YouTubeನಲ್ಲಿ ಜಾಹಿರಾತಿಲ್ಲದೇ ವಿಡಿಯೋ ವೀಕ್ಷಿಸಲು ಇಲ್ಲಿದೆ ಸುಲಭ ಮಾರ್ಗ

Free YouTube Premium: ಶಿಯೋಮಿ ಇಂಡಿಯಾ ಈಗ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ. ನೀವು ಶಿಯೋಮಿ ಸ್ಮಾರ್ಟ್‌ಫೋನ್ ಹೊಂದಿದ್ದರೆ, ಕಂಪನಿಯು ಮೂರು ತಿಂಗಳವರೆಗೆ ಉಚಿತ ಪ್ರೀಮಿಯಂ ಸದಸ್ಯತ್ವವನ್ನು ನೀಡುತ್ತದೆ. 

Written by - Yashaswini V | Last Updated : Jun 8, 2022, 11:13 AM IST
  • ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದು ಹೇಗೆ?
  • ಉಚಿತ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಲು ನಿಮ್ಮ ಶಿಯೋಮಿ / ರೆಡ್ಮಿ ಸಾಧನಗಳನ್ನು ಹೊಂದಿರಬೇಕು.
  • ಈ ಸಾಧನಗಳಲ್ಲಿ ಯುಟ್ಯೂಬ್ ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸಬೇಕು
YouTubeನಲ್ಲಿ ಜಾಹಿರಾತಿಲ್ಲದೇ ವಿಡಿಯೋ ವೀಕ್ಷಿಸಲು ಇಲ್ಲಿದೆ ಸುಲಭ ಮಾರ್ಗ  title=
Free YouTube Premium Subscription

ಜಾಹಿರಾತಿಲ್ಲದೇ ಯುಟ್ಯೂಬ್ ವೀಕ್ಷಣೆ: ಯೂಟ್ಯೂಬ್ ಅತಿ ಹೆಚ್ಚು ಬಳಸುವ ವಿಡಿಯೋ ವೇದಿಕೆ ಆಗಿದೆ. ಆದರೆ, ವಿಡಿಯೋ ನೋಡುತ್ತಿರುವಾವ ಮಧ್ಯದಲ್ಲಿ ಬರುವ ಜಾಹೀರಾತುಗಳು ಕಿರಿಕಿರಿ ಉಂಟು ಮಾಡುತ್ತವೆ. ಆದರೆ, ಈ  ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ನೀವು Xiaomi ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ನೀವು ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು, ಇದರಿಂದಾಗಿ ವೀಡಿಯೊವನ್ನು ವೀಕ್ಷಿಸುವಾಗ ಯಾವುದೇ ಜಾಹೀರಾತುಗಳು ಇರುವುದಿಲ್ಲ. ಅದನ್ನು ಹೇಗೆ ರಿಡೀಮ್ ಮಾಡುವುದು ಎಂದು ತಿಳಿಯೋಣ...

ವಾಸ್ತವವಾಗಿ, ಶಿಯೋಮಿ ಇಂಡಿಯಾ ಈಗ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ. ನೀವು ಶಿಯೋಮಿ ಸ್ಮಾರ್ಟ್‌ಫೋನ್ ಹೊಂದಿದ್ದರೆ, ಕಂಪನಿಯು ಮೂರು ತಿಂಗಳವರೆಗೆ ಉಚಿತ ಪ್ರೀಮಿಯಂ ಸದಸ್ಯತ್ವವನ್ನು ನೀಡುತ್ತದೆ. ನಿಮ್ಮ ಗೂಗಲ್ ಖಾತೆಯಲ್ಲಿ ನೀವು ಈಗಾಗಲೇ ಉಚಿತ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ರಿಡೀಮ್ ಮಾಡಿಕೊಂಡಿದ್ದರೆ, ಈ ಕೊಡುಗೆಯನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ಗಮನಿಸಿ. ನೀವು ಅರ್ಹ ಸಾಧನವನ್ನು ಹೊಂದಿದ್ದರೆ  ಶಿಯೋಮಿ / ರೆಡ್ಮಿ ಸ್ಮಾರ್ಟ್‌ಫೋನ್‌ನಲ್ಲಿ ಉಚಿತ ಚಂದಾದಾರಿಕೆಯನ್ನು ಹೇಗೆ ಪಡೆಯುವುದು ಎಂದು ತಿಳಿಯೋಣ ...

ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುವುದು ಹೇಗೆ?
ಉಚಿತ ಯುಟ್ಯೂಬ್  ಪ್ರೀಮಿಯಂ ಚಂದಾದಾರಿಕೆಯನ್ನು ಪಡೆಯಲು ನಿಮ್ಮ  ಶಿಯೋಮಿ / ರೆಡ್ಮಿ ಸಾಧನದಲ್ಲಿ ಯುಟ್ಯೂಬ್ ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಸ್ಥಾಪಿಸುವುದನ್ನು ಖಚಿತಪಡಿಸಿಕೊಳ್ಳಿ. ಈ ಕೊಡುಗೆಯು 6ನೇ ಜೂನ್ 2022 ರಿಂದ ಮಾನ್ಯವಾಗಿದೆ ಮತ್ತು 31ನೇ ಜನವರಿ 2023 ರವರೆಗೆ ಲಭ್ಯವಿರುತ್ತದೆ. ಈ ಕೊಡುಗೆಯನ್ನು ಪಡೆಯಲು, ಶಿಯೋಮಿ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 1, 2022 ರಂದು ಅಥವಾ ನಂತರ ಸಕ್ರಿಯವಾಗಿರುವುದು ಅವಶ್ಯಕವಾಗಿದೆ. 

ಇದನ್ನೂ ಓದಿ- Most Replayed ವೈಶಿಷ್ಟ್ಯವನ್ನು ಆರಂಭಿಸಿದ ಯುಟ್ಯೂಬ್

ಈ ಕೊಡುಗೆಯನ್ನು ಕ್ಲೈಮ್ ಮಾಡಲು, ಯುಟ್ಯೂಬ್ ಪ್ರೀಮಿಯಂ ಸೈನ್-ಅಪ್ ಪ್ರಕ್ರಿಯೆಯಲ್ಲಿ ಪ್ರಸ್ತುತಪಡಿಸಿದಂತೆ ಒಬ್ಬರು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಹೊಂದಿರಬೇಕು. ಒಮ್ಮೆ ಯುಟ್ಯೂಬ್ ಪ್ರೀಮಿಯಂ ಅನ್ನು ಸಕ್ರಿಯಗೊಳಿಸಿದರೆ, ಬಳಕೆದಾರರು ತಮ್ಮ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ರದ್ದುಗೊಳಿಸಲು ಕೊನೆಯ ದಿನದ ಮೊದಲು ಅದನ್ನು ನಿಷ್ಕ್ರಿಯಗೊಳಿಸಬಹುದು.

ಯುಟ್ಯೂಬ್ ಪ್ರೀಮಿಯಂ 3 ತಿಂಗಳ ಉಚಿತ ಚಂದಾದಾರಿಕೆ:
Xiaomi 12 Pro, Xiaomi 11i, Xiaomi 11i ಹೈಪರ್‌ಚಾರ್ಜ್ ಮತ್ತು Xiaomi 11T Pro ಹೊಂದಿರುವ ಅರ್ಹ ಸಾಧನ ಬಳಕೆದಾರರು ಮೂರು ತಿಂಗಳವರೆಗೆ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯುತ್ತಾರೆ. ಕಂಪನಿಯು ಉನ್ನತ-ಮಟ್ಟದ ಮತ್ತು ಪ್ರಮುಖ ಸಾಧನಗಳಿಗೆ ಉಚಿತ ಮೂರು ತಿಂಗಳ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ನೀಡುತ್ತಿದೆ.

ಇದನ್ನೂ ಓದಿ- YouTube ನ ಈ ವೈಶಿಷ್ಟ್ಯ ಬಳಸಿ ನೀವೂ ಕೈತುಂಬಾ ಸಂಪಾದಿಸಿ, ತಿಂಗಳಿಗೆ 7.5 ಲಕ್ಷ ರೂ. ಗಳಿಸುವ ಅವಕಾಶ!

ಯುಟ್ಯೂಬ್  ಪ್ರೀಮಿಯಂ ಉಚಿತ ಎರಡು ತಿಂಗಳ ಚಂದಾದಾರಿಕೆ ಅರ್ಹ ಸಾಧನಗಳು:
Xiaomi Pad 5, Redmi Note 11 Pro+, Redmi Note 11 Pro, Redmi Note 11, Redmi Note 11T ಅಥವಾ Redmi Note 11S ಅನ್ನು ಹೊಂದಿರುವ ಬಳಕೆದಾರರು ಎರಡು ತಿಂಗಳ ಯುಟ್ಯೂಬ್ ಪ್ರೀಮಿಯಂ ಚಂದಾದಾರಿಕೆಗೆ ಅರ್ಹರಾಗಿರುತ್ತಾರೆ. ಕಂಪನಿಯು ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಉಚಿತ ಯೂಟ್ಯೂಬ್ ಪ್ರೀಮಿಯಂ ಚಂದಾದಾರಿಕೆಯನ್ನು ಎರಡು ತಿಂಗಳಿಗೆ ಸೀಮಿತಗೊಳಿಸುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News