ನಿಮ್ಮಲ್ಲಿ 2.5 ಲಕ್ಷ ರೂಪಾಯಿ ಇದ್ದರೆ ಸಾಕು Tata Nexon ಒಡೆಯರಾಗಬಹುದು! EMI ಮೂಲಕ ಪಾವತಿ ಹೇಗೆ ?

Tata Nexon EMI Calculator:ಮಾರ್ಚ್ 2023ರಲ್ಲಿ, ಇದು 14 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಎರಡನೇ ಅತಿ ಹೆಚ್ಚು ಮಾರಾಟವಾದ SUV ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.  ಇದರೊಂದಿಗೆ ಈ ಕಾರಿನ ಜನಪ್ರಿಯತೆ ಯಾವ ರೀತಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಎನ್ನುವುದು ಸಾಬೀತಾಗುತ್ತದೆ. 

Written by - Ranjitha R K | Last Updated : Jun 12, 2023, 09:27 AM IST
  • ಟಾಟಾ ನೆಕ್ಸಾನ್ ದೇಶದ ಅತ್ಯಂತ ಜನಪ್ರಿಯ SUV
  • ಜನರು ತುಂಬಾ ಇಷ್ಟಪಡುವ ಕಾರುಗಳಲ್ಲಿ ಇದೂ ಒಂದು.
  • ಕಾರು ಹೊಂದಿರುವ ಶಕ್ತಿಶಾಲಿ ಎಂಜಿನ್, ಉತ್ತಮ ಮೈಲೇಜ್ ಇದಕ್ಕೆ ಕಾರಣ.
ನಿಮ್ಮಲ್ಲಿ 2.5 ಲಕ್ಷ  ರೂಪಾಯಿ ಇದ್ದರೆ ಸಾಕು Tata Nexon ಒಡೆಯರಾಗಬಹುದು! EMI ಮೂಲಕ ಪಾವತಿ ಹೇಗೆ ?  title=

Tata Nexon EMI Calculator : ಟಾಟಾ ನೆಕ್ಸಾನ್ ದೇಶದ ಅತ್ಯಂತ ಜನಪ್ರಿಯ SUV ಕಾರುಗಳಲ್ಲಿ ಒಂದಾಗಿದೆ. ಜನರು ತುಂಬಾ ಇಷ್ಟಪಡುವ ಕಾರುಗಳಲ್ಲಿ ಇದೂ ಒಂದು. ಈ ಕಾರು ಹೊಂದಿರುವ ಶಕ್ತಿಶಾಲಿ ಎಂಜಿನ್ ಮತ್ತು ನೀಡುವ ಉತ್ತಮ ಮೈಲೇಜ್ ಇದಕ್ಕೆ ಕಾರಣ. ಮಾರ್ಚ್ 2023ರಲ್ಲಿ, ಇದು 14 ಸಾವಿರಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಎರಡನೇ ಅತಿ ಹೆಚ್ಚು ಮಾರಾಟವಾದ SUV ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.  ಇದರೊಂದಿಗೆ ಈ ಕಾರಿನ ಜನಪ್ರಿಯತೆ ಯಾವ ರೀತಿಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಎನ್ನುವುದು ಸಾಬೀತಾಗುತ್ತದೆ. 

ಟಾಟಾ ನೆಕ್ಸನ್ ಬಗ್ಗೆ  ಒಂದಿಷ್ಟು ಮಾಹಿತಿ : 
ಟಾಟಾ ನೆಕ್ಸಾನ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಇದು 1.2L 3 ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ (110 PS/170 Nm) ಮತ್ತು 1.5L 4 ಸಿಲಿಂಡರ್ ಡೀಸೆಲ್ ಎಂಜಿನ್ (110 PS/260 Nm) ಆಯ್ಕೆಗಳನ್ನು ಹೊಂದಿದೆ. ಈ ಎರಡೂ ಎಂಜಿನ್‌ಗಳನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಗುತ್ತದೆ.

ಇದನ್ನೂ ಓದಿ : Asteroid: ಎಚ್ಚರ! ಇಂದು ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ ಬುರ್ಜ್ ಖಲೀಫಾ ಗಾತ್ರದ ಕ್ಷುದ್ರಗ್ರಹ

ಟಾಟಾ ನೆಕ್ಸಾನ್ ವೈಶಿಷ್ಟ್ಯಗಳು : 
ಟಾಟಾ ನೆಕ್ಸಾನ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ ಸಂಪರ್ಕವನ್ನು ಬೆಂಬಲಿಸುವ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಪಡೆಯುತ್ತದೆ. ಇದಲ್ಲದೆ, ಇದು ರೈನ್ ಸೆನ್ಸಿಂಗ್ ವೈಪರ್‌,  ರಿಯರ್ ಎಸಿ ವೆಂಟ್‌ಗಳು, ಆಟೋ ಎಸಿ, ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಟಾಟಾ ನೆಕ್ಸಾನ್‌ಗೆ ಡೌನ್ ಪೇಮೆಂಟ್ ಮತ್ತು ಇಎಂಐ  : 
ಟಾಟಾ ನೆಕ್ಸಾನ್‌ಗಾಗಿ ಡೌನ್ ಪೇಮೆಂಟ್ ಮತ್ತು ಇಎಂಐ  ಲೆಕ್ಕಾಚಾರ ಹೇಗಿರುತ್ತದೆ ನೋಡೋಣ. ಇದರ ಬೇಸ್ ವೆರಿಯೇಂಟ್ ಬೆಲೆ 7.80 ಲಕ್ಷ (ಎಕ್ಸ್ ಶೋ ರೂಂ). ಆದರೆ ಇದರ ಆನ್ ರೋಡ್ ಬೆಲೆ 8.75 ಲಕ್ಷ ರೂ. ಆಗುತ್ತದೆ. ಇದಕ್ಕಾಗಿ ನೀವು ಸಾಲವನ್ನು ಪಡೆಯಲು ಬಯಸಿದರೆ, 2.5 ಲಕ್ಷ ರೂ.ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಸಾಲದ ಮೊತ್ತ ಸುಮಾರು 6.25 ಲಕ್ಷ ರೂ. ಆಗುತ್ತದೆ.

ಇದನ್ನೂ ಓದಿ :  Parents Alert! ಆನ್ಲೈನ್ ಗೇಮ್ ಆಡಿ 52 ಲಕ್ಷ ರೂ. ಉಡಾಯಿಸಿದ 13 ವರ್ಷದ ಬಾಲಕಿ, 5 ರೂ.ಗಳಿಗೆ ಕುಸಿದ ತಾಯಿಯ ಖಾತೆಯ ಬ್ಯಾಲೆನ್ಸ್

ಈಗ ನೀವು ಈ ಸಾಲವನ್ನು 5 ವರ್ಷಗಳವರೆಗೆ ತೆಗೆದುಕೊಂಡಿದ್ದು,  ಬಡ್ಡಿದರವು ಶೇಕಡಾ 9 ಆಗಿದ್ದರೆ, ನೀವು ಪ್ರತಿ ತಿಂಗಳು ಸುಮಾರು 12,990 ರೂಗಳ EMIಯನ್ನು ಪಾವತಿಸಬೇಕಾಗುತ್ತದೆ. ಅಂದರೆ ನೀವು ಒಟ್ಟು 1.53 ಲಕ್ಷ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.  ಡೌನ್ ಪೇಮೆಂಟ್ ಹೊರತುಪಡಿಸಿ ಒಟ್ಟು 7.79 ಲಕ್ಷ ರೂ.ಗಳನ್ನು ಬ್ಯಾಂಕ್ ಗೆ ಪಾವತಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News