ಅಬ್ಬಬ್ಬಾ... ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 18 ಲಕ್ಷ: ಏನಿದರ ವಿಶೇಷತೆ!

ಬಿಎಂಡಬ್ಲ್ಯೂ ಸ್ಕೂಟರ್‌ಗಳ ಕುರಿತು ಹೇಳುವುದಾದರೆ, ಕಳೆದ ವರ್ಷ ಬಿಎಂಡಬ್ಲ್ಯೂ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದರ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಹೌದು ಈ ಒಂದು ಸ್ಕೂಟರ್‌ ಬೆಲೆ ಬರೋಬ್ಬರಿ 10.40 ಲಕ್ಷ ರೂ.

Written by - Bhavishya Shetty | Last Updated : Jul 19, 2022, 11:34 AM IST
  • ಭಾರತದಲ್ಲಿ ಬಿಎಂಡಬ್ಲ್ಯೂ ಮೋಟರ್‌ರಾಡ್‌ ತನ್ನ ಪೋರ್ಟ್‌ಫೋಲಿಯೊ ವಿಸ್ತರಿಸಲು ಚಿಂತನೆ
  • ಬಿಎಂಡಬ್ಲ್ಯೂ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು
  • ಈ ಒಂದು ಸ್ಕೂಟರ್‌ ಬೆಲೆ ಬರೋಬ್ಬರಿ 10.40 ಲಕ್ಷ ರೂ
ಅಬ್ಬಬ್ಬಾ... ಈ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 18 ಲಕ್ಷ: ಏನಿದರ ವಿಶೇಷತೆ!  title=
BMW

ಬಿಎಂಡಬ್ಲ್ಯೂ ಮೋಟರ್‌ರಾಡ್‌ (BMW Motorrad) ಭಾರತದಲ್ಲಿ ತನ್ನ ಮೋಟಾರ್‌ ಸೈಕಲ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಹೊಸ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಜರ್ಮನ್ ಬ್ರಾಂಡ್ ಆಗಿರುವ ಬಿಎಂಡಬ್ಲ್ಯೂ ಮೋಟರ್‌ರಾಡ್‌ ತನ್ನ ಎಲ್ಲಾ ಮೋಟಾರ್‌ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲು ಗುರಿಯನ್ನು ಹೊಂದಿದೆ. 

ಬಿಎಂಡಬ್ಲ್ಯೂ ಸ್ಕೂಟರ್‌ಗಳ ಕುರಿತು ಹೇಳುವುದಾದರೆ, ಕಳೆದ ವರ್ಷ ಬಿಎಂಡಬ್ಲ್ಯೂ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದರ ಬೆಲೆ ಕೇಳಿದ್ರೆ ದಂಗಾಗೋದು ಗ್ಯಾರಂಟಿ. ಹೌದು ಈ ಒಂದು ಸ್ಕೂಟರ್‌ ಬೆಲೆ ಬರೋಬ್ಬರಿ 10.40 ಲಕ್ಷ ರೂ.

ಇದನ್ನೂ ಓದಿ: ನ್ಯಾಯಾಂಗ ವಶಕ್ಕೆ ಚಂದ್ರಶೇಖರ ಗುರೂಜಿ ಹಂತಕರು

ಭಾರತದಲ್ಲಿ ಬಿಎಂಡಬ್ಲ್ಯೂ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್‌ನ ಯಶಸ್ಸು ಪ್ರೀಮಿಯಂ ಉತ್ಪನ್ನಕ್ಕೆ ಬಲವಾದ ಬೇಡಿಕೆಯಿದೆ ಎಂಬ ವಿಶ್ವಾಸವನ್ನು ನೀಡಿದೆ ಎಂದು ಬಿಎಂಡಬ್ಲ್ಯೂ ಗ್ರೂಪ್ ಇಂಡಿಯಾ ಅಧ್ಯಕ್ಷ ವಿಕ್ರಮ್ ಪವಾಹ್ ಹೇಳಿದ್ದಾರೆ. ಬಿಎಂಡಬ್ಲ್ಯೂ ಈಗ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ಯೋಜಿಸುತ್ತಿದೆ. ಎಲ್ಲವೂ ಸರಿಯಾಗಿ ನಡೆದರೆ, ಸಿಇ 04 ಎಲೆಕ್ಟ್ರಿಕ್ ಮ್ಯಾಕ್ಸಿ-ಸ್ಕೂಟರ್ ಅನ್ನು ಸಿಬಿಯು ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪ್ರಸ್ತುತ ಯುರೋಪ್‌ನಲ್ಲಿ ಮಾರಾಟಕ್ಕೆ ಲಭ್ಯವಿದ್ದು, ಅಲ್ಲಿಯೇ ತಯಾರು ಮಾಡಲಾಗುತ್ತಿದೆ. 

ಈ ಸ್ಕೂಟರ್‌ನಲ್ಲಿ ಅಳವಡಿಸಲಾದ ಬ್ಯಾಟರಿ ಬಗ್ಗೆ ಮಾಹಿತಿ ನೀಡುವುದಾದರೆ, ಇದು 8.9 ಕೆಡಬ್ಲ್ಯೂಎಚ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಓಲಾ ಎಸ್‌1 ಪ್ರೋನ ಬ್ಯಾಟರಿ ಪ್ಯಾಕ್‌ಗಿಂತ ಎರಡು ಪಟ್ಟು ಹೆಚ್ಚು ಇದೆ. ಈ ಬ್ಯಾಟರಿ ಪ್ಯಾಕ್ ಮೂಲಭೂತವಾಗಿ ಬಿಎಂಡಬ್ಲ್ಯೂನ ಐಎಕ್ಸ್‌ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಬರುವ 11 ಮಾಡ್ಯೂಲ್‌ಗಳಲ್ಲಿ ಒಂದಾಗಿದೆ. ಇದರ ಮೋಟಾರ್ 42 Bhp ಪವರ್ ಮತ್ತು 62 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಬಿಎಂಡಬ್ಲ್ಯು ಕಾರುಗಳಲ್ಲಿ ಕಂಡುಬರುವಂತೆ ಇದರಲ್ಲಿಯೂ ಸಹ 10.25 ಇಂಚಿನ ಪರದೆ ಇರಲಿದೆ. 

ಇದು 35 ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಸಿಂಗಲ್-ಸೈಡ್ ಸ್ವಿಂಗರ್ಮ್‌ನಲ್ಲಿ ಹಿಂಭಾಗದ ಆಫ್-ಸೆಟ್ ಮೊನೊ-ಶಾಕ್, ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಸೆಟಪ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್, ಬೆಲ್ಟ್-ಡ್ರೈವ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಸೆಟಪ್ ಅನ್ನು ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 120 ಕಿಮೀ ಆಗಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇದರ ತೂಕ 231 ಕೆಜಿ ಇದೆ.

ಇದನ್ನೂ ಓದಿ: ಭಾರತ-ಚೀನಾ ಗಡಿ ಬಳಿ ನಾಪತ್ತೆಯಾದ 18 ರಸ್ತೆ ಕಾರ್ಮಿಕರು: ಓರ್ವನ ಶವ ಪತ್ತೆ

ಇದನ್ನು ಆಮದು ಮೂಲಕ ಭಾರತದಲ್ಲಿ ಬಿಡುಗಡೆ ಮಾಡಿದರೆ ಅದರ ಬೆಲೆ 15 ಲಕ್ಷದಿಂದ 18 ಲಕ್ಷದ ನಡುವೆ ಇರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News