Amazon Prime Day 2022: ಜುಲೈ 23 ರಿಂದ ಗೃಹ ಬಳಕೆ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ, ಈ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್

ಜುಲೈ 23 ರಿಂದ  Amazon Prime Day 2022 ಸೇಲ್ ಪ್ರಾರಂಭವಾಗುತ್ತದೆ. ಈ ಮಾರಾಟದ ಸಮಯದಲ್ಲಿ,  Amazon ನಲ್ಲಿ ಮೊಬೈಲ್ ಫೋನ್‌ಗಳು, Amazon ಸಾಧನಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರೀ ರಿಯಾಯಿತಿಗಳನ್ನು  ನೀಡಲಾಗುತ್ತಿದೆ. 

Written by - Ranjitha R K | Last Updated : Jul 21, 2022, 10:34 AM IST
  • ಎರಡು ದಿನಗಳ ಅಮೆಜಾನ್ ಪ್ರೈಮ್ ಸೇಲ್
  • ಪ್ರೈಮ್ ಸದಸ್ಯರಿಗೆ ಕಂಪನಿಯಿಂದ ವಿಶೇಷ ಆಫರ್
  • ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಉಚಿತವಾಗಿ ಪಡೆಯುವುದು ಹೇಗೆ ?
 Amazon Prime Day 2022: ಜುಲೈ 23 ರಿಂದ ಗೃಹ ಬಳಕೆ ವಸ್ತುಗಳ ಮೇಲೆ ಆಫರ್ ಗಳ ಸುರಿಮಳೆ, ಈ ವಸ್ತುಗಳ ಮೇಲೆ ಬಂಪರ್ ಡಿಸ್ಕೌಂಟ್  title=
Amazon Prime Day 2022 (file photo)

Amazon Prime Day 2022 Sale : ಅಮೆಜಾನ್ ಪ್ರೈಮ್ ಡೇ 2022 ಸೇಲ್ ಜುಲೈ 23 ರಿಂದ ಪ್ರಾರಂಭವಾಗಲಿದೆ. ಈ   ಸೇಲ್ ನಲ್ಲಿ  Amazonನಲ್ಲಿ ಮೊಬೈಲ್ ಫೋನ್‌ಗಳು, Amazon ಸಾಧನಗಳು, ಟಿವಿ ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ 2 ದಿನಗಳವರೆಗೆ ನಡೆಯುತ್ತದೆ. ಪ್ರೈಮ್ ಸದಸ್ಯರಿಗೆ ಕಂಪನಿಯಿಂದ  ವಿಶೇಷ ಆಫರ್ ಗಳನ್ನೂ ಕೂಡಾ ನೀಡಲಾಗುತ್ತದೆ. ಈ ಸೇಲ್ ನ ಪ್ರಯೋಜನ  ಪಡೆಯಬೇಕಾದರೆ ತಕ್ಷಣವೇ ಪ್ರೈಮ್ ಸದಸ್ಯತ್ವವನ್ನು  ಪಡೆದುಕೊಳ್ಳಬೇಕು.  ಕೆಲವೊಂದು ಟ್ರಿಕ್ಸ್ ಬಳಸುವ ಮೂಲಕ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಬಹುತೇಕ ಉಚಿತವಾಗಿ ಪಡೆಯಬಹುದು.

1. Amazon ಮೂಲಕ : 
ಉಚಿತ ಪ್ರೈಮ್ ಸದಸ್ಯತ್ವಕ್ಕಾಗಿ, ನೀವು Amazon Prime ವೀಡಿಯೊದ 30 ದಿನಗಳ  ಫ್ರೀ ಟ್ರಯಲ್ ತೆಗೆದುಕೊಳ್ಳಬೇಕಾಗುತ್ತದೆ. ಈ ಸೌಲಭ್ಯವು ಮೊದಲ ಬಾರಿಗೆ ನೋಂದಾಯಿಸುವವರಿಗೆ ಮಾತ್ರ ಲಭ್ಯವಿರುತ್ತದೆ. ಇದಕ್ಕೂ ಮೊದಲು ನೀವು ಅಮೆಜಾನ್ ಪ್ರೈಮ್‌ನ ಸದಸ್ಯರಾಗಿದ್ದರೆ  ಫ್ರೀ ಟ್ರಯಲ್ ಪ್ರಯೋಜನವನ್ನು ಪಡೆಯುವುದು  ಸಾಧ್ಯವಾಗುವುದಿಲ್ಲ. ಹೊಸದಾಗಿ ನೋಂದಾಯಿಸಿದರೆ  ಸುಲಭವಾಗಿ 30 ದಿನಗಳವರೆಗೆ ಫ್ರೀ ಟ್ರಯಲ್ ಪಡೆಯಬಹುದು.  ಈ ಮೂಲಕ ಎರಡು ದಿನಗಳ  ಸೇಲ್ ನ ಲಾಭವನ್ನು ಕೂಡಾ ಪಡೆಯಬಹುದು.

ಇದನ್ನೂ ಓದಿ : 32 ಇಂಚಿನ ಸ್ಮಾರ್ಟ್ ಟಿವಿಯನ್ನು 15,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

2. ಏರ್‌ಟೆಲ್, ಜಿಯೋ ಮತ್ತು  ವಿಐ  ಮೂಲಕ :
ಟೆಲಿಕಾಂ ಕಂಪನಿ ಏರ್‌ಟೆಲ್, ಜಿಯೋ ಮತ್ತು ವಿಐ ತನ್ನ ಗ್ರಾಹಕರಿಗೆ ಅನೇಕ ರೀಚಾರ್ಜ್ ಪ್ಯಾಕ್‌ಗಳೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಒದಗಿಸುತ್ತದೆ. ಏರ್‌ಟೆಲ್ 349 ರೂ, 499 ರೂ, 749 ರೂ, 999 ರೂ ಮತ್ತು  1,5 99 ಯೋಜನೆಗಳಲ್ಲಿ ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ನೀಡುತ್ತದೆ.  ಜಿಯೋ ತನ್ನ ಗ್ರಾಹಕರಿಗೆ  399 ರೂ, 599 ರೂ 799 ರೂ. 899 ರೂ. 1,499 ರೂ ಪೋಸ್ಟ್‌ಪೇಯ್ಡ್ ಪ್ಲಸ್  ಯೋಜನೆಗಳಲ್ಲಿ ಈ ಸೌಲಭ್ಯವನ್ನು ಒದಗಿಸುತ್ತದೆ. ಇನ್ನು Vi ಬಗ್ಗೆ ಹೇಳುವುದಾದರೆ, 499 ರೂ, 699 ರೂ ಮತ್ತು  1,099 ರೂ  ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಅಮೆಜಾನ್ ಪ್ರೈಮ್ ಚಂದಾದಾರಿಕೆಯನ್ನು ಪಡೆಯಬಹುದು.

ಇದನ್ನೂ ಓದಿ :  ಅಗ್ಗದ ಬೆಲೆಯಲ್ಲಿ ಬೊಂಬಾಟ್ ಯೋಜನೆ ಪರಿಚಯಿಸಿದ ಜಿಯೋ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News