Modi Government New Rules On Elecricity Bill: ಪ್ರತಿ ತಿಂಗಳು ಅಧಿಕ ವಿದ್ಯುತ್ ಬಿಲ್ ಪಾವತಿಸುವ ಮೂಲಕ ನೀವು ಸಹ ತೊಂದರೆಗೊಳಗಾಗಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ಸರ್ಕಾರ ಅಂತಹದ್ದೊಂದು ಕ್ರಮ ಕೈಗೊಳ್ಳಲಿದ್ದು, ಇದರಿಂದ ನಿಮ್ಮ ವಿದ್ಯುತ್ ಬಿಲ್ ಗಣನೀಯವಾಗಿ ಕಡಿಮೆಯಾಗಲಿದೆ ಮತ್ತು ನೀವು ಸ್ವಲ್ಪವೂ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ವಿದ್ಯುತ್ ದರ ನಿಗದಿಪಡಿಸಲು ‘ದಿನದ ಸಮಯ’ (ಟಿಒಡಿ) ನಿಯಮವನ್ನು ಸರ್ಕಾರ ಜಾರಿಗೆ ತರಲು ಹೊರಟಿದೆ. ಇದು ಜಾರಿಗೆ ಬಂದಲ್ಲಿ, ದೇಶಾದ್ಯಂತದ ವಿದ್ಯುತ್ ಗ್ರಾಹಕರು ಸೌರ ಸಮಯದಲ್ಲಿ (ಹಗಲಿನ ಸಮಯ) ವಿದ್ಯುತ್ ಬಳಕೆಯನ್ನು ನಿರ್ವಹಿಸುವ ಮೂಲಕ ತಮ್ಮ ವಿದ್ಯುತ್ ಬಿಲ್ಗಳಲ್ಲಿ ಶೇ. 20 ರಷ್ಟು ಉಳಿಸಲು ಸಾಧ್ಯವಾಗಲಿದೆ.
ಹೊಸ ನಿಯಮ ಅನ್ವಯವಾಗಲಿದೆ
ಹೊಸ ನಿಯಮ TOD ಅಡಿಯಲ್ಲಿ, ದಿನದ ವಿವಿಧ ಸಮಯಗಳಿಗೆ ವಿವಿಧ ವಿದ್ಯುತ್ ದರಗಳು ಅನ್ವಯವಾಗಳಿವೆ. ಈ ವ್ಯವಸ್ಥೆ ಜಾರಿಯಿಂದ ಗ್ರಾಹಕರು ಹೆಚ್ಚಿನ ವಿದ್ಯುತ್ ಬಳಕೆಯ ಕೆಲಸಗಳಾದ ಬಟ್ಟೆ ಒಗೆಯುವುದು ಮತ್ತು ಪೀಕ್ ಅವರ್ಗಳಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಲು ಸಾಧ್ಯವಾಗಲಿದೆ.
ಈ ರೀತಿಯಾಗಿ ನೀವು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಿಕೊಳ್ಳಬಹುದು
ಹೊಸ ವ್ಯವಸ್ಥೆಯಲ್ಲಿ, ಗ್ರಾಹಕರು ಸಾಮಾನ್ಯ ಕೆಲಸದ ಸಮಯದಲ್ಲಿ ಬಟ್ಟೆ ಒಗೆಯುವುದು ಅಥವಾ ಅಡುಗೆ ಮಾಡುವ ಮೂಲಕ ತಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಲು ಸಾಧಯ್ವಾಗಲಿದೆ. 10 kW ಮತ್ತು ಅದಕ್ಕಿಂತ ಹೆಚ್ಚಿನ ಬೇಡಿಕೆಯಿರುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ToD ಶುಲ್ಕ ವ್ಯವಸ್ಥೆಯು ಏಪ್ರಿಲ್ 1, 2024 ರಿಂದ ಅನ್ವಯಿಸುತ್ತದೆ. ಈ ನಿಯಮವು ಏಪ್ರಿಲ್ 1, 2025 ರಿಂದ ಕೃಷಿ ಹೊರತುಪಡಿಸಿ ಎಲ್ಲಾ ಇತರ ಗ್ರಾಹಕರಿಗೆ ಅನ್ವಯಿಸುತ್ತದೆ. ಆದಾಗ್ಯೂ, ಸ್ಮಾರ್ಟ್ ಮೀಟರ್ಗಳನ್ನು ಹೊಂದಿರುವ ಗ್ರಾಹಕರಿಗೆ, ಅಂತಹ ಮೀಟರ್ಗಳನ್ನು ಸ್ಥಾಪಿಸಿದಾಗ ಮಾತ್ರ TOD ವ್ಯವಸ್ಥೆಯು ಅನ್ವಯವಾಗುತ್ತದೆ.
ವಿದ್ಯುತ್ ಶಕ್ತಿ ಸಚಿವಾಲಯ ಮಾಹಿತಿ ನೀಡಿದೆ
2020 ರ ವಿದ್ಯುತ್ (ಗ್ರಾಹಕ ಹಕ್ಕುಗಳು) ನಿಯಮಗಳಿಗೆ ತಿದ್ದುಪಡಿ ಮಾಡುವ ಮೂಲಕ ಭಾರತ ಸರ್ಕಾರವು ಪ್ರಸ್ತುತ ವಿದ್ಯುತ್ ದರ ವ್ಯವಸ್ಥೆಯಲ್ಲಿ ಎರಡು ಬದಲಾವಣೆಗಳನ್ನು ಮಾಡಿದೆ ಎಂದು ವಿದ್ಯುತ್ ಸಚಿವಾಲಯ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಈ ಬದಲಾವಣೆಗಳು ಟೈಮ್ ಆಫ್ ಡೇ (TOD) ಸುಂಕ ವ್ಯವಸ್ಥೆ ಮತ್ತು ಸ್ಮಾರ್ಟ್ ಮೀಟರ್ಗಳಿಗೆ ಸಂಬಂಧಿಸಿದ ನಿಬಂಧನೆಗಳ ತರ್ಕಬದ್ಧಗೊಳಿಸುವಿಕೆಗೆ ಸಂಬಂಧಿಸಿದೆ.
ಇದನ್ನೂ ಓದಿ-India ಪ್ರವೇಶಕ್ಕೆ ಸಿದ್ಧವಾಗಿದೆ ಸ್ಟಾರ್ ಲಿಂಕ್, ಶೀಘ್ರದಲ್ಲೇ ಸಿಗಲಿದೆ 300ಎಂಬಿಪಿಎಸ್ ಗೂ ಅಧಿಕ ವೇಗದ ಇಂಟರ್ನೆಟ್
ಸಮಯಕ್ಕೆ ಅನುಗುಣವಾಗಿ ವಿದ್ಯುತ್ ಬೆಲೆ ಬದಲಾಗುತ್ತದೆ
ಅದರಂತೆ, ದಿನವಿಡೀ ಒಂದೇ ದರದಲ್ಲಿ ವಿದ್ಯುತ್ ಶುಲ್ಕ ವಿಧಿಸುವ ಬದಲು, ಬಳಕೆದಾರರು ವಿದ್ಯುತ್ಗಾಗಿ ಪಾವತಿಸುವ ಬೆಲೆ ದಿನದ ವಿವಿಧ ಸಮಯಗಳಲ್ಲಿ ಬದಲಾಗುತ್ತದೆ. ಹೇಳಿಕೆಯ ಪ್ರಕಾರ, ಹೊಸ ಸುಂಕದ ವ್ಯವಸ್ಥೆಯಲ್ಲಿ, ಸೌರ ಗಂಟೆಗಳಲ್ಲಿ ವಿದ್ಯುತ್ ದರವು (ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು ನಿಗದಿಪಡಿಸಿದ ಎಂಟು ಗಂಟೆಗಳು) ಸಾಮಾನ್ಯ ದರಕ್ಕಿಂತ 10 ರಿಂದ 20 ಪ್ರತಿಶತದಷ್ಟು ಕಡಿಮೆ ಇರಲಿದೆ, ಆದರೆ ಅತಿ ಹೆಚ್ಚು ಬಳಕೆಯ ಸಮಯದಲ್ಲಿ ಅದು ಶೇ. 10 ರಿಂದ 20 ಹೆಚ್ಚಾಗಿರಲಿದೆ
ಇದನ್ನೂ ಓದಿ-Fighter Aircrafts: ಇನ್ಮುಂದೆ ಭಾರತದಲ್ಲಿಯೇ ಉತ್ಪಾದನೆಯಾಗಲಿವೆ ಯುದ್ಧ ವಿಮಾನಗಳ ಇಂಜಿನ್ ಗಳು, ಇಲ್ಲಿದೆ ವರದಿ
ಎಲ್ಲರಿಗೂ ಅನುಕೂಲವಾಗಲಿದೆ ಎಂದ ಕೇಂದ್ರ ಸಚಿವರು
TOD ವ್ಯವಸ್ಥೆಯು ಗ್ರಾಹಕರು ಮತ್ತು ವಿದ್ಯುತ್ ಪೂರೈಕೆದಾರರಿಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ ಎಂದು ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ .
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.