tax ಹೆಸರಿನಲ್ಲಿನಿಮ್ಮ ಜೇಬಿಗೆ ಕತ್ತರಿ! ರೆಸ್ಟೋರೆಂಟ್ ಬಿಲ್ ಪಾವತಿ ಮುನ್ನ ಈ ಅಂಶವನ್ನು ಸರಿಯಾಗಿ ಚೆಕ್ ಮಾಡಿ

Resturants New Tax Scam :ತೆರಿಗೆ ಹೆಸರಿನಲ್ಲಿ ನಮ್ಮಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡಲಾಗುತ್ತದೆ. ಹಾಗಿದ್ದರೆ ಬಹುತೇಕ ರೆಸ್ಟೋರೆಂಟ್ ಗಳಲ್ಲಿ ಚಾಲ್ತಿಯಲ್ಲಿರುವ ಈ ಮೋಸದ ಬಗ್ಗೆ ನೀವು ತಿಳಿದುಕೊಂಡಿರಲೇ ಬೇಕು. 

Written by - Ranjitha R K | Last Updated : Jun 12, 2023, 01:11 PM IST
  • ಎಗ್ಗಿಲ್ಲದೆ ನಡೆಯುತ್ತಿದೆ ಈ ದರೋಡೆ
  • GST ಸಂಖ್ಯೆಯನ್ನು ನಮೂದಿಸಿರಲೇ ಬೇಕು
  • ನೀವು GST ಪಾವತಿಸಬೇಕೇ ಹೀಗೆ ಚೆಕ್ ಮಾಡಿ
tax ಹೆಸರಿನಲ್ಲಿನಿಮ್ಮ ಜೇಬಿಗೆ ಕತ್ತರಿ! ರೆಸ್ಟೋರೆಂಟ್ ಬಿಲ್ ಪಾವತಿ ಮುನ್ನ ಈ ಅಂಶವನ್ನು ಸರಿಯಾಗಿ ಚೆಕ್ ಮಾಡಿ title=

Resturants New Tax Scam : ಸಾಮಾನ್ಯವಾಗಿ ನಾವು ಸ್ನೇಹಿತರೊಂದಿಗೆ ಕುಟುಂಬ ಸದಸ್ಯರ ಜೊತೆಗೆ ರೆಸ್ಟೋರೆಂಟ್‌ಗಳಿಗೆ ಹೋಗುತ್ತೇವೆ. ಅಲ್ಲಿ ನಮಗೆ ಬೇಕಾದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿ ತಿನ್ನುತ್ತೇವೆ. ಕೊನೆಗೆ ಬಿಲ್ ನೀಡುವಾಗ ಕೇವಲ ಬಿಲ್ ಮೊತ್ತ ಎಷ್ಟು ಅಥವಾ ಯಾವ ಖಾದ್ಯಕ್ಕೆ ಎಷ್ಟು ಬಿಲ್ ಹಾಕಲಾಗಿದೆ ಎನ್ನುವುದನ್ನು ಗಮನಿಸಿ ಬಿಲ್ ಪಾವತಿಸಿ ಹೊರ ಬರುತ್ತೇವೆ. ಆದರೆ, ಇಲ್ಲಿ tax ಹೆಸರಿನಲ್ಲಿ ನಮ್ಮನ್ನು ದರೋಡೆ ಮಾಡುವುದನ್ನು ನಾವು ಸರಿಯಾಗಿ ಗಮನಿಸಿರುವುದಿಲ್ಲ. ಹೌದು, ತೆರಿಗೆ ಹೆಸರಿನಲ್ಲಿ ನಮ್ಮಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡಲಾಗುತ್ತದೆ. ಹಾಗಿದ್ದರೆ ಬಹುತೇಕ ರೆಸ್ಟೋರೆಂಟ್ ಗಳಲ್ಲಿ ಚಾಲ್ತಿಯಲ್ಲಿರುವ ಈ ಮೋಸದ ಬಗ್ಗೆ ನೀವು ತಿಳಿದುಕೊಂಡಿರಲೇ ಬೇಕು. 

ಎಗ್ಗಿಲ್ಲದೆ ನಡೆಯುತ್ತಿದೆ ಈ ದರೋಡೆ : 
ನೀವು ರೆಸ್ಟೋರೆಂಟ್‌ಗೆ ಹೋದಾಗ ಅಲ್ಲಿ ಸಾವಿರ ರೂಪಾಯಿ ಮೌಲ್ಯದ ಆಹಾರವನ್ನು ಸೇವಿಸಿದ್ದೀರಿ ಎಂದು ಭಾವಿಸೋಣ. ಅದಕ್ಕೆ , 2.5-2.5 ಪ್ರತಿಶತ CGST ಮತ್ತು SGST ತೆಗೆದುಕೊಳ್ಳಲಾಗುತ್ತದೆ. ಸಾವಿರ ರೂಪಾಯಿ ಪ್ರಕಾರ ಒಟ್ಟು 50 ರೂ. ವಸೂಲಿ ಮಾಡಲಾಗಿರುತ್ತದೆ. ಆದರೆ, ಈ  CGST ಮತ್ತು SGST ಪಾವತಿಸುವ ಮೊದಲು ಬಿಲ್ ನಲ್ಲಿ ಜಿಎಸ್‌ಟಿ ಸಂಖ್ಯೆಯನ್ನು ನಮೂದಿಸಲಾಗಿದೆಯೇ ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ಬಿಲ್ ನಲ್ಲಿ SGST ನಂಬರ್ ನಮೂದಿಸಿದ್ದರೆ ಮಾತ್ರ ನೀವು CGST ಮತ್ತು SGST ಹಣವನ್ನು ಪಾವತಿಸಬೇಕು. ಇಲ್ಲವಾದರೆ ವಿನಾಕಾರಣ ನೀವು ಆ ಹಣವನ್ನು ಪಾವತಿಸುತ್ತಿದ್ದೀರಿ  ಎಂದರ್ಥ. 

ಇದನ್ನೂ ಓದಿ : ನಿಮ್ಮಲ್ಲಿ 2.5 ಲಕ್ಷ ರೂಪಾಯಿ ಇದ್ದರೆ ಸಾಕು Tata Nexon ಒಡೆಯರಾಗಬಹುದು! EMI ಮೂಲಕ ಪಾವತಿ ಹೇಗೆ ?

GST ಸಂಖ್ಯೆಯನ್ನು ನಮೂದಿಸಿರಲೇ ಬೇಕು :  
ನಿಯಮದ ಪ್ರಕಾರ 15 ಅಂಕಿಗಳ GST ಸಂಖ್ಯೆಯನ್ನು ಬರೆಯದಿದ್ದರೆ ರೆಸ್ಟೋರೆಂಟ್ ನಿಮಗೆ GST ವಿಧಿಸುವಂತಿಲ್ಲ. ಹಾಗಾಗಿ ಬಿಲ್ ಪಾವತಿಸುವ ಮುನ್ನ ಬಿಲ್ ನಲ್ಲಿ ಜಿಎಸ್‌ಟಿ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಿ. ಅಕ್ರಮವಾಗಿ ಜನರಿಂದ ಹಣ ವಸೂಲಿ ಮಾಡುತ್ತಿರುವ ಇಂತಹ ಲಕ್ಷಗಟ್ಟಲೆ ರೆಸ್ಟೋರೆಂಟ್‌ಗಳಿವೆ. ಬಿಲ್ ನಲ್ಲಿ  ಜಿಎಸ್‌ಟಿ ಸಂಖ್ಯೆ ನಮೂದಿಸಿದ್ದರೆ services.gst.gov.in ಗೆ ಹೋಗಿ ರೆಸ್ಟೋರೆಂಟ್‌ನ GSP ಸಂಖ್ಯೆಯನ್ನು ನಮೂದಿಸಿ. 

ನೀವು GST ಪಾವತಿಸಬೇಕೇ ಹೀಗೆ ಚೆಕ್ ಮಾಡಿ : 
GST ಸಂಖ್ಯೆಯನ್ನು ನಮೂದಿಸಿದ ನಂತರ, Enter ಬಟನ್ ಒತ್ತಿರಿ. ಅಲ್ಲಿ GSTIN/UIN ಸ್ಥಿತಿಯನ್ನು ಪರಿಶೀಲಿಸಬೇಕು. ಅದು ಸಕ್ರಿಯವಾಗಿದ್ದರೆ, ಆ ಹೊಟೇಲ್ ಗ್ರಾಹಕರ ಬಳಿಯಿಂದ  ಜಿಎಸ್‌ಟಿಯನ್ನು ಸಂಗ್ರಹಿಸಬಹುದು. ಒಂದು ವೇಳೆ ಅಲ್ಲಿ ಕ್ಯಾನ್ಸಲ್ ಎನ್ನುವುದು ಕಂಡು ಬಂದರೆ ರೆಸ್ಟೋರೆಂಟ್ ನಿಮ್ಮಿಂದ ತೆರಿಗೆ ಸಂಗ್ರಹಿಸುವುದು ಸಾಧ್ಯವಿಲ್ಲ. ಹಾಗಾಗಿ ನೀವು ತೆರಿಗೆ ಮೊತ್ತವನ್ನು ಪಾವತಿಸುವ ಅಗತ್ಯವೂ ಇಲ್ಲ. ಇಷ್ಟಾಗಿಯೂ ಜಿಎಸ್ಟಿ ಮೊತ್ತವನ್ನು ಪಾವತಿಸುವಂತೆ ರೆಸ್ಟೋರೆಂಟ್ ನಿಮ್ಮನ್ನು ಒತ್ತಾಯಿಸಿದರೆ, 18001200232 ಸಹಾಯವಾಣಿ ಸಂಖ್ಯೆ  ಗೆ ದೂರು ನೀಡಬಹುದು.

ಇದನ್ನೂ ಓದಿ : Asteroid: ಎಚ್ಚರ! ಇಂದು ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ ಬುರ್ಜ್ ಖಲೀಫಾ ಗಾತ್ರದ ಕ್ಷುದ್ರಗ್ರಹ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News