'Akira' ಕಂಪ್ಯೂಟರ್ ಬಳಕೆದಾರರೇ ಎಚ್ಚರ!

ಇಂಟರ್ನೆಟ್ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಮತ್ತು ಸುಲಿಗೆಗೆ ಕಾರಣವಾಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ಬಗ್ಗೆ ಎಚ್ಚರದಿಂದಿರುವಂತೆ ಸರ್ಕಾರ ಎಚ್ಚರಿಕೆ ನೀಡಿದೆ. 

Written by - Yashaswini V | Last Updated : Jul 24, 2023, 11:57 AM IST
  • "ಅಕಿರಾ" ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ಮೊದಲಿಗೆ ಕಂಪ್ಯೂಟರ್ ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್ ಆಧಾರಿತ ಸಿಸ್ಟಮ್‌ಗಳ ಮೇಲೆ ದಾಳಿ ನಡೆಸಿ ಬಳಕೆದಾರರ ಮಾಹಿತಿಯನ್ನು ಕದಿಯುತ್ತದೆ.
  • ಬಳಿಕ ಸಿಸ್ಟಮ್‌ನಲ್ಲಿ ಅದರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ.
  • ಇದಾದ ನಂತರ, ಮಾಲ್‌ವೇರ್ ಬಲಿಪಶುವಿಗೆ ಹಣ ಪಾವತಿಸುವಂತೆ ಬ್ಲಾಕ್ ಮೇಲ್ ಮಾಡುತ್ತದೆ.
'Akira' ಕಂಪ್ಯೂಟರ್ ಬಳಕೆದಾರರೇ ಎಚ್ಚರ!  title=

Akira: ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) 'ಅಕಿರಾ' ಎಂಬ ಹೊಸ ಇಂಟರ್ನೆಟ್ ರಾನ್ಸಮ್‌ವೇರ್ ಬಗ್ಗೆ ಎಚ್ಚರದಿಂದಿರುವಂತೆ ಸೂಚಿಸಿದೆ. ಗಮನಾರ್ಹವಾಗಿ, ಇಂಟರ್ನೆಟ್ ಬಳಕೆದಾರರನ್ನೇ ಗುರಿಯಾಗಿಸಿಕೊಂಡಿರುವ ಹ್ಯಾಕರ್‌ಗಳು ಕಂಪ್ಯೂಟರ್ ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್ ಆಧಾರಿತ ಸಿಸ್ಟಮ್‌ಗಳ ಮೇಲೆ ದಾಳಿ ಮಾಡಬಹುದು ಎಂದು ವರದಿಯಾಗಿದೆ. 

ಈ ಕುರಿತಂತೆ ಸರ್ಕಾರದಿಂದಲೂ ಎಚ್ಚರಿಕೆ ನೀಡಲಾಗಿದ್ದು, ಸೈಬರ್ ದಾಳಿಯನ್ನು ತಪ್ಪಿಸಲು ಇಂಟರ್ನೆಟ್ ಮೂಲಕ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕದಿಯುವ ಮತ್ತು ಸುಲಿಗೆಗೆ ಕಾರಣವಾಗುವ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ “ಅಕಿರಾ” ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ಬಗ್ಗೆ ಎಚ್ಚರದಿಂದಿರಿ ಎಂದು ತಿಳಿಸಲಾಗಿದೆ. 

ಇದನ್ನೂ ಓದಿ- ವಾಟ್ಸಪ್‌ನಲ್ಲಿ ಈಗ ಇಷ್ಟು ಜನರೊಂದಿಗೆ ಒಟ್ಟಿಗೆ ವಿಡಿಯೋ ಕಾಲ್ ಮಾಡಬಹುದು

ಏನಿದು "ಅಕಿರಾ"? ಇದು ಹೇಗೆ ಸೈಬರ್ ದಾಳಿ ನಡೆಸುತ್ತದೆ? 
ಲಭ್ಯವಿರುವ ಮಾಹಿತಿಯ ಪ್ರಕಾರ, "ಅಕಿರಾ" ಎಂಬ ಇಂಟರ್ನೆಟ್ ರಾನ್ಸಮ್‌ವೇರ್ ಮೊದಲಿಗೆ ಕಂಪ್ಯೂಟರ್ ಮಾಲ್‌ವೇರ್ ವಿಂಡೋಸ್ ಮತ್ತು ಲಿನಕ್ಸ್ ಆಧಾರಿತ ಸಿಸ್ಟಮ್‌ಗಳ ಮೇಲೆ ದಾಳಿ ನಡೆಸಿ ಬಳಕೆದಾರರ ಮಾಹಿತಿಯನ್ನು ಕದಿಯುತ್ತದೆ. ಬಳಿಕ ಸಿಸ್ಟಮ್‌ನಲ್ಲಿ ಅದರ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಇದಾದ ನಂತರ,  ಮಾಲ್‌ವೇರ್ ಬಲಿಪಶುವಿಗೆ ಹಣ ಪಾವತಿಸುವಂತೆ ಬ್ಲಾಕ್ ಮೇಲ್ ಮಾಡುತ್ತದೆ. 

ಒಂದೊಮ್ಮೆ ಸೈಬರ್ ದಾಳಿಗೆ ಬಲಿಯಾದವರು ಸೈಬರ್ ಕಳ್ಳರ ಬೇಡಿಕೆಯನ್ನು ಈಡೇರಿಸದಿದ್ದರೆ ಡಾರ್ಕ್ ವೆಬ್ ಬ್ಲಾಗ್‌ನಲ್ಲಿ ಬಲಿಪಶುವಿನ ವೈಯಕ್ತಿಕ ಡೇಟಾವನ್ನು ಪ್ರಕಟಿಸುತ್ತಾರೆ. ಗಮನಾರ್ಹವಾಗಿ ಅಕಿರಾ ಆಪರೇಟರ್ ಗಳು ವಿ‌ಪಿ‌ಎನ್ ಸೇವೆಗಳನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- ಉಚಿತ Amazon Prime ಸದಸ್ಯತ್ವ ಪಡೆದುಕೊಳ್ಳಬೇಕೇ? ಹೀಗೆ ಮಾಡಿ 

ಇಂತಹ ಸೈಬರ್ ದಾಳಿಗಳಿಂದ ರಕ್ಷಿಸಿಕೊಳ್ಳಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
ಇಂತಹ ಸೈಬರ್ ದಾಳಿಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಈ ಕೆಳಗಿನ ವಿಷಯಗಳನ್ನು ನೆನಪಿನಲ್ಲಿಡಿ. 
* ಮೂಲಭೂತ ಆನ್‌ಲೈನ್ ನೈರ್ಮಲ್ಯ ಮತ್ತು ರಕ್ಷಣೆ ಪ್ರೋಟೋಕಾಲ್‌ಗಳನ್ನು ಬಳಸಬೇಕೆಂದು CERT-In ಸಲಹೆ ನೀಡಿದೆ. 
* ಇದಲ್ಲದೆ, ಸೈಬರ್ ದಾಳಿಯ ಸಂದರ್ಭದಲ್ಲಿ ಅದರ ನಷ್ಟವನ್ನು ತಡೆಗಟ್ಟಲು ಬಳಕೆದಾರರು ನಿರ್ಣಾಯಕ ಡೇಟಾದ ಆಫ್‌ಲೈನ್ ಬ್ಯಾಕಪ್‌ಗಳನ್ನು ನಿರ್ವಹಿಸಬೇಕು ಎಂದು ಅದು ಶಿಫಾರಸು ಮಾಡಿದೆ.
* ಅಷ್ಟೇ ಅಲ್ಲದೆ, ಆಪರೇಟಿಂಗ್ ಸಿಸ್ಟಂಗಳು ಮತ್ತು ಅಪ್ಲಿಕೇಷನ್ ಗಳನ್ನು ನಿಯಮಿತವಾಗಿ ನವೀಕರಿಸುವುದು ಸಹ ಬಹಳ ಮುಖ್ಯವಾಗಿದೆ. 
* ಇವೆಲ್ಲದರ ಜೊತೆಗೆ ಇಂಟರ್ನೆಟ್ ಬಳಕೆದಾರರು ಬಲವಾದ ಪಾಸ್‌ವರ್ಡ್ ನೀತಿಯನ್ನು ಅನುಸರಿಸಬೇಕು ಎಂದು ತಂತ್ರಜ್ಞಾನ ವಿಭಾಗವು ಸಲಹೆ ನೀಡಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News