್ಯಂತ ಅಗ್ಗದ ಯೋಜನೆ, ಕೇವಲ  59 ರೂ.ಗೆ ಸಿಗಲಿದೆ 3GB ಹೈ ಸ್ಪೀಡ್ ಡೇಟಾ  title=
ಅಗ್ಗದ ಏರ್ಟೆಲ್ ಯೋಜನೆಗಳು (file photo)

ನವದೆಹಲಿ : ದೇಶದ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಅಗ್ಗದ ಮತ್ತು ಆಕರ್ಷಕ ಯೋಜನೆಗಳನ್ನು ನೀಡಲು ಪ್ರಯತ್ನಿಸುತ್ತಿವೆ. ತಮ್ಮ ಗ್ರಾಹಕರನ್ನು ಸಂತೋಷಪಡಿಸುವುದರ ಜೊತೆಗೆ, ಇತರರಿಗಿಂತ ಒಂದು ಹೆಜ್ಜೆ ಮುಂದಿರಲು ಸದಾ ಈ ಕಂಪನಿಗಳು  ಪ್ರಯತ್ನಿಸುತ್ತಲೇ ಇರುತ್ತವೆ. ಇಂದು ನಾವು ಏರ್‌ಟೆಲ್‌ನ ರೀಚಾರ್ಜ್ (Airtel recharge paln) ಮತ್ತು ಡೇಟಾ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ಅತ್ಯಂತ  ಅಗ್ಗದ ಯೋಜನೆಯಾಗಿದೆ.  ಮಾತ್ರವಲ್ಲ ಈ ಪ್ಲಾನ್ ನಲ್ಲಿ ಅದ್ಭುತ ಪ್ರಯೋಜನಗಳನ್ನು ಕೂಡಾ ಪಡೆಯಬಹುದು. 

ಏರ್‌ಟೆಲ್‌ನ  59 ರೂ. ಡೇಟಾ ಪ್ಲಾನ್ :
ಏರ್‌ಟೆಲ್‌ನ  59 ರೂ. ಡೇಟಾ ಪ್ಲಾನ್ನಲ್ಲಿ 3GB ಹೈ ಸ್ಪೀಡ್ ಇಂಟರ್ನೆಟ್ ಪಡೆಯಬಹುದು. ಈ ಯೋಜನೆಗೆ ಯಾವುದೇ ಪ್ರತ್ಯೇಕ ಮಾನ್ಯತೆ ಇರುವುದಿಲ್ಲ. ಬದಲಿಗೆ ಅಸ್ತಿತ್ವದಲ್ಲಿರುವ recharge plan ರನ್ ಆಗುವವರೆಗೆ ಈ ಯೋಜನೆಯ ಪ್ರಯೋಜನ ಪಡೆಯಬಹುದು.  

ಇದನ್ನೂ ಓದಿ : Scam Alert! ಉಚಿತ ಇಂಟರ್ನೆಟ್ ನೀಡುವ ವೈರಲ್ ಸಂದೇಶವು ನಿಮಗೆ ಮುಳುವಾದೀತು ಎಚ್ಚರ

ಏರ್‌ಟೆಲ್  (Airtel recharge plan) 98 ರೂ. ಬೆಲೆಯ ಮತ್ತೊಂದು ಡೇಟಾ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ, 5GB ಡೇಟಾವನ್ನು ಪಡೆಯಬಹುದು.  ಇದರಲ್ಲಿ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ಕೂಡಾ ನೀಡಲಾಗುತ್ತದೆ. ಈ ಯೋಜನೆಯ ಸಿಂಧುತ್ವವು ನಿಮ್ಮ ಅಸ್ತಿತ್ವದಲ್ಲಿರುವ ಪ್ಲಾನ್ ಮಾನ್ಯತೆಗೆ ಸಮಾನವಾಗಿರುತ್ತದೆ.

ಏರ್‌ಟೆಲ್  99 ರೂ ರೀಚಾರ್ಜ್ ಯೋಜನೆ :
ಏರ್‌ಟೆಲ್ ಅತ್ಯಂತ ಅಗ್ಗದ ಪ್ರಿಪೇಯ್ಡ್ ಪ್ಲಾನ್ (Airtel prepaid plan) ಅನ್ನು ಸಹ ಹೊಂದಿದೆ. ಇದರ ಬೆಲೆ 99 ರೂ. ಈ ಯೋಜನೆ ಅಡಿಯಲ್ಲಿ, 200MB ಡೇಟಾ, 99ರೂ.  ಟಾಕ್ ಟೈಮ್,  1 ರೂ.ಗೆ ಸ್ಥಳೀಯ SMS ಮತ್ತು 1.5ರೂ ಗೆ ಎಸ್ಟಿಡಿ ಎಸ್ಎಂಎಸ್ ಪ್ರಯೋಜನಗಳು ಸಿಗಲಿದೆ. 28 ದಿನಗಳ ವ್ಯಾಲಿಡಿಟಿ (Validity) ಹೊಂದಿರುವ ಈ ಯೋಜನೆಯು ದೇಶದ ಅತ್ಯಂತ ಕೈಗೆಟುಕುವ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯು ಈ ಹಿಂದೆ  79 ರೂಪಾಯಿಗೆ ಲಭ್ಯವಿತ್ತು, ಈಗ ಇದನ್ನೂ 99 ರೂ.ಗೆ ಏರಿಸಲಾಗಿದೆ.  

ಇದನ್ನೂ ಓದಿ :  ನಿಮ್ಮ ಫೋನ್‌ನಲ್ಲಿ pre-installed ಅಪ್ಲಿಕೇಶನ್‌ಗಳಿಂದ ಬೇಸತ್ತಿದ್ದೀರಾ? delete ಮಾಡುವ ಸುಲಭ ಮಾರ್ಗ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News