Google Search Redesign For Mobile - ನವದೆಹಲಿ: ಮೊಬೈಲ್ ಫೋನ್ ನಲ್ಲಿ ಗೂಗಲ್ ಸರ್ಚ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು ಕಂಪನಿ ಮೊಬೈಲ್ ಗೂಗಲ್ ಸರ್ಚ್ ಅನ್ನು ಮರುವಿನ್ಯಾಸಗೊಳಿಸಿದೆ. ಮುಂಬರುವ ದಿನಗಳಲ್ಲಿ ಬಳಕೆದಾರರಿಗೆ ಮೊಬೈಲ್ ನಲ್ಲಿ ಗೂಗಲ್ ಸರ್ಚ್ ನ ಬೇರೆ ವಿನ್ಯಾಸ ಕಾಣಿಸಿಕೊಳ್ಳಲಿದೆ. ಸರ್ಚ್ ಎಂಜಿನ್ ನ ದೈತ್ಯ ಕಂಪನಿಯಾಗಿರುವ ಗೂಗಲ್ ತನ್ನ ಬ್ಲಾಗ್ ನಲ್ಲಿ ಈ ಕುರಿತು ಮಾಹಿತಿ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ Google ನ ಡಿಸೈನರ್ Aileen Cheng, ಬಳಕೆದಾರರ ಸಂಪೂರ್ಣ ಗಮನ ಸರ್ಚ್ ಕಂಟೆಂಟ್ ನತ್ತ ಸೆಳೆಯುವುದು ನೂತನ ಫಾರ್ಮ್ಯಾಟ್ ನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಇದರಿಂದ ಬಳಕೆದಾರರು ಸುಲಭವಾಗಿ ಹಾಗೂ ವೇಗವಾಗಿ ತಾವು ಹುಡುಕುತ್ತಿರುವ ಮಾಹಿತಿಯವರೆಗೆ ತಲುಪಲಿದ್ದಾರೆ. ಇದಕ್ಕಾಗಿ ಡಿಸೈನರ್ ಗಳು ದೊಡ್ಡ ಹಾಗೂ ಬೋಲ್ಡ್ ಟೆಕ್ಸ್ಟ್ ನ ಬಳಕೆ ಮಾಡಿದ್ದಾರೆ. ಇದರ ಜೊತೆಗೆ ಸೆಕ್ಷನ್ ಟೈಟಲ್ ಗಳ ಗಾತ್ರದಲ್ಲಿಯೂ ಕೂಡ ಹೆಚ್ಚಳ ಮಾಡಲಾಗಿದೆ. ಇದರಿಂದ ಬಳಕೆದಾರರಿಗೆ ಉತ್ತಮ ಸರ್ಚ್ ಅನುಭವ ಸಿಗಲಿದೆ. Google ಸರ್ಚ್ ಅನ್ನು ಮತ್ತಷ್ಟು ಸುಂದರವಾಗಿಸಲು ತನ್ನದೇ ಆದ ಫಾಂಟ್ ಗಳನ್ನು ಮುಂಬರುವ ದಿನಗಳಲ್ಲಿ ಜೋಡಿಸಲಿದ್ದು, ಈ ಫಾಂಟ್ ಗಳು ಪ್ರಸ್ತುತ Gmail ಹಾಗೂ Android ಗಳಲ್ಲಿ ಮಾತ್ರ ಕಾಣಿಸುತ್ತಿದೆ.
Visual Space ನಲ್ಲಿ ಬದಲಾವಣೆ
Google ಸರ್ಚ್ ರಿಸಲ್ಟ್ ನ ವಿಶುಯಲ್ ಸ್ಪೇಸ್ ನಲ್ಲಿಯೂ ಕೂಡ ಬದಲಾವಣೆ ಮಾಡಿದ್ದು, ಇದು ಬಳಕೆದಾರರ ರೀಡಿಂಗ್ ಏಕ್ಸ್ಪಿಯರನ್ಸ್ ಅನ್ನು ಮತ್ತಷ್ಟು ಉತ್ತಮಗೊಳಿಸಲಿದೆ. ಇದಲ್ಲದೆ ಗೂಗಲ್ ಬೋಲ್ಡ್ ಕಲರ್ ಹಾಗೂ ಮ್ಯೂಟೆಡ್ ಟೋನ್ ಅನ್ನು ಪ್ರಯೋಗಿಸಿದೆ. ಇದರಿಂದ ಬಳಕೆದಾರರ ಗಮನ ನೇರವಾಗಿ ಆವಶ್ಯಕ ಮಾಹಿತಿಯ ಮೆಲಿರಲಿದೆ.
ಇದನ್ನು ಓದಿ- Google Search ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ Google
ರೌಂಡೆಡ್ ಡಿಸೈನ್ ನಲ್ಲಿ ಕಾಣಿಸಲಿದೆ ಸರ್ಚ್ ರಿಸಲ್ಟ್
ಮೊಬೈಲ್ ಗೂಗಲ್ ಸರ್ಚ್ ನ ನೂತನ ಅಪ್ಡೇಟ್ ಅನ್ನು ರೌಂಡೆಡ್ ಡಿಸೈನ್ ತೋರಿಸಲಾಗುತ್ತಿದೆ. ಈ ಬದಲಾವಣೆ ರೌಂಡೆಡ್ ಐಕಾನ್ ಹಾಗೂ ಹೆಚ್ಚು ವಿಜಿಬಲ್ ಆಗಿದೆ.
ಇದನ್ನು ಓದಿ- GMAIL ನ ಈ Top Secret Feature ಗಳು ನಿಮಗೂ ಗೊತ್ತಿರಲಿಕ್ಕಿಲ್ಲ
ಶೀಘ್ರವೇ ಸಿಗಲಿದೆ ನೂತನ ಅಪ್ಡೇಟ್
ಮೊಬೈಲ್ ನಲ್ಲಿ Google Searchನ ನೂತನ ಅಪ್ಡೇಟ್ ಶೀಘ್ರದಲ್ಲಿಯೇ ಜಾರಿಯಾಗಲಿದೆ. ಆದರೆ, ಇದುವರೆಗೆ ಕಂಪನಿ ಈ ನೂತನ ಅಪ್ಡೇಟ್ ಜಾರಿ ಕುರಿತು ಯಾವುದೇ ಅಧಿಕೃತ ದಿನಾಂಕ ಪ್ರಕಟಿಸಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.