FASTag ರಿಚಾರ್ಜ್ ಮಾಡುವಾಗ ಎಚ್ಚರ! ಇಲ್ಲವೇ, ಪಂಗನಾಮ ಗ್ಯಾರಂಟಿ

FASTag Scam: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ವಂಚಕರೂ ಕೂಡ ವಂಚನೆಗಾಗಿ ಹೊಸ ಹೊಸ ಮಾರ್ಗಗಳನ್ನು ಕಂಡು ಕೊಳ್ಳುತ್ತಿದ್ದಾರೆ. ಮಂಗಳೂರಿನಲ್ಲಿ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

Written by - Yashaswini V | Last Updated : Feb 3, 2023, 11:07 AM IST
  • ಉಡುಪಿಯ ಬ್ರಹ್ಮಾವರದ ಫ್ರಾನ್ಸಿಸ್ ಪಯಸ್ ಎಂಬಾತ ಜನವರಿ 29ರಂದು ತಮ್ಮ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು.
  • ಟೋಲ್ ಪ್ಲಾಜಾವನ್ನು ತಲುಪಿದಾಗ, ಅವರ ಫಾಸ್ಟ್‌ಟ್ಯಾಗ್ ಕಾರ್ಡ್‌ನಲ್ಲಿ ಬ್ಯಾಲೆನ್ಸ್ ಕೊರತೆ ಇತ್ತು.
  • ಈ ಸಮಯದಲ್ಲಿ ಟೋಲ್ ಪಾವತಿಗಾಗಿ ಅವರು ಸಹಾಯವಾಣಿ ಸಂಖ್ಯೆಯನ್ನು ಸರ್ಚ್ ಮಾಡಿದ್ದಾರೆ.
FASTag ರಿಚಾರ್ಜ್ ಮಾಡುವಾಗ ಎಚ್ಚರ! ಇಲ್ಲವೇ, ಪಂಗನಾಮ ಗ್ಯಾರಂಟಿ
FASTag Scam

FASTag Scam: ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಸೈಬರ್ ವಂಚಕರು ಜನರನ್ನು ಮೋಸ ಮಾಡಲು ಹೊಸ ಹೊಸ ಮಾರ್ಗಗಳನ್ನು ಕಂಡು ಕೊಳ್ಳುತ್ತಿದ್ದಾರೆ. ಇದೀಗ, ಫಾಸ್ಟ್‌ಟ್ಯಾಗ್ ರೀಚಾರ್ಜ್ ನಲ್ಲಿಯೂ ಸೈಬರ್ ಅಪರಾಧ ಪ್ರಕರಣವೊಂದು ಮುನ್ನಲೆಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವಾಗ ವ್ಯಕ್ತಿಯೊಬ್ಬರು ಬರೋಬ್ಬರಿ  ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ರಾಜ್ಯದ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವಾಗ ಸ್ವಲ್ಪ ಯಾಮಾರಿದರೂ ಪಂಗನಾಮ ಗ್ಯಾರಂಟಿ!
ವಾಸ್ತವವಾಗಿ, ಉಡುಪಿಯ ಬ್ರಹ್ಮಾವರದ ಫ್ರಾನ್ಸಿಸ್ ಪಯಸ್ ಎಂಬಾತ ಜನವರಿ 29ರಂದು ತಮ್ಮ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿದ್ದರು. ಟೋಲ್ ಪ್ಲಾಜಾವನ್ನು ತಲುಪಿದಾಗ, ಅವರ ಫಾಸ್ಟ್‌ಟ್ಯಾಗ್ ಕಾರ್ಡ್‌ನಲ್ಲಿ ಬ್ಯಾಲೆನ್ಸ್ ಕೊರತೆ ಇತ್ತು. ಈ ಸಮಯದಲ್ಲಿ ಟೋಲ್ ಪಾವತಿಗಾಗಿ ಅವರು ಸಹಾಯವಾಣಿ ಸಂಖ್ಯೆಯನ್ನು ಸರ್ಚ್ ಮಾಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಕಂಡ ನಂಬರ್ ಪಡೆದು ರೀಚಾರ್ಜ್ ಮಾಡಲು ಕರೆ ಮಾಡಿದ್ದಾರೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಪೇಟಿಎಂ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಲು ಫೋನ್‌ನಲ್ಲಿ ಬರುವ ಒಟಿಪಿಯನ್ನು ಹಂಚಿಕೊಳ್ಳುವಂತೆ ಪಯಾಸ್‌ ಅವರಿಗೆ ಕೇಳಿದ್ದಾನೆ. ಅವರ ಸಲಹೆಯಂತೆ ಪಯಾಸ್ ಒಟಿಪಿ ಹಂಚಿಕೊಂಡಿದ್ದಾರೆ. ಬಳಿಕ ಹಲವು ಬಾರಿ ಖಾತೆಯಿಂದ ಹಣ ಕಡಿತಗೊಂಡಿದೆ.

ಇದನ್ನೂ ಓದಿ- FASTag: ನಿಮ್ಮ ಕಾರನ್ನು ಸಹ ಮಾರಾಟ ಮಾಡುತ್ತಿದ್ದೀರಾ? ಅದಕ್ಕೂ ಮುನ್ನ ಫಾಸ್ಟ್‌ಟ್ಯಾಗ್‌ನ್ನು ಏನು ಮಾಡಬೇಕೆಂದು ಗೊತ್ತಿರಲಿ

ಪಯಾಸ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಖಾತೆಯಿಂದ ಮೊದಲು 49,000 ರೂ. ಕಡಿತಗೊಂಡಿದೆ. ನಂತರ, ಒಮ್ಮೆ, 19,999 ರೂ., ಇನ್ನೊಮ್ಮೆ 19,998 ರೂ., ಮತ್ತೊಮ್ಮೆ 9,999 ರೂ, ಮಗದೊಮ್ಮೆ 1,000 ರೂ. ಹೀಗೆ ಒಟ್ಟು 99,997 ರೂಪಾಯಿಗಳು ಕಡಿತಗೊಂಡಿದೆ. ಬಳಿಕ ಪಯಾಸ್ ಅವರಿಗೆ ತಾವು ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೆಸರಿನಲ್ಲಿ ಮೋಸ ಹೋಗಿರುವುದು ಗೊತ್ತಾಗಿದೆ. ಇದರಿಂದ ತಕ್ಷಣವೇ ಎಚ್ಚೆತ್ತ ಪಯಾಸ್ ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇಂತಹ ವಂಚನೆಗಳು ತಪ್ಪಿಸುವುದು ಹೇಗೆ?
ಫಾಸ್ಟ್‌ಟ್ಯಾಗ್ ಇರಲಿ ಅಥವಾ ಬೇರೆ ಯಾವುದೇ ರೀಚಾರ್ಜ್ ಇರಲಿ ನೀವು ಸೈಬರ್ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ಸೂಚನೆಗಳನ್ನು ಅನುಸರಿಸುವುದು ಬಹಳ ಮುಖ್ಯ. 
* ಮೊದಲಿಗೆ ನೀವು ಕಸ್ಟಮರ್ ಕೇರ್‌ ಸಹಾಯವಾಣಿ ಸಂಖ್ಯೆಯನ್ನು ಹುಡುಕುವಾಗ ಆ ವೆಬ್‌ಸೈಟ್ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಮೊದಲು ಪರಿಶೀಲಿಸಿ. 
* ಸದಾ, ವೆಬ್‌ಸೈಟ್ ಪರೀಕ್ಷಕ ಅಥವಾ ಸುರಕ್ಷಿತ ಬ್ರೌಸಿಂಗ್ ಸಾಧನವನ್ನು ಬಳಸಿ.
* ಡೊಮೇನ್‌ನ ವಯಸ್ಸನ್ನು ಪರೀಕ್ಷಿಸಲು ಮರೆಯದಿರಿ.
* ನೀವು ಕಸ್ಟಮರ್ ಕೇರ್‌ಗೆ ಕರೆ ಮಾಡಿದರೆ, ಯಾವುದೇ ಪ್ರತಿನಿಧಿ ನಿಮ್ಮ ಬ್ಯಾಂಕ್ ವಿವರಗಳನ್ನು ಕೇಳುವುದಿಲ್ಲ ಎಂಬುದನ್ನು ಎಂದಿಗೂ ಮರೆಯಬೇಡಿ.

ಇದನ್ನೂ ಓದಿ- Toll Tax Collection with Number Plate: ಇನ್ಮುಂದೆ FasTag ಅಗತ್ಯವಿಲ್ಲ: ಈ ರೀತಿ ಮಾಡಿದ್ರೆ ಖಾತೆಯಿಂದ ಕಡಿತವಾಗುತ್ತೆ ಟೋಲ್ ಟ್ಯಾಕ್ಸ್

ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡುವುದು ಹೇಗೆ?
ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು  Paytm, ZeePay ಮತ್ತು PhonePe ಸೇರಿದಂತೆ ಯಾವುದೇ UPI ಅಪ್ಲಿಕೇಶನ್ ಅನ್ನು ಬಳಸಬಹುದು. ಇದಲ್ಲದೆ, ನೀವು ಮೊಬೈಲ್ ಬ್ಯಾಂಕಿಂಗ್ ಸಹಾಯದಿಂದಲೂ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News