Google Pay, PhonePe ಬಳಸುವಾಗ ಈ ತಪ್ಪು ಆಗದಿರಲಿ ಎಚ್ಚರ .! ಇಲ್ಲವಾದರೆ ನಷ್ಟ ಖಂಡಿತಾ

Google Pay ಮತ್ತು PhonePe ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ, ಬ್ಯಾಂಕ್ ಖಾತೆಯ ಈ ವಿಭಿನ್ನ UPI ಐಡಿಗಳನ್ನು ಸೇರಿಸಬಹುದು.  UPI ಐಡಿಯನ್ನು ರಚಿಸಿದಾಗ, ಅದರ  ಅಡ್ರೆಸ್ ಕೂಡಾ ವಿಭಿನ್ನವಾಗಿರುತ್ತವೆ. ಇದು ದೊಡ್ಡ ಸಮಸ್ಯೆಯಾಗಿದೆ. 

Written by - Ranjitha R K | Last Updated : Aug 1, 2022, 02:35 PM IST
  • UPI ಭಾರತದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ.
  • 2016ರಿಂದ ಇದನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ
  • ಒಬ್ಬ ವ್ಯಕ್ತಿಯು ಬಹು UPI ಐಡಿಗಳನ್ನು ರಚಿಸಬಹುದು.
Google Pay, PhonePe ಬಳಸುವಾಗ ಈ ತಪ್ಪು ಆಗದಿರಲಿ ಎಚ್ಚರ .!  ಇಲ್ಲವಾದರೆ ನಷ್ಟ ಖಂಡಿತಾ  title=
gpay phonepe using tips (file photo)

ನವದೆಹಲಿ : UPI ಭಾರತದಲ್ಲಿ ಅತ್ಯಂತ ಜನಪ್ರಿಯ ಪಾವತಿ ವಿಧಾನವಾಗಿದೆ. ಇದನ್ನು 2016 ರಲ್ಲಿ ಪ್ರಾರಂಭಿಸಲಾಯಿತು.  ಅಂದಿನಿಂದ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈಗ ಒಬ್ಬ ವ್ಯಕ್ತಿಯು ಬಹು UPI ಐಡಿಗಳನ್ನು ರಚಿಸಬಹುದು. ಅಲ್ಲದೆ, ಈ UPI ಐಡಿಗಳನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಕೂಡಾ ಮಾಡಬಹುದು. Google Pay ಮತ್ತು PhonePe ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ, ಬ್ಯಾಂಕ್ ಖಾತೆಯ ಈ ವಿಭಿನ್ನ UPI ಐಡಿಗಳನ್ನು ಸೇರಿಸಬಹುದು.  UPI ಐಡಿಯನ್ನು ರಚಿಸಿದಾಗ, ಅದರ  ಅಡ್ರೆಸ್ ಕೂಡಾ ವಿಭಿನ್ನವಾಗಿರುತ್ತವೆ. 

ಈ  ಅಡ್ರೆಸ್ ಗಳು ತುಂಬಾ ಕಷ್ಟಕರವಾಗುತ್ತವೆ. ಏಕೆಂದರೆ ಬೇರೆ ಬೇರೆ UPI ಐಡಿಗಳನ್ನು ನೆನಪಿಟ್ಟುಕೊಳ್ಳುವುದು ತುಂಬಾ ಕಷ್ಟ. ಒಂದೇ UPI ಐಡಿಯಿಂದ ಎಲ್ಲಾ ಕೆಲಸಗಳನ್ನು ಮಾಡಬಹುದು. ಈ ಐಡಿ ನೆನಪಿಲ್ಲದಿದ್ದರೆ ವ್ಯವಹಾರ ನಡೆಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದೇ UPI ಐಡಿಯನ್ನು ಬಳಸಿ, ಉಳಿದ ಐಡಿ ಯನ್ನು ಅಳಿಸಬಹುದು. UPI ಐಡಿಗಳನ್ನು ಸುಲಭವಾಗಿ ಅಳಿಸಬಹುದು. 

ಇದನ್ನೂ ಓದಿ : OPPO ತರುತ್ತಿದೆ ಅದ್ಭುತ ವೈಶಿಷ್ಟ್ಯಗಳಿರುವ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ .!

PhonePe ನಲ್ಲಿ UPI ಐಡಿಯನ್ನು ಅಳಿಸುವುದು ಹೇಗೆ? :
-ಮೊದಲು PhonePe ಆಪ್ ತೆರೆಯಿರಿ. ಎಡಭಾಗದಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
-ನೀವು ಅಳಿಸಲು ಬಯಸುವ ಖಾತೆಯ ಮೇಲೆ ಕ್ಲಿಕ್ ಮಾಡಿ.
-ಇಲ್ಲಿ ಎಲ್ಲಾ UPI ಐಡಿಗಳು ಕಾಣಿಸುತ್ತದೆ. 
-ಬಲಭಾಗದಲ್ಲಿ  ಡಿಲೀಟ್ ಬಟನ್ ಕಾಣಿಸುತ್ತದೆ.  
-UPI ID ಅನ್ನು ಕ್ಲಿಕ್ ಮಾಡಿದ ನಂತರ  ಆ ID ಡಿಲೀಟ್ ಆಗುತ್ತದೆ. 

Google Pay ನಲ್ಲಿ UPI ಐಡಿಯನ್ನು ಅಳಿಸುವುದು ಹೇಗೆ? :
ಮೊದಲಿಗೆ GPay ತೆರೆಯಿರಿ . ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ
-ಅದರ ನಂತರ ನೇರವಾಗಿ ಬ್ಯಾಂಕ್ ಖಾತೆಗೆ ಹೋಗಿ
- ಅದರ ನಂತರ ಮ್ಯಾನೇಜ್ UPI ಐಡಿ ಮೇಲೆ ಕ್ಲಿಕ್ ಮಾಡಿ
- ಸೈಟ್ ಬದಿಯಲ್ಲಿಡಿಲೀಟ್ ಬಟನ್  ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ದ ID  ಡಿಲೀಟ್ ಆಗುತ್ತದೆ. 

ಇದನ್ನೂ ಓದಿ : WhatsApp Mistakes: ಅಪ್ಪಿತಪ್ಪಿಯೂ ಗ್ರೂಪ್‌ಗಳಿಗೆ ಈ 4 ವಿಷಯ ಕಳುಹಿಸಬೇಡಿ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News