BSNL ಗ್ರಾಹಕರಿಗೆ ಬಿಗ್ ಶಾಕ್! ಅತ್ಯಂತ ಜನಪ್ರಿಯ ರಿಚಾರ್ಜ್ ಪ್ಲಾನ್ ಬಂದ್ ಮಾಡಿದ ಬಿಎಸ್ಎನ್ಎಲ್

ಕಳೆದ ತಿಂಗಳು, BSNL ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಲಾನ್ ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು. ಅವು ಯಾವುವು ಮತ್ತು ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಈ ಕೆಳೆಗೆ ಇದೆ ನೋಡಿ..

Written by - Channabasava A Kashinakunti | Last Updated : Sep 3, 2021, 11:30 AM IST
  • BSNL ತನ್ನ 99 ರೂ. ಪೋಸ್ಟ್‌ಪೇಯ್ಡ್ ಯೋಜನೆಯನ್ನು ನಿಲ್ಲಿಸಿದೆ
  • 1 ನೇ ಸೆಪ್ಟೆಂಬರ್‌ನಿಂದ, ಈ ಪ್ಲಾನ್‌ನ ಗ್ರಾಹಕರು ಪ್ಲಾನ್ 199 ರೂ. ಪ್ಲಾನ್‌ ಗೆ ವಲಸೆ
  • ಇನ್ನೂ ಹಲವು ಯೋಜನೆಗಳ ವ್ಯಾಲಿಡಿಟಿ ಕಡಿಮೆ ಮಾಡಲಾಗಿದೆ
BSNL ಗ್ರಾಹಕರಿಗೆ ಬಿಗ್ ಶಾಕ್! ಅತ್ಯಂತ ಜನಪ್ರಿಯ ರಿಚಾರ್ಜ್ ಪ್ಲಾನ್ ಬಂದ್ ಮಾಡಿದ ಬಿಎಸ್ಎನ್ಎಲ್ title=

ನವದೆಹಲಿ : ದೇಶದಲ್ಲಿ ಮೊಬೈಲ್ ಫೋನ್‌ಗಳ ಜೊತೆಗೆ, ಅವರಿಗೆ ಸಂಬಂಧಿಸಿದ ಟೆಲಿಕಾಂ ಕಂಪನಿಗಳ ಜನಪ್ರಿಯತೆ ಮತ್ತು ಮಾರುಕಟ್ಟೆಯೂ ಹೆಚ್ಚುತ್ತಿದೆ. ಖಾಸಗಿ ಟೆಲಿಕಾಂ ಕಂಪನಿಗಳು ಪ್ರಾಬಲ್ಯ ಹೊಂದಿದ್ದರೂ, ಸರ್ಕಾರಿ ಟೆಲಿಕಾಂ ಕಂಪನಿಯಾದ ಭಾರತೀಯ ಸಂಚಾರ್ ನಿಗಮ್ ಲಿಮಿಟೆಡ್ (BSNL) ನ ಹೆಸರು ಮೊದಲು ಬರುತ್ತದೆ. ಕಳೆದ ತಿಂಗಳು, BSNL ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಲಾನ್ ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು. ಅವು ಯಾವುವು ಮತ್ತು ಅವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂದು ಈ ಕೆಳೆಗೆ ಇದೆ ನೋಡಿ..

BSNL ಪ್ರಿಪೇಯ್ಡ್ ಯೋಜನೆಗಳಲ್ಲಿ ಬದಲಾವಣೆ

ಕಳೆದ ತಿಂಗಳು, BSNL ತನ್ನ ಪ್ರಿಪೇಯ್ಡ್ ಯೋಜನೆಗಳಲ್ಲಿ(BSNL Postpaid) ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿತ್ತು. ಪರೋಕ್ಷ ತೆರಿಗೆ ಏರಿಕೆಯ ಭಾಗವಾಗಿ, BSNL ತನ್ನ ಪ್ರಿಪೇಯ್ಡ್ ಪ್ಲಾನ್ ಬೆಲೆಯನ್ನು ಬದಲಿಸಲಿಲ್ಲ ಆದರೆ ಯೋಜನೆಯ ಲಾಭವನ್ನು ಕಡಿತಗೊಳಿಸಿತು. ಈಗ BSNL ತನ್ನ ಪೋಸ್ಟ್‌ಪೇಯ್ಡ್ ಯೋಜನೆಗಳ ಶುಲ್ಕವನ್ನು ಹೆಚ್ಚಿಸಲಿದೆ.

ಇದನ್ನೂ ಓದಿ : Mobile Number Portability: ನೀವೂ ಸಹ ನಿಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಬಯಸುವಿರಾ? ಇಲ್ಲಿದೆ ಸುಲಭ ಮಾರ್ಗ

BSNL ಈ ಯೋಜನೆಯ ಗ್ರಾಹಕರನ್ನು ಸ್ಥಳಾಂತರ

ಪೋಸ್ಟ್‌ಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸುವತ್ತ ಹೆಜ್ಜೆ ಇಟ್ಟಿರುವ ಬಿಎಸ್‌ಎನ್‌ಎಲ್(BSNL) ತಮ್ಮ 99 ರೂಪಾಯಿ ಪೋಸ್ಟ್‌ಪೇಯ್ಡ್ ಯೋಜನೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಈ ಯೋಜನೆಯನ್ನು ತೆಗೆದುಕೊಂಡ ಗ್ರಾಹಕರು ಈ ಯೋಜನೆಯ ವ್ಯಾಲಿಡಿಟಿಯನ್ನ ಪೂರ್ಣಗೊಳಿಸಬಹುದು ಮತ್ತು ಅದರ ನಂತರ ಗ್ರಾಹಕರು ಈ ಯೋಜನೆಯ ಬಂದ್ ಬಗ್ಗೆ SMS ಮೂಲಕ ಮಾಹಿತಿ ಪಡೆಯುತ್ತಾರೆ.

ಈ SMS ನಲ್ಲಿ ಏನು ಇರುತ್ತದೆ?

ಎಲ್ಲಾ BSNL ಬಳಕೆದಾರರು ಕಂಪನಿಯಿಂದ SMS ಪಡೆಯುತ್ತಾರೆ ಅದರಲ್ಲಿ ಕಂಪನಿಯು ತನ್ನ 99 ರೂ. ನ ರಿಚಾರ್ಜ್ ಪ್ಲಾನ್(BSNL Rs 99 Recharge Plan) ಅನ್ನು ಸ್ಥಗಿತಗೊಳಿಸುತ್ತಿದೆ ಎಂದು ಬರೆಯಲಾಗುತ್ತದೆ ಮತ್ತು ಆದ್ದರಿಂದ ಬಳಕೆದಾರರನ್ನು 1 ನೇ ಸೆಪ್ಟೆಂಬರ್ ನಿಂದ 199 ಪ್ಲಾನ್ ಗೆ ವರ್ಗಾಯಿಸಲಾಗುತ್ತದೆ. ಅಲ್ಲದೆ, ಪ್ಲಾನ್ 199 ರೂ. ಬಗ್ಗೆ ಎಲ್ಲಾ ಮಾಹಿತಿಯನ್ನು ಈ SMS ನಲ್ಲಿ ನೀಡಲಾಗುತ್ತದೆ.

99 ರೂ. ಮತ್ತು 199 ರೂ. ಪೋಸ್ಟ್‌ಪೇಯ್ಡ್ ರಿಚಾರ್ಜ್ ಪ್ಲಾನ್ 

99 ರೂ. ಪ್ಲಾನ್‌ನಲ್ಲಿ ಗ್ರಾಹಕರು ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಮತ್ತು 25 ಜಿಬಿ ಇಂಟರ್‌ನೆಟ್(25 GB Internet) ಪಡೆಯುತ್ತಿದ್ದರು. ಈಗ ನೀವು ಈ ಎಲ್ಲಾ ಸೌಲಭ್ಯಗಳನ್ನು 199 ರೂ.ಗೆ ಪಡೆಯುತ್ತೀರಿ. ಅಂದರೆ, ಎರಡೂ ಯೋಜನೆಗಳ ಪ್ರಯೋಜನಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಆದರೆ ಬೆಲೆಯನ್ನು 100 ರೂ. ಹೆಚ್ಚಿಸಲಾಗಿದೆ.

ಇದನ್ನೂ ಓದಿ : ನಿಮ್ಮ ಬೈಕ್ ಕೂಡಾ ಕಡಿಮೆ ಮೈಲೇಜ್ ನೀಡುತ್ತಿದೆಯೇ ? ಹಾಗಿದ್ದರೆ ಈ ಟಿಪ್ಸ್ ಬಳಸಿ ನೋಡಿ

BSNL ಯೋಜನೆಗಳ ವ್ಯಾಲಿಡಿಟಿ ಕಡಿಮೆ ಮಾಡಿದೆ

BSNL ತನ್ನ ಇತರ ಹಲವು ಯೋಜನೆಗಳ ವ್ಯಾಲಿಡಿಟಿ ಕಡಿಮೆ ಮಾಡಿದೆ. ಬಿಎಸ್‌ಎನ್‌ಎಲ್‌ನ(BSNL) ರೂ. 49 ರ ಪ್ರವೇಶ ಮಟ್ಟದ ವೋಚರ್ 28 ದಿನಗಳ ವ್ಯಾಲಿಡಿಟಿಯನ್ನು ಈಗ 24 ದಿನಗಳಿಗೆ ಇಳಿಸಲಾಗಿದೆ. 75 ರೂ. ಪ್ರಿಪೇಯ್ಡ್ ಪ್ಲಾನ್ ಈಗ 60 ರ ಬದಲು 50 ದಿನಗಳವರೆಗೆ ಮಾನ್ಯವಾಗಿದ್ದರೆ, ರೂ. 94 ಎಸ್‌ಟಿವಿ 90 ದಿನಗಳ ಬದಲಾಗಿ ಕೇವಲ 75 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. 106 ರೂ.ಮತ್ತು 207 ರೂ.ನ ವೋಚರ್‌ಗಳು ಈಗ 100 ದಿನಗಳ ಬದಲಾಗಿ 84 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಮತ್ತು ನೀವು ಈ ಟೆಲಿಕಾಂ ಕಂಪನಿಯಿಂದ ರೂ .197 ರ ಪ್ರಿಪೇಯ್ಡ್ ಯೋಜನೆಯನ್ನು ತೆಗೆದುಕೊಂಡರೆ, ಅದು ನಿಮಗೆ 180 ದಿನಗಳ ಬದಲಾಗಿ 150 ದಿನಗಳವರೆಗೆ ಪ್ರಯೋಜನಗಳನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News