ಮನೆಯಲ್ಲಿ ಈ ಒಂದು ವಸ್ತು ಇದ್ದರೆ ವಿದ್ಯುತ್ ಬಿಲ್ ನ ಚಿಂತೆಯೇ ಇಲ್ಲ ! ವಿದ್ಯುತ್ ಇಲ್ಲದೆ ನಡೆಯುತ್ತದೆ ಎಲ್ಲಾ ಉಪಕರಣಗಳು !

Solar Power Generator:ಇದೀಗ ಮಾರುಕಟ್ಟೆಯಲ್ಲಿ ಇರುವ ಸೌರ ವಿದ್ಯುತ್ ಜನರೇಟರ್‌ ಬೆಲೆ ಕೂಡಾ ಕಡಿಮೆಯಾಗಿದೆ. ಅವುಗಳನ್ನು ಬಳಸುವುದರ ಮೂಲಕ, ನಿಮ್ಮ ಮನೆಯಲ್ಲಿರುವ ಟಿವಿ, ಫ್ಯಾನ್‌ಗಳನ್ನು ವಿದ್ಯುತ್ ಇಲ್ಲದೆ ಗಂಟೆಗಳ ಕಾಲ ಬಳಸಬಹುದು. 

Written by - Ranjitha R K | Last Updated : Jul 7, 2023, 12:50 PM IST
  • ಸೋಲಾರ್ ಪವರ್ ಜನರೇಟರ್ ಮಾರುಕಟ್ಟೆಗೆ ಕಾಲಿಟ್ಟಿದೆ.
  • ಕಡಿಮೆ ಅವಧಿಯಲ್ಲಿಯೇ ಅವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
  • ಎಸ್‌ಆರ್ ಪೋರ್ಟಬಲ್ ಸೋಲಾರ್ ಜನರೇಟರ್‌ನ ವಿಶೇಷತೆ ಏನು?
ಮನೆಯಲ್ಲಿ ಈ ಒಂದು ವಸ್ತು ಇದ್ದರೆ ವಿದ್ಯುತ್ ಬಿಲ್ ನ ಚಿಂತೆಯೇ ಇಲ್ಲ !  ವಿದ್ಯುತ್ ಇಲ್ಲದೆ ನಡೆಯುತ್ತದೆ ಎಲ್ಲಾ ಉಪಕರಣಗಳು !  title=

Solar Power Generator : ಕೆಲವು ಸಮಯದ ಹಿಂದಷ್ಟೇ  ಸೋಲಾರ್ ಪವರ್ ಜನರೇಟರ್ ಮಾರುಕಟ್ಟೆಗೆ ಕಾಲಿಟ್ಟಿದೆ. ಅತಿ ಕಡಿಮೆ ಅವಧಿಯಲ್ಲಿಯೇ ಅವುಗಳಿಗೆ ಉತ್ತಮ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. ವಾಸ್ತವವಾಗಿ, ಸೌರ ವಿದ್ಯುತ್ ಜನರೇಟರ್ ಯಾವುದೇ ಮಾಲಿನ್ಯವನ್ನು ಉಂಟುಮಾಡದೆ ವಿದ್ಯುತ್ ಪೂರೈಕೆ ಮಾಡುತ್ತದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದಾಗ ಅಥವಾ ನೀವು ವಿದ್ಯುತ್ ಇಲ್ಲದ ಪ್ರದೇಶದಲ್ಲಿದ್ದರೆ, ಈ ಸೌರ ವಿದ್ಯುತ್ ಜನರೇಟರ್ ಬ್ಯಾಕಪ್ ಒದಗಿಸುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಇರುವ ಸೌರ ವಿದ್ಯುತ್ ಜನರೇಟರ್‌ ಬೆಲೆ ಕೂಡಾ ಕಡಿಮೆಯಾಗಿದೆ. ಅವುಗಳನ್ನು ಬಳಸುವುದರ ಮೂಲಕ, ನಿಮ್ಮ ಮನೆಯಲ್ಲಿರುವ ಟಿವಿ, ಫ್ಯಾನ್‌ಗಳನ್ನು ವಿದ್ಯುತ್ ಇಲ್ಲದೆ ಗಂಟೆಗಳ ಕಾಲ ಬಳಸಬಹುದು. 

ಎಸ್‌ಆರ್ ಪೋರ್ಟಬಲ್ ಸೋಲಾರ್ ಜನರೇಟರ್‌ನಲ್ಲಿನ ವಿಶೇಷತೆ ಏನು? : 
ಎಸ್‌ಆರ್ ಪೋರ್ಟಬಲ್ಸ್ ಸೋಲಾರ್ ಜನರೇಟರ್ 130 ವ್ಯಾಟ್‌ಗಳ ಸಾಮರ್ಥ್ಯವನ್ನು ಹೊಂದಿದೆ. 2 ಎಸಿ ಕನೆಕ್ಟರ್ ಪೋರ್ಟ್‌ಗಳು, 100 ವ್ಯಾಟ್ ಎಸಿ ಔಟ್‌ಪುಟ್, ಲಿ-ಐಯಾನ್ ಬ್ಯಾಟರಿ ಪ್ಯಾಕ್ ಮತ್ತು ಪ್ರಕಾಶಮಾನವಾದ ಎಲ್‌ಇಡಿ ಲೈಟ್ ಅನ್ನು ಒಳಗೊಂಡಿರುತ್ತದೆ.  ಆದ್ದರಿಂದ ಇದನ್ನು ಕ್ಯಾಂಪಿಂಗ್ ಅಥವಾ ಹೋಮ್ ಪವರ್‌ನ ಸಂದರ್ಭದಲ್ಲಿ ಬಳಸಬಹುದು. ಇದರ ಬೆಲೆ 17,999 ರೂ. ಎಸ್‌ಆರ್ ಪೋರ್ಟಬಲ್ಸ್ ಸೋಲಾರ್ ಜನರೇಟರ್‌ನ ಹೆಚ್ಚಿನ ಕಾರ್ಯಕ್ಷಮತೆ, ಪೋರ್ಟಬಿಲಿಟಿ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯು ವಿದ್ಯುತ್ ಲಭ್ಯತೆಯಿಲ್ಲದೇ ನಿಮ್ಮ ಸಾಧನಗಳನ್ನು ಚಲಾಯಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ : Maruti Brezza ಕಾರನ್ನು 5 ಲಕ್ಷ ರೂ.ಗಳಲ್ಲಿ ನಿಮ್ಮದಾಗಿಸಬಹುದು, ಹೇಗೆ ಗೊತ್ತಾ?

ಎಸ್‌ಆರ್ ಪೋರ್ಟಬಲ್ಸ್ ಸೋಲಾರ್ ಜನರೇಟರ್ ತುಂಬಾ ಚಿಕ್ಕದಾಗಿದ್ದು, ಅದನ್ನು ಬ್ಯಾಗ್‌ನಲ್ಲಿ ಇಟ್ಟುಕೊಳ್ಳುವ ಮೂಲಕ ಎಲ್ಲಿ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಇದರ ಮೂಲಕ  ಲ್ಯಾಪ್‌ಟಾಪ್, ರೇಡಿಯೋ, ಪವರ್‌ಬ್ಯಾಂಕ್, ಸ್ಮಾರ್ಟ್‌ಫೋನ್ ಮತ್ತು ಇತರ ಸಣ್ಣ ಸಾಧನಗಳನ್ನು ಚಾರ್ಜ್ ಮಾಡಬಹುದು ಅಥವಾ ರನ್ ಮಾಡಬಹುದು. ಇದರ ಬಳಕೆಯು ನಿಮ್ಮ ಜೇಬಿಗೆ ಯಾವುದೇ ಹೊರೆಯಾಗುವುದಿಲ್ಲ. 

ಸರ್ವದ್ ಪೋರ್ಟಬಲ್ ಸೌರ ವಿದ್ಯುತ್ ಜನರೇಟರ್ : 
SARRVAD ಪೋರ್ಟಬಲ್ ಸೌರ ವಿದ್ಯುತ್ ಜನರೇಟರ್ S-150 ಆಗಿದೆ. ಇದು ಚಿಕ್ಕ ಬ್ಯಾಟರಿಯ ಗಾತ್ರವನ್ನು ಹೊಂದಿದೆ. ಅದನ್ನು ಎಲ್ಲಿ ಬೇಕಾದರೂ ಸುಲಭವಾಗಿ ಇರಿಸಬಹುದು. ಟಿವಿ ಮತ್ತು ಲ್ಯಾಪ್‌ಟಾಪ್‌ನಂತಹ ಸಣ್ಣ ಸಾಧನಗಳನ್ನು ಚಲಾಯಿಸಲು ಇದನ್ನು ಬಳಸಬಹುದು. 

ಇದನ್ನೂ ಓದಿ : Weather Forecast: ಮುಂಬೈನಲ್ಲಿ ಅಲರ್ಟ್ ಘೋಷಣೆ, ದೆಹಲಿ ಸೇರಿದಂತೆ ಈ ರಾಜ್ಯಗಳಲ್ಲಿ ಮಳೆರಾಯನ ಭಾರಿ ಆರ್ಭಟ!

ಇದರ ಸಾಮರ್ಥ್ಯ 42000mAh 155Wh. ಇದರೊಂದಿಗೆ ನೀವು ಐಫೋನ್ 8 ಅನ್ನು ಸುಮಾರು 8 ಬಾರಿ ಚಾರ್ಜ್ ಮಾಡಬಹುದು. ಇದು 1.89 Kg ತೂಗುತ್ತದೆ.  ಸೌರ ಫಲಕದಿಂದ (14V-22V / 3A ಗರಿಷ್ಠ) ಸೂರ್ಯನ ಬೆಳಕಿನಿಂದ ಚಾರ್ಜ್ ಮಾಡಬಹುದು. ಈ ಸೌರ ವಿದ್ಯುತ್ ಜನರೇಟರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಅಂದರೆ 19,000 ರೂಪಾಯಿಗೆ ಸುಲಭವಾಗಿ ಖರೀದಿಸಬಹುದು.

ಇದು ಎಷ್ಟು ಚಿಕ್ಕದಾಗಿದೆ ಎಂದರೆ ಅದನ್ನು ನಿಮ್ಮ ಬ್ಯಾಗ್‌ನಲ್ಲಿ ಇಟ್ಟುಕೊಂಡು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು. ಲ್ಯಾಪ್‌ಟಾಪ್, ರೇಡಿಯೋ, ಪವರ್‌ಬ್ಯಾಂಕ್, ಸ್ಮಾರ್ಟ್‌ಫೋನ್ ಸೇರಿದಂತೆ ಎಲ್ಲಾ ಸಣ್ಣ ಸಾಧನಗಳನ್ನು ಚಾರ್ಜ್ ಮಾಡಬಹುದು ಅಥವಾ ರನ್ ಮಾಡಬಹುದು. 

ಇದನ್ನೂ ಓದಿ : Tech News: ಈ ದಿನ ಬಾಹ್ಯಾಕಾಶಕ್ಕೆ ಉಡಾವಣೆಗೊಳ್ಳಲಿದೆ ಚಂದ್ರಯಾನ 3, ಮಾಹಿತಿ ನೀಡಿದ ಇಸ್ರೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News