ನವದೆಹಲಿ: WhatsApp Latest Update - WhatsApp ನಲ್ಲಿ ಕಳುಹಿಸಲಾದ ಸಂದೇಶವನ್ನು ತೆಗೆದುಹಾಕಲು ಅಥವಾ ಡಿಲೀಟ್ ಮಾಡಲು ಇದೀಗ ನಿಮಗೆ ಮೊದಲಿಗಿಂತ ಹೆಚ್ಚು ಸಮಯಾವಕಾಶ ಸಿಗಲಿದೆ. ಸಂದೇಶವನ್ನು ಅಳಿಸಲು ಎಷ್ಟು ಸಮಯ ಲಭ್ಯವಿರುತ್ತದೆ ಎಂದು ಈ ಮೊದಲು ನಾವು ನಿಮಗೆ ಹೇಳಿದ್ದೆವು. ಆದರೆ ಅವುಗಳಲ್ಲಿ ನಿರ್ಧಿಷ್ಟ ಸಮಯದ ಕುರಿತು ಮಾಹಿತಿಯನ್ನು ನೀಡಲಾಗಿರಲಿಲ್ಲ. ಈಗ ನೀವು ಕಳುಹಿಸಿದ ಸಂದೇಶಗಳನ್ನು 7 ದಿನಗಳು ಮತ್ತು 8 ನಿಮಿಷಗಳಲ್ಲಿ ಡಿಲೀಟ್ ಮಾಡಲು ಸಾಧ್ಯವಾಗಲಿದೆ ಅಂದರೆ, ಮೊದಲು ಈ ಸಮಯ 1 ಗಂಟೆ, 8 ನಿಮಿಷ ಮತ್ತು 16 ಸೆಕೆಂಡುಗಳದ್ದಾಗಿದ್ದು, ಇದೀಗ ಅದಕ್ಕೆ ಹೆಚ್ಚು ಸಮಯಾವಕಾಶ ಸಿಗಲಿದೆ.
ಇದನ್ನೂ ಓದಿ-Good News: ಡಿಸೆಂಬರ್ 15ರಿಂದ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸೇವೆ ಪುನರಾರಂಭ
ಮೊದಲು ಯಾರಿಗೆ ಸಿಗಲಿದೆ ಈ ವೈಶಿಷ್ಟ್ಯ? Android ಅಥವಾ iOS?
WhatsApp ನ ಈ ಹೊಸ ವೈಶಿಷ್ಟ್ಯವು (WhatsApp News Feature) ಮೊದಲು Android ಬಳಕೆದಾರರಿಗೆ ಸಿಗಲಿದೆ ಮತ್ತು ಅದರ ನಂತರ ಇದು iOS ಗಾಗಿ ಬಿಡುಗಡೆಯಾಗಲಿದೆ ಎಂಬುದು ಇಲ್ಲಿ ಗಮನಾರ್ಹ. WABetaInfo ವರದಿಯ ಪ್ರಕಾರ, ನಿಮ್ಮ ಮೂಲಕ ಕಳುಹಿಸಲಾದ ಯಾವುದೇ ಸಂದೇಶ ಮತ್ತು ಅದೂ ಒಂದು ಗಂಟೆ, 8 ನಿಮಿಷಗಳು, 16 ಸೆಕೆಂಡುಗಳಿಗಿಂತ ಹೆಚ್ಚು ಹಳೆಯದಾದ ಸಂದೇಶವನ್ನು ನೀವು ಇದೀಗ ಮುಂದಿನ ದಿನಾಂಕದಲ್ಲಿಯೂ ಕೂಡ ಡಿಲೀಟ್ ಮಾಡಬಹುದು. ಅಂದರೆ, ವಾಟ್ಸ್ ಆಪ್ ನಲ್ಲಿ ಮೆಸೇಜ್ ಡಿಲೀಟ್ ಮಾಡುವ ಸಮಯ ಬದಲಾಗಿದ್ದು, ಶೀಘ್ರದಲ್ಲೇ ಈ ವೈಶಿಷ್ಟ್ಯ ಜನರಿಗೆ ತಲುಪಲಿದೆ ಎನ್ನಲಾಗಿದೆ.
ಇದನ್ನೂ ಓದಿ-Dengue ನಿಂದ ಸಿಗಲಿದೆ ಶಾಶ್ವತ ಮುಕ್ತಿ! ಸೊಳ್ಳೆಗಳೇ ನಿಮ್ಮನ್ನು ಡೆಂಗ್ಯೂನಿಂದ ರಕ್ಷಿಸಲಿವೆ
WABetaInfo ವರದಿಯ ಪ್ರಕಾರ ಈ ವೈಶಿಷ್ಟ್ಯದ ಮೇಲೆ ಪ್ರಸ್ತುತ ಕೆಲಸ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಈ ವೈಶಿಷ್ಟ್ಯದಲ್ಲಿ (WhatsApp Feature) ಇನ್ನೂ ಕೆಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ಈ ವೈಶಿಷ್ಟ್ಯವು ಜನರನ್ನು ತಲುಪುವವರೆಗೆ, ಕಂಪನಿಯು ತನ್ನ ಮಟ್ಟದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಹುದು ಎನ್ನಲಾಗಿದೆ. WABetaInfo WhatsApp ಮಾಡಿದ ಪ್ರತಿಯೊಂದು ಬದಲಾವಣೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅದರ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ.
ಇದನ್ನೂ ಓದಿ-CBSE Term 1 Practical Exam: ಪ್ರಾಯೋಗಿಕ ಪರೀಕ್ಷೆಗಳಿಗೆ ಲೋಕಲ್ ಶಿಕ್ಷಕರೇ ಎಕ್ಸಾಮಿನರ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.