ನವದೆಹಲಿ : Paytm ಹೊಸ ವೈಶಿಷ್ಟ್ಯಗಳ ಗುಚ್ಚವನ್ನೇ ಸೇರಿಸುತ್ತಿದೆ. ಇವೆಲ್ಲವೂ ಪ್ಲಾಟ್‌ಫಾರ್ಮ್‌ನಲ್ಲಿನ ವೈಶಿಷ್ಟ್ಯಗಳನ್ನು ಹೆಚ್ಚಿಸುತ್ತವೆ. Paytm ಮೂಲಕ ರೈಲು ಟಿಕೆಟ್‌ಗಳನ್ನು ಕಾಯ್ದಿರಿಸುವುದು ಸಾಧ್ಯ. ಇದೀಗ ರೈಲ್ವೆಗೆ ಸಂಬಂಧಿಸಿದ ಕೆಲವು ಸೌಲಭ್ಯಗಳನ್ನು ಪೇಟಿಎಂ ವಿಸ್ತರಿಸಿದೆ. ಪ್ರಯಾಣಿಕರು ಈಗ ಈ ಆಪ್ ಮೂಲಕ PNR ಸ್ಥಿತಿಯನ್ನು ಟ್ರ್ಯಾಕ್ ಮಾಡುವುದು ಕೂಡಾ ಸಾಧ್ಯವಾಗುತ್ತದೆ. ಅಲ್ಲದೆ, ಚಲಿಸುತ್ತಿರುವ ರೈಲಿನ ಸ್ಟೇಟಸ್ ಟ್ರ್ಯಾಕ್ ಮಾಡಲು ಕೂಡಾ Paytm ಅಪ್ಲಿಕೇಶನ್ ಅನ್ನು ಬಳಸಬಹುದು.
Paytm ಅನ್ನು ಅಪ್ಡೇಟ್ ಮಾಡಬೇಕು :
ಬಳಕೆದಾರರು Android ಮತ್ತು iOS ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಇತ್ತೀಚಿನ ಆವೃತ್ತಿಗೆ ಅಪ್ಲಿಕೇಶನ್ ಅನ್ನು ನವೀಕರಿಸಬೇಕಾಗುತ್ತದೆ. ಒಮ್ಮೆ ಅಪ್ಡೇಟ್ ಮಾಡಿದ ನಂತರ ಲಿಸ್ಟ್ ಮಾಡಲಾದ ಈ ವೈಶಿಷ್ಟ್ಯಗಳನ್ನು ಸರ್ಚ್ ಮಾಡಲು ಸ್ಕ್ರಾಲ್ ಮಾಡಬಹುದು. ಅಲ್ಲದೆ ಅಪ್ಲಿಕೇಶನ್‌ನಲ್ಲಿರುವ ಸರ್ಚ್ ಆಯ್ಕೆಯನ್ನು ಕೂಡಾ ಇದಕ್ಕಾಗಿ ಬಳಸಬಹುದು. Paytm ಅಪ್ಲಿಕೇಶನ್‌ನಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಪಟ್ಟಿ ಮಾಡಲಾಗಿದೆ.
ಇದನ್ನೂ ಓದಿ : ಅನೇಕ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಒಂದು ಸಾಮಾನ್ಯ ಚಾರ್ಜರ್ ಬಳಸಬಹುದು!
Paytm ಲೈವ್ ಟ್ರೈನ್ ಸ್ಟೇಟಸ್ , ಪಿಎನ್ ಆರ್ ಸ್ಟೇಟಸ್ ಟ್ರಾಕಿಂಗ್ :
ಟ್ರೈನ್ ಸ್ಟೇಟಸ್ ಟ್ರ್ಯಾಕ್ ಮಾಡಬೇಕಾದರೆ ಪ್ರಕ್ರಿಯೆಯು ಸರಳವಾಗಿದೆ..
1.Paytm ಅಪ್ಲಿಕೇಶನ್‌ಗೆ ಹೋಗಿ ಟ್ರೈನ್ ಸ್ಟೇಟಸ್ ಸರ್ಚ್ ಮಾಡಿ.
2.Paytm ಟ್ರಾವೆಲ್ ಸೆಕ್ಷನ್ ತೆರೆಯುತ್ತದೆ. ಇಲ್ಲಿ ರೈಲು, ಬಸ್, ವಿಮಾನ ಇತ್ಯಾದಿಗಳನ್ನು ಟ್ರ್ಯಾಕ್ ಮಾಡಬಹುದು.
3. ಇಲ್ಲಿ ನೀವು 'ಟ್ರೇನ್' ಆಯ್ಕೆಯನ್ನು ಆರಿಸಬೇಕಾಗುತ್ತದೆ. PNR ಸ್ಟೇಟಸ್, ಲೈವ್ ಟ್ರೈನ್ ಸ್ಟೇಟಸ್ , ರೈಲು ಕ್ಯಾಲೆಂಡರ್ ಮತ್ತು ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡುವ ಆಯ್ಕೆ ಕಾಣಿಸುತ್ತದೆ.
4. ಇಲ್ಲಿ ರೈಲು ಸಂಖ್ಯೆಯನ್ನು ನಮೂದಿಸಿ ಸರ್ಚ್ ಫಂಕ್ಷನ್ ಮೇಲೆ ಟ್ಯಾಪ್ ಮಾಡಿ.
5. ಇಷ್ಟಾದ ನಂತರ ರೈಲು ಯಾವ ನಿಲ್ದಾಣದಲ್ಲಿದೆ. ಇನ್ನು ಪ್ರಯಾಣಕ್ಕೆ ಉಳಿದಿರುವ ಸಮಯ, ಪ್ಲಾಟ್‌ಫಾರ್ಮ್ ವಿವರಗಳು, ಆಗಮನ ಮತ್ತು ನಿರ್ಗಮನ ಸಮಯಗಳು ಮತ್ತು ನಿರೀಕ್ಷಿತ ಆಗಮನದ ಸಮಯ ಸೇರಿದಂತೆ ಎಲ್ಲಾ ಪ್ರಯಾಣದ ವಿವರಗಳನ್ನು ಅಪ್ಲಿಕೇಶನ್ ತೋರಿಸುತ್ತದೆ.
ಇದನ್ನೂ ಓದಿ : 9 ಏರ್ ಬ್ಯಾಗ್ ಜೊತೆ ಬರ್ತಿದೆ SUV: ವಿಶಿಷ್ಟ ಕಾರಿನ ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡೋದು ಗ್ಯಾರಂಟಿ
Paytm ಹಲವು ಸೌಲಭ್ಯಗಳನ್ನು ತರುತ್ತಿದೆ :
ಹಿಂದಿ, ಬಾಂಗ್ಲಾ, ತೆಲುಗು, ಮರಾಠಿ, ತಮಿಳು, ಗುಜರಾತಿ, ಕನ್ನಡ, ಮಲಯಾಳಂ, ಪಂಜಾಬಿ, ಒಡಿಯಾ ಮತ್ತು ಹೆಚ್ಚಿನ 10 ಭಾಷೆಗಳಲ್ಲಿ ಬುಕ್ ಮಾಡಬಹುದು ಎಂದು Paytm ಹೇಳುತ್ತದೆ. ಯಾವುದೇ ಹೆಚ್ಚುವರಿ ಶುಲ್ಕಗಳು ಅಥವಾ ಹಿಡನ್ ಚಾರ್ಜ್ ಇರುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಈ app ಮೂಲಕ ಗ್ರಾಹಕರು ಹಿರಿಯ ನಾಗರಿಕರ ಕೋಟಾ ಅಂದರೆ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷ ಪ್ರಯಾಣಿಕರು ಮತ್ತು 45 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳಾ ಪ್ರಯಾಣಿಕರು ಲೋವರ್ ಬರ್ತ್ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು Paytm ಹೇಳಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.