Android 12 Launch: Google ನಿಂದ ಅಂಡ್ರಾಯಿಡ್ 12 ಬಿಡುಗಡೆ, ಮೊದಲು ಯಾವ ಡಿವೈಸ್ ಗೆ ಅಪ್ಡೇಟ್ ಸಿಗಲಿದೆ?

Android 12 Launch: ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂ ಅನ್ನು ಗೂಗಲ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಕಂಪನಿಯು ಮೇ ತಿಂಗಳಿನಲ್ಲಿ ಆಂಡ್ರಾಯ್ಡ್ 12 ರ ಬೀಟಾ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.

Written by - Nitin Tabib | Last Updated : Oct 5, 2021, 07:45 PM IST
  • Android ಬಳಕೆದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Google.
  • ಎಲ್ಲಾ ಬಳಕೆದಾರರಿಗೆ Android 12 ಆವೃತ್ತಿಯ ಅಧಿಕೃತ ಬಿಡುಗಡೆ
  • ಕಳೆದ ಮೇ ತಿಂಗಳಿನಲ್ಲಿ ಒಟ್ಟು 2.25 ಲಕ್ಷ ಬೀಟಾ ಬಳಕೆದಾರರಿಗೆ ಗೂಗಲ್ ಅಂಡ್ರಾಯಿಡ್ 12 ಬಿಡುಗಡೆ ಮಾಡಿತ್ತು.
Android 12 Launch: Google ನಿಂದ ಅಂಡ್ರಾಯಿಡ್ 12 ಬಿಡುಗಡೆ, ಮೊದಲು ಯಾವ ಡಿವೈಸ್ ಗೆ ಅಪ್ಡೇಟ್ ಸಿಗಲಿದೆ? title=
Android 12 Launch (File Photo)

Android 12 Update: ಆಂಡ್ರಾಯ್ಡ್ ಬಳಕೆದಾರರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ವಿಶ್ವದ ಸರ್ಚ್ ಇಂಜಿನ್ ದೈತ್ಯ ಗೂಗಲ್ (Google) ಆಂಡ್ರಾಯ್ಡ್ ಬಳಕೆದಾರರಿಗಾಗಿ ಇತ್ತೀಚಿನ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂ ಅನ್ನು ಗೂಗಲ್ ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿಯು ಈ ಮೊದಲು ಆಂಡ್ರಾಯ್ಡ್ 12 ನ ಬೀಟಾ ಆವೃತ್ತಿಯನ್ನು (Android 12 Beta Version) ಮೇ ತಿಂಗಳಲ್ಲಿ ಬಿಡುಗಡೆ ಮತ್ತು. ಬೀಟಾ ಆವೃತ್ತಿ ಬಿಡುಗಡೆಯಾದ ತಕ್ಷಣ, ಬಳಕೆದಾರರು ಅದರ ಸಂಪೂರ್ಣ ಅಧಿಕೃತ ಬಿಡುಗಡೆಗಾಗಿ ಭಾರಿ ಕಾತರರಾಗಿದ್ದರು. ಆದರೆ, ಇಂದು ಗೂಗಲ್ ಬಳಕೆದಾರರ ನಿರೀಕ್ಷೆಗೆ ತೆರೆಎಳೆದಿದೆ.

2.25 ಲಕ್ಷ ಬಳಕೆದಾರರು ಬೀಟಾ ಆವೃತ್ತಿಯನ್ನು ಬಳಸುತ್ತಿದ್ದಾರೆ
ಆಂಡ್ರಾಯ್ಡ್ ಡೆವಲಪರ್‌ಗಳ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರಕಾರ, ಗೂಗಲ್ ಬಳಕೆದಾರರಿಗಾಗಿ ಆಂಡ್ರಾಯ್ಡ್ 12 ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ತನ್ನ ಬ್ಲಾಗ್‌ನಲ್ಲಿ ಇದುವರೆಗೆ ಸುಮಾರು 2.25 ಲಕ್ಷಕ್ಕೂ ಹೆಚ್ಚು ಬಳಕೆದಾರರು ತನ್ನ ಬೀಟಾ ಆವೃತ್ತಿಯನ್ನು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಎಲ್ಲಕ್ಕಿಂತ ಮೊದಲು ಈ ಡಿವೈಸ್ ಗಳಲ್ಲಿ ಅಪ್ಡೇಟ್ ಸಿಗಲಿದೆ
ಈ ಕುರಿತು ತನ್ನ ಅಧಿಕೃತ ಬ್ಲಾಗ್ ನಲ್ಲಿ ಹೇಳಿಕೊಂಡಿರುವ ಕಂಪನಿ,  ಗೂಗಲ್ ಪಿಕ್ಸೆಲ್ ಸ್ಮಾರ್ಟ್ ಫೋನ್ ಗಳು ಮೊದಲು ಆಂಡ್ರಾಯ್ಡ್ 12 ನ ಅಪ್ ಡೇಟ್  ಪಡೆಯಲಿವೆ ಎಂದು ಮಾಹಿತಿ ನೀಡಿದೆ. ಕಂಪನಿಯು ಮುಂದಿನ ಕೆಲವು ವಾರಗಳಲ್ಲಿ ಪಿಕ್ಸೆಲ್ ಸರಣಿ ಸ್ಮಾರ್ಟ್ಫೋನ್ಗಳಿಗಾಗಿ New OS Update ಹೊರತರಲಿದೆ. ಆದರೆ, ಇದುವರೆಗೆ ಅದರ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಯಾವ ಸ್ಮಾರ್ಟ್‌ಫೋನ್‌ಗಳು ಮೊದಲ ನವೀಕರಣವನ್ನು ಪಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Google Pixel 5
Google Pixel 5a
Google Pixel 4
Google Pixel 4a 5G
Google Pixel 4a
Google Pixel 4XL
Google Pixel 3
Google Pixel 3XL
Google Pixel 3a
Google Pixel 2
Google Pixel 2XL

ಇದನ್ನೂ ಓದಿ-WhatsApp ನಲ್ಲಿ online ನಲ್ಲಿ ನೋಡದೆ ಮೆಸೇಜ್ ಗಳಿಗೆ ಪ್ರತಿಕ್ರಿಯಿಸುವುದು ಹೇಗೆ?

Android 12ರಲ್ಲಿ ಸಿಗಲಿವೆ ಈ ವೈಶಿಷ್ಟ್ಯಗಳು (Android 12 Features)
Android 12 ನಲ್ಲಿ ಈ ಬಾರಿ ಬಳಕೆದಾರರಿಗೆ ಪ್ರೈವೆಸಿಯ ಲಾಭ ಸಿಗಲಿದೆ. ಇದಲ್ಲದೆ ಬಳಕೆದಾರರಿಗೆ ಹೊಸ ಡಿಸೈನ್ ಹಾಗೂ ಹೊಸ ಕಸ್ಟಮೈಸ್ದ್  ವೈಶಿಷ್ಟ್ಯಗಳೂ ಕೂಡ ನೋಡಲು ಸಿಗಲಿವೆ. ಇದಲ್ಲದೆ ಕಂಪನಿ, Gmail, Google Calender, Google meet, Google Docs ಅನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ-Alert : ಹಬ್ಬದ ಋತುವಿನಲ್ಲಿ online shopping ಮಾಡುವ ಮುನ್ನ ಜೋಪಾನ..! ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ

ಜೊತೆಗೆ ಕಂಪನಿ ಅಂಡ್ರಾಯಿಡ್ 12 ರಲ್ಲಿ ಹೊಸ ಪ್ರೈವೆಸಿ ಡ್ಯಾಶ್ ಬೋರ್ಡ್ ಕೂಡ ನೀಡಿದೆ. ತನ್ಮೂಲಕ ಬಳಕೆದಾರರು ತಮ್ಮ ಯಾವ ಡೇಟಾ ಯಾವ ಕೆಲಸಕ್ಕಾಗಿ ಆಕ್ಸಸ್ ಮಾಡಲಾಗಿದೆ ಎಂಬುದನ್ನು ತಿಳಿಯಬಹುದು. ಬಳಕೆದಾರರು ನೇರವಾಗಿ ಡ್ಯಾಶ್ ಬೋರ್ಡ್ ನಿಂದ ಅನುಮತಿಯನ್ನು ಕೂಡ ನಿರಾಕರಿಸಬಹುದು.

ಇದನ್ನೂ ಓದಿ-Space Factory:ಬಾಹ್ಯಾಕಾಶದಿಂದ ನಿಮ್ಮ ಮನೆಗೆ ಬರಲಿದೆ ಸರಕು, ನಿರ್ಮಾಣಗೊಳ್ಳುತ್ತಿದೆ ಈ ಫ್ಯಾಕ್ಟರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News