JioPhone ಬಳಕೆದಾರರಿಗೆ ಸಿಹಿ ಸುದ್ದಿ : Buy 1 ಗೆಟ್ 1 ರೀಚಾರ್ಜ್ ಆಫರ್ Free 

JioPhone Buy 1 Get 1 Free ಆಫರ್‌ನೊಂದಿಗೆ, ಬಳಕೆದಾರರು ರೀಚಾರ್ಜ್ ಮಾಡಿದ ಪ್ರತಿಯೊಂದು JioPhone ಪ್ಲಾನ್‌ನಲ್ಲಿ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಯೋಜನೆಯನ್ನು ಉಚಿತವಾಗಿ ಪಡೆಯುತ್ತಿರಿ

Written by - Channabasava A Kashinakunti | Last Updated : Aug 1, 2021, 05:15 PM IST
  • ಜಿಯೋಫೋನ್ ಪ್ರಿಪೇಯ್ಡ್ ಗ್ರಾಹಕರಿಗೆ ವಿಭಿನ್ನ ರೀಚಾರ್ಜ್ ಪ್ರಯೋಜನ ನೀಡುತ್ತಿದೆ
  • ಹೊಸ ಆಫರ್‌ನ 1 ಗೆಟ್ 1 ಫ್ರೀ ಆಫರ್ ಅನ್ನು ಎಲ್ಲಾ ಜಿಯೋಫೋನ್ ಲಭ್ಯ
  • ಈ ಪ್ಲಾನ್ ಮೂಲಕ 500MB ಡೇಟಾ, ಅನಿಯಮಿತ ಕರೆ ಮತ್ತು 14 ದಿನಗಳ ವ್ಯಾಲಿಡಿಟಿ
JioPhone ಬಳಕೆದಾರರಿಗೆ ಸಿಹಿ ಸುದ್ದಿ : Buy 1 ಗೆಟ್ 1 ರೀಚಾರ್ಜ್ ಆಫರ್ Free  title=

ನವದೆಹಲಿ : ರಿಲಯನ್ಸ್ ಜಿಯೋ ತನ್ನ ಜಿಯೋಫೋನ್ ಪ್ರಿಪೇಯ್ಡ್ ಗ್ರಾಹಕರಿಗೆ ವಿಭಿನ್ನ ರೀಚಾರ್ಜ್ ಪ್ರಯೋಜನವನ್ನು ನೀಡುತ್ತಿದೆ. ಹೊಸ ಆಫರ್‌ನ 1 ಗೆಟ್ 1 ಫ್ರೀ  ಆಫರ್ ಅನ್ನು ಎಲ್ಲಾ ಜಿಯೋಫೋನ್ ಲಭ್ಯವಿರುವ ಪ್ಲಾನ್‌ಗಳಲ್ಲಿ ನೀಡುತ್ತಿದೆ.

JioPhone Buy 1 Get 1 Free ಆಫರ್‌ನೊಂದಿಗೆ, ಬಳಕೆದಾರರು ರೀಚಾರ್ಜ್(Jio Recharge) ಮಾಡಿದ ಪ್ರತಿಯೊಂದು JioPhone ಪ್ಲಾನ್‌ನಲ್ಲಿ ಅದೇ ಮೌಲ್ಯದ ಹೆಚ್ಚುವರಿ ರೀಚಾರ್ಜ್ ಯೋಜನೆಯನ್ನು ಉಚಿತವಾಗಿ ಪಡೆಯುತ್ತಿರಿ. ಉದಾಹರಣೆಗೆ, ನೀವು ರೂ .39 ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡಿದರೆ, ಅದೇ 39 ರೂ. ಪ್ಲಾನ್ ಅನ್ನು ನೀವು ಉಚಿತವಾಗಿ ಪಡೆಯುತ್ತೀರಾ. ಇದರ ಅರ್ಥವೇನೆಂದರೆ 39 ರೂ. ರೀಚಾರ್ಜ್ ಮೇಲೆ, ಬಳಕೆದಾರರು ಸಾಮಾನ್ಯವಾಗಿ 14 ದಿನಗಳ ವ್ಯಾಲಿಡಿಟಿ ಮತ್ತು ಅನಿಯಮಿತ ಕರೆ, ದಿನಕ್ಕೆ 100MB ಡೇಟಾ ಪಡೆಯುತ್ತಾರೆ. ವ್ಯಾಲಿಡಿಟಿ 14 ದಿನಗಳಿಂದ 28 ದಿನಗಳವರೆಗೆ ಎಲ್ಲಾ ಪ್ರಯೋಜನಗಳೊಂದಿಗೆ ವಿಸ್ತರಿಸುತ್ತದೆ. 

ಇದನ್ನೂ ಓದಿ : Gmail New Feature: ಇನ್ಮುಂದೆ ಹ್ಯಾಕರ್ ಗಳು ನಿಮ್ಮ Gmail ಖಾತೆ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಬರಲಿದೆ ಈ ಅದ್ಭುತ ವೈಶಿಷ್ಟ್ಯ

ಏನಿದು ಜಿಯೋಫೋನ್ ಬೈ 1 ಗೆಟ್ 1 ಆಫರ್ ಫ್ರೀ :

ಕೊಡುಗೆಯ ಒಂದು ಭಾಗವಾಗಿ, ಕಂಪನಿಯು BOGO ಆಫರ್ ಅನ್ನು ಒಟ್ಟು ಆರು ಪ್ಲಾನ್‌(Jio Plans)ಗಳಲ್ಲಿ 39 ರಿಂದ 185 ರೂ.ವರೆಗೆ ಆರಂಭಿಸುತ್ತಿದೆ. ಈ ಯೋಜನೆಗಳು ಮತ್ತು ಪ್ರಯೋಜನಗಳ ಸಂಪೂರ್ಣ ವಿವರಗಳಿಗಾಗಿ ಎಲ್ಲಿ ಓದಿ...

 39 ರೂ. ಜಿಯೋಫೋನ್ ರೀಚಾರ್ಜ್ ಯೋಜನೆ ಮತ್ತು BOGO ಆಫರ್  :

39 ರೂ. ಜಿಯೋಫೋನ್(JioPhone) ರೀಚಾರ್ಜ್ ಪ್ಲಾನ್ 14 ದಿನಗಳ ವ್ಯಾಲಿಡಿಟಿ, ದಿನಕ್ಕೆ 100MB ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ನೀಡುತ್ತದೆ. ಬಳಕೆದಾರರು 39 ರೂ.ಪ್ಲಾನ್ ಅನ್ನು ಉಚಿತವಾಗಿ ಪಡೆಯುತ್ತೀರಾ. 

69 ರೂ. ಜಿಯೋಫೋನ್ ರೀಚಾರ್ಜ್ ಪ್ಲಾನ್ ಮತ್ತು BOGO ಆಫರ್ :

ಈ ಪ್ಲಾನ್ ಮೂಲಕ 500MB ಡೇಟಾ, ಅನಿಯಮಿತ ಕರೆ ಮತ್ತು 14 ದಿನಗಳ ವ್ಯಾಲಿಡಿಟಿ(Validity)ಯೊಂದಿಗೆ ಸಿಗಲಿದೆ. ಈ ಯೋಜನೆಯಲ್ಲಿ ಯಾವುದೇ ಉಚಿತ SMS ಲಭ್ಯವಿಲ್ಲ. ಈ ಯೋಜನೆಯೊಂದಿಗೆ, ಬಳಕೆದಾರರು BOGO ಕೊಡುಗೆಯ ಭಾಗವಾಗಿ 69 ರೂ.ಯೋಜನೆಯನ್ನು ಉಚಿತವಾಗಿ ಪಡೆಯುತ್ತಾರೆ.

ಇದನ್ನೂ ಓದಿ : Oukitel WP15 5G: ಆ. 23ಕ್ಕೆ ಲಾಂಚ್ ಆಗಲಿದೆ ವಿಶ್ವದ ಮೊದಲ 15,600mAh ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌

75 ರೂ. ಜಿಯೋಫೋನ್ ರೀಚಾರ್ಜ್ ಪ್ಲಾನ್ ಮತ್ತು BOGO ಆಫರ್ :

ಈ  ಪ್ರಿಪೇಯ್ಡ್ ಜಿಯೋಫೋನ್ ಪ್ಲಾನ್ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದರ ಜೊತೆಗೆ, ಇದು ದಿನಕ್ಕೆ 3GB ಡೇಟಾ(Data) ಮತ್ತು ಅನಿಯಮಿತ ಕರೆಗಳನ್ನು ಸಹ ನೀಡುತ್ತದೆ.  BOGO ಆಫರ್ ಅನ್ವಯವಾಗುತ್ತದೆ ಮತ್ತು ಬಳಕೆದಾರರು 75 ರೂ. ಪ್ಲಾನ್ ಅನ್ನು ಉಚಿತವಾಗಿ ಪಡೆಯುತ್ತೀರಾ.

125 ರೂ. ಜಿಯೋಫೋನ್ ರೀಚಾರ್ಜ್ ಪ್ಲಾನ್ ಮತ್ತು BOGO ಆಫರ್ :

ಈ ಯೋಜನೆಯು 500MB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ಯೋಜನೆಯೊಂದಿಗೆ BOGO ಕೊಡುಗೆ ಕೂಡ ಅನ್ವಯವಾಗುತ್ತದೆ.

155 ರೂ. ಜಿಯೋಫೋನ್ ರೀಚಾರ್ಜ್ ಯೋಜನೆ ಮತ್ತು BOGO ಆಫರ್ :

ಇದು ಎರಡನೇ ಅತ್ಯಂತ ದುಬಾರಿ ಜಿಯೋಫೋನ್ ಪ್ಲಾನ್ ಮತ್ತು ಇದು 28 ದಿನಗಳ ವ್ಯಾಲಿಡಿಟಿ, 1GB ದೈನಂದಿನ ಡೇಟಾ ಮಿತಿ ಮತ್ತು ಅನಿಯಮಿತ ಕರೆಗಳೊಂದಿಗೆ ಬರುತ್ತದೆ. ಇದರೊಂದಿಗೆ ಬಳಕೆದಾರರು 155 ರೂ. ಹೆಚ್ಚುವರಿ ರೀಚಾರ್ಜ್ ಯೋಜನೆಯನ್ನು ಉಚಿತವಾಗಿ ಪಡೆಯುತ್ತಾರೆ. 

ಇದನ್ನೂ ಓದಿ : Smartphone Tips And Tricks: ಸ್ಮಾರ್ಟ್ ಫೋನ್ ಕಳೆದುಹೋದರೆ ತಕ್ಷಣ ನೀವು ಮಾಡಲೇ ಬೇಕಾದ ಕೆಲಸ ಇದು

185 ರೂ. ಜಿಯೋಫೋನ್ ರೀಚಾರ್ಜ್ ಯೋಜನೆ ಮತ್ತು BOGO ಆಫರ್ :

ಇದು ಅನಿಯಮಿತ ಕರೆ, ದಿನಕ್ಕೆ 2GB ಡೇಟಾವನ್ನು ಒಳಗೊಂಡಿದೆ ಮತ್ತು ಇದು ರೀಚಾರ್ಜ್ ಮಾಡಿದ ದಿನದಿಂದ 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News