iPhone 16 Offers & Discounts: Apple ಅಂತಿಮವಾಗಿ iPhone 16 ಸರಣಿಯನ್ನು ಬಿಡುಗಡೆ ಮಾಡಿದ್ದು, ಈ ಫೋನ್ʼನಲ್ಲಿ ಹಲವು ಹೊಸ ವೈಶಿಷ್ಟ್ಯಗಳು ಲಭ್ಯವಿವೆ. ಇದರ ಬೆಲೆಗಳು ಕೂಡ ಬಹಿರಂಗವಾಗಿದ್ದು, ಭಾರತದಲ್ಲಿ 16ರ ಸಿರೀಸ್ ಬೆಲೆ 79,900 ರೂ ಇದ್ದರೆ, 16 Plus ನ ಬೆಲೆ 89,900 ರೂ. ಇದೆ.
ಇದನ್ನೂ ಓದಿ: ಎಚ್ಚರ ಮಹಿಳೆಯರೇ ! ಈ ದಿಕ್ಕಿಗೆ ತುಳಸಿ ಇದ್ದರೆ ಮನೆ ತುಂಬಾ ಬಡತನ, ಕಷ್ಟ, ದುಃಖವೇ ತುಂಬುವುದು !
ಇನ್ನು ಐಫೋನ್ʼನ ಬೇಸ್ ಮಾಡೆಲ್ ಪ್ರತಿ ಬಾರಿಯೂ ಹೆಚ್ಚು ಚರ್ಚಿಸಲ್ಪಡುತ್ತದೆ. ಏಕೆಂದರೆ ಅದರ ಬೆಲೆ ಉಳಿದವುಗಳಿಗಿಂತ ಕಡಿಮೆಯಿದ್ದು, ವೈಶಿಷ್ಟ್ಯಗಳು ಮಾತ್ರ ಉತ್ತಮವಾಗಿರುತ್ತವೆ. ಕಂಪನಿಯು ಸುಮಾರು 80 ಸಾವಿರ ರೂಪಾಯಿಗೆ ಫೋನ್ ಅನ್ನು ಪರಿಚಯಿಸಿದೆ. ಆದರೆ ಖರೀದಿ ಮಾಡುವಾಗ ಭಾರೀ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.
iPhone 16 (128GB) ಬೆಲೆ 79,900 ರೂ. ಕಳೆದ ವರ್ಷ ಐಫೋನ್ 15 ಅನ್ನು ಅದೇ ಬೆಲೆಗೆ ಬಿಡುಗಡೆ ಮಾಡಲಾಗಿತ್ತು. ಇನ್ನು ಸೆಪ್ಟೆಂಬರ್ 13 ರಿಂದ iPhone 16 ಅನ್ನು ಮುಂಗಡವಾಗಿ ಆರ್ಡರ್ ಮಾಡಬಹುದು. ಅದಾದ ನಂತರ ಈ ಫೋನ್ ಸೆಪ್ಟೆಂಬರ್ 20 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ.
ಇದನ್ನೂ ಓದಿ: ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅರ್ಧಕ್ಕೆ ನಿಲ್ಲುತ್ತೀರಾ? ಈ ಶಕುನಗಳ ಅರ್ಥವೇನು?
ಇನ್ನು Apple India ನಲ್ಲಿ iPhone 16 ಪುಟ ಲೈವ್ ಆಗಿದೆ. ಫೋನ್ ಕುರಿತು ಚಿಕ್ಕ ವಿವರಗಳನ್ನು ನೀಡಲಾಗಿದ್ದು, ಇದರಲ್ಲಿ ಬ್ಯಾಂಕ್ ಆಫರ್ಸ್, ಇಎಂಐ ಬಗ್ಗೆ ಮಾಹಿತಿ ನೀಡಲಾಗಿದೆ. ಅಂದಹಾಗೆ Apple ಇಂಡಿಯಾ ವೆಬ್ʼಸೈಟ್ ಪ್ರಕಾರ, 12483 ರೂಪಾಯಿಗಳ ಮಾಸಿಕ EMI ನಲ್ಲಿ iPhone 16 ಅನ್ನು ಖರೀದಿಸಬಹುದು. ಇದಲ್ಲದೇ ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ. EMI ಗಾಗಿ American Express, Axis Bank ಅಥವಾ ICICI ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, ನೀವು ರೂ.5000 ವರೆಗೆ ತ್ವರಿತ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಇಎಂಐ ಅವಧಿ 3 ಅಥವಾ 6 ತಿಂಗಳವರೆಗೆ ಇದೆ. 6 ತಿಂಗಳವರೆಗೆ ಇಎಂಐ ತೆಗೆದುಕೊಂಡರೆ ಪ್ರತಿ ತಿಂಗಳು 12483 ರೂಪಾಯಿ ಪಾವತಿಸಿ iPhone 16 ಅನ್ನು ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ