Airtel Add-On Data Pack : ಏರ್‌ಟೆಲ್ ಬಳಕೆದಾರರಿಗೆ ಸಿಹಿ ಸುದ್ದಿ! ಕಡಿಮೆ ಹಣಕ್ಕೆ ಅನಿಯಮಿತ ಹೊಸ ಡೇಟಾ ಪ್ಲಾನ್ ಬಿಡುಗಡೆ ಮಾಡಿದ Airtel

ದೇಶದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ (Airtel)ತನ್ನ ಗ್ರಾಹಕರಿಗೆ ಹೊಸ ಆಡ್-ಆನ್ ಪ್ಲಾನ್ ಅನ್ನು ತಂದಿದೆ. ಈ ಯೋಜನೆಯ ನಿಯಮಗಳು ಮತ್ತು ಪ್ರಯೋಜನಗಳೇನು ಎಂಬುದನ್ನು ನೋಡೋಣ ...

Written by - Channabasava A Kashinakunti | Last Updated : Sep 10, 2021, 12:30 PM IST
  • ಏರ್‌ಟೆಲ್ ಹೊಸ ಆಡ್-ಆನ್ ಡೇಟಾ ಪ್ಯಾಕ್ ಬಿಡುಗಡೆ
  • 119 ರೂ.ಗೆ 15GB ಹೈಸ್ಪೀಡ್ ಡೇಟಾ ನೀಡುತ್ತದೆ
  • ಇದರೊಂದಿಗೆ Xstream ಮೊಬೈಲ್ ಅಪ್ಲಿಕೇಶನ್‌ನ 30 ದಿನಗಳ ಚಂದಾದಾರಿಕೆ Free
Airtel Add-On Data Pack : ಏರ್‌ಟೆಲ್ ಬಳಕೆದಾರರಿಗೆ ಸಿಹಿ ಸುದ್ದಿ! ಕಡಿಮೆ ಹಣಕ್ಕೆ ಅನಿಯಮಿತ ಹೊಸ ಡೇಟಾ ಪ್ಲಾನ್ ಬಿಡುಗಡೆ ಮಾಡಿದ Airtel title=

ನವದೆಹಲಿ : ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಟೆಲಿಕಾಂ ಕಂಪನಿಗಳು ಸಹ ಈ ರೇಸ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ಪರಸ್ಪರ ಮುಂದೆ ಬರಲು ತೊಡಗಿಕೊಂಡಿವೆ. ಇತರರಿಗಿಂತ ತಮ್ಮನ್ನು ತಾವು ಉತ್ತಮವೆಂದು ಸಾಬೀತುಪಡಿಸಲು ಮತ್ತು ಗ್ರಾಹಕರನ್ನು ತಮ್ಮ ಕಂಪನಿ ಮತ್ತು ಅವರ ಯೋಜನೆಗಳತ್ತ ಆಕರ್ಷಿಸಲು, ಟೆಲಿಕಾಂ ಕಂಪನಿಗಳು ಹೊಸ ಯೋಜನೆಗಳನ್ನು ರೂಪಿಸುತ್ತವೆ. ಏರ್‌ಟೆಲ್ ಕೂಡ ಇದೇ ರೀತಿ ಮಾಡುತ್ತಿದೆ. ದೇಶದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್‌ಟೆಲ್ (Airtel)ತನ್ನ ಗ್ರಾಹಕರಿಗೆ ಹೊಸ ಆಡ್-ಆನ್ ಪ್ಲಾನ್ ಅನ್ನು ತಂದಿದೆ. ಈ ಯೋಜನೆಯ ನಿಯಮಗಳು ಮತ್ತು ಪ್ರಯೋಜನಗಳೇನು ಎಂಬುದನ್ನು ನೋಡೋಣ ...

ಹೊಸ ಆಡ್-ಆನ್ ಹೊಸ ಡೇಟಾ ಪ್ಯಾಕ್ ಬಿಡುಗಡೆ ಮಾಡಿದ ಏರ್‌ಟೆಲ್ 

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಪ್ಯಾಕ್(Xstream Mobile Pack) ಹೆಸರಿನ ಹೊಸ ಆಡ್-ಆನ್ ಡೇಟಾ ಪ್ಯಾಕ್ ಅನ್ನು ಬಿಡುಗಡೆ ಮಾಡಿದೆ, ಇದು ಏರ್‌ಟೆಲ್‌ನ ಪ್ರಿಪೇಯ್ಡ್ ಗ್ರಾಹಕರಿಗೆ ಮಾತ್ರ. 119 ರೂ. ಗಳ ಈ ಯೋಜನೆಯಲ್ಲಿ, ಏರ್‌ಟೆಲ್ ತನ್ನ ಗ್ರಾಹಕರಿಗೆ 15 ಜಿಬಿ ಹೈ ಸ್ಪೀಡ್ ಇಂಟರ್‌ನೆಟ್ ನೀಡುತ್ತದೆ. ಇದರ ಜೊತೆಗೆ, ಬಳಕೆದಾರರು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮೊಬೈಲ್ ಆಪ್‌ನ ಯಾವುದೇ ಮೂರು ಚಾನೆಲ್‌ಗಳಿಗೆ 30 ದಿನಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ : Whatsapp: ಈ ಟ್ರಿಕ್ ಮೂಲಕ ಸಮಯ ಮಿತಿ ಮುಗಿದ ನಂತರವೂ ವಾಟ್ಸಾಪ್ ಸಂದೇಶಗಳನ್ನು Delete ಮಾಡಬಹುದು

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಚಂದಾದಾರಿಕೆ

ಈ ಆಪ್‌(Airtel Xstream Mobile App)ನ ವಿಷಯವನ್ನು ಮೂರು ಚಾನೆಲ್‌ಗಳಾಗಿ ವಿಂಗಡಿಸಲಾಗಿದೆ. ಹಿಂದಿ ವಿಷಯಕ್ಕಾಗಿ ಎರೋಸ್ ನೌ, ಮಲಯಾಳಂ ಗಾಗಿ ಮನೋರಮಾ-ಮ್ಯಾಕ್ಸ್ ಮತ್ತು ಬಂಗಾಳಿ ವಿಷಯಕ್ಕಾಗಿ ಹೋಯ್ಚೊಯ್ ಚಾನೆಲ್. ಈ ಆಡ್-ಆನ್ ಡೇಟಾ ಪ್ಯಾಕ್‌ನಲ್ಲಿ, ನೀವು ಈ ಮೂರು ಚಾನಲ್‌ಗಳಲ್ಲಿ ಯಾವುದಾದರೂ ಒಂದು ಚಂದಾದಾರಿಕೆಯನ್ನು 30 ದಿನಗಳವರೆಗೆ ಪಡೆಯಬಹುದು. ಈ ಪ್ಯಾಕ್ ತೆಗೆದುಕೊಂಡ ನಂತರ, ನೀವು ಈ ಆಪ್ ಅನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್ ಮಾಡಿ ಅಥವಾ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಿ ಮತ್ತು ನಂತರ ಈ ಚಂದಾದಾರಿಕೆಯನ್ನು ಆನಂದಿಸಿ.

ಈ ಆಡ್-ಆನ್ ಪ್ಯಾಕ್‌ನ ವ್ಯಾಲಿಡಿಟಿ

ಆಡ್-ಆನ್ ಡೇಟಾ ಪ್ಯಾಕ್(Airtel Add-On Data Pack) ಆಗಿರುವುದರಿಂದ ಈ ಪ್ಯಾಕ್ ತನ್ನದೇ ಆದ ಮಾನ್ಯತೆಯನ್ನು ಹೊಂದಿಲ್ಲ. ಇದರ ವ್ಯಾಲಿಡಿಟಿ ನಿಮ್ಮ ಫೋನಿನಲ್ಲಿ ಚಾಲನೆಯಲ್ಲಿರುವ ಬೇಸ್ ಪ್ಲಾನ್ ನ ವ್ಯಾಲಿಡಿಟಿಗೆ ಸಮಾನವಾಗಿರುತ್ತದೆ. ನೀವು ಏರ್‌ಟೆಲ್ ಚಂದಾದಾರರಾಗಿದ್ದರೆ ಮತ್ತು ಈ ಆಡ್-ಆನ್ ಡೇಟಾ ಪ್ಯಾಕ್ ಅನ್ನು ಖರೀದಿಸಲು ಬಯಸಿದರೆ, ನೀವು ಅದನ್ನು ಏರ್‌ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಅಥವಾ ಯಾವುದೇ ಥರ್ಡ್-ಪಾರ್ಟಿ ರೀಚಾರ್ಜ್ ಪೋರ್ಟಲ್ ಮೂಲಕ ಮಾಡಬಹುದು.

ಇದನ್ನೂ ಓದಿ : IIIF150: 8 ಗಂಟೆಗಳ ಕಾಲ ನೀರಿನಲ್ಲಿ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್, ಅಗ್ಗದ ದರದಲ್ಲಿ ಹಲವು ವೈಶಿಷ್ಟ್ಯ

ಕಳೆದ ತಿಂಗಳು ಮಾತ್ರ ಏರ್‌ಟೆಲ್ ತನ್ನ ಕೆಲವು ಪ್ರಿಪೇಯ್ಡ್ ಪ್ಲಾನ್ ಗಳ ಬೆಲೆಯನ್ನು ಹೆಚ್ಚಿಸಿದೆ ಮತ್ತು ಡಿಸ್ನಿ + ಹಾಟ್ ಸ್ಟಾರ್ ನ ಪ್ಲಾನ್ ಗಳನ್ನು ಕೂಡ ಅಪ್ಡೇಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News