ಅನಿರೀಕ್ಷಿತ ಸ್ಪರ್ಧಿಯನ್ನು ಹೊರಹಾಕಿ ಟ್ವಿಸ್ಟ್ ನೀಡಿದ ಬಿಗ್ ಬಾಸ್! ದೊಡ್ಮನೆಯಿಂದ ಕಣ್ಣೀರು ಹಾಕುತ್ತಾ ಹೊರಗೆ ಹೋದವರು ಯಾರು ಗೊತ್ತಾ?

Bigg Boss Elimination: ಈ ವಾರ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಿದ ಸ್ಪರ್ಧಿಯ ಮಾಹಿತಿ ಇದೀಗ ಹೊರಬಿದ್ದಿದೆ.   

Written by - Savita M B | Last Updated : Dec 22, 2024, 08:05 AM IST
  • ಜೊತೆಗೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಿದ್ದಾರೆ ಅನ್ನೋದು ಬಹಿರಂಗವಾಗಿದೆ.
  • ಈ ವಾರ ಅನಿರೀಕ್ಷಿತ ಸ್ಪರ್ಧಿ 'ರಂಜಿತ್' ನಿರ್ಗಮಿಸಿದ್ದಾರೆ.
ಅನಿರೀಕ್ಷಿತ ಸ್ಪರ್ಧಿಯನ್ನು ಹೊರಹಾಕಿ ಟ್ವಿಸ್ಟ್ ನೀಡಿದ ಬಿಗ್ ಬಾಸ್! ದೊಡ್ಮನೆಯಿಂದ ಕಣ್ಣೀರು ಹಾಕುತ್ತಾ ಹೊರಗೆ ಹೋದವರು ಯಾರು ಗೊತ್ತಾ?   title=

Bigg Boss: ಬಿಗ್ ಬಾಸ್ ವಿಜಯ್ ಟಿವಿಯಲ್ಲಿ ಪ್ರಸಾರವಾಗುವ 100 ದಿನಗಳನ್ನು ಆಧರಿಸಿದ ಗೇಮ್ ಶೋ. ಈ ಕಾರ್ಯಕ್ರಮವು ಹಿಂದಿಯಲ್ಲಿ ಹಲವು ವರ್ಷಗಳಿಂದ ಪ್ರಸಾರವಾಗಿದ್ದರೂ, ಇದನ್ನು 2017 ರಲ್ಲಿ ಮಾತ್ರ ತಮಿಳಿನಲ್ಲಿ ಪ್ರಾರಂಭಿಸಲಾಯಿತು. ಕಮಲ್ ಹಾಸನ್ ಹೋಸ್ಟ್ ಮಾಡಿದ ಮೊದಲ ಸೀಸನ್ ಅನೇಕ ವಿವಾದಗಳನ್ನು ಎದುರಿಸಿತು.. ಆದರೆ ಬಳಿಕ ಕಮಲ್ ನಂತರ ತಮ್ಮ ಹೋಸ್ಟಿಂಗ್‌ ಟ್ಯಾಲೆನಿಂದ ಅಪಾರ ಅಭಿಮಾನಿಗಳನ್ನು ಸೆಳೆದರು..  

ಕಮಲ್ ಹಾಸನ್ ಸತತ 6 ಸೀಸನ್‌ಗಳಲ್ಲಿ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡಿದರೂ, 7 ನೇ ಸೀಸನ್‌ನಲ್ಲಿ ಅವರ ಕಾಮೆಂಟ್‌ಗಳು ಅನೇಕ ವಿವಾದಗಳಿಗೆ ಕಾರಣವಾಯಿತು. ಅದರಲ್ಲೂ ಪ್ರದೀಪ್ ಆಂಟೋನಿ ಅವರ ರೆಡ್ ಕಾರ್ಡ್ ವಿಷಯ ಭೂಕಂಪನದಂತೆ ಸ್ಫೋಟಗೊಂಡಿತ್ತು.. ಕಮಲ್ ಹಾಸನ್ ಅವರು ತಮ್ಮ ಸಹನಟಿ ಮಾಯಾ ಅವರನ್ನು ಅನೇಕ ಬಾರಿ ಉಳಿಸಿದ್ದಾರೆ ಎಂದು ನೆಟಿಜನ್‌ಗಳು ಟೀಕಿಸಿದ್ದರು..  

ಇದನ್ನೂ ಓದಿ-ನೀ ಹಿಂಗ ನೋಡಬ್ಯಾಡ.. ನೋಡಿ ಕೆಣಕ ಬ್ಯಾಡ.. ದಿಲ್‌ ದಾರಿ ತಪ್ಪುತ್ತೆ ಜಾನ್ವಿ..! ಫೋಟೋಸ್‌ ಇಲ್ಲಿವೆ..

ಪ್ರದೀಪ್ ಆಂಟೋನಿ ಎವಿಕ್ಷನ್ ಚರ್ಚೆಗೆ ಗ್ರಾಸವಾದಾಗ ಕಮಲ್ ಮುಚ್ಚಿಟ್ಟದ್ದಕ್ಕೆ ಬಿಗ್ ಬಾಸ್ ಅಭಿಮಾನಿಗಳು ಕೆರಳಿದ್ದರು. ಅದೇ ರೀತಿ ಕಮಲ್ ಬಿಗ್ ಬಾಸ್ ವೇದಿಕೆಯನ್ನು ರಾಜಕೀಯ ಪ್ರಚಾರದ ವೇದಿಕೆಯನ್ನಾಗಿ ಪರಿವರ್ತಿಸಿದ್ದಾರೆ.. ಅನೇಕ ಬಾರಿ ಇದು ರಿಯಾಲಿಟಿ ಎಂಟರ್‌ಟೈನ್‌ಮೆಂಟ್ ಶೋ ಆಗಿದ್ದು, ಈ ಕಾರ್ಯಕ್ರಮವು ರಾಜಕೀಯ ಛಾಯೆಯನ್ನು ಹೊಂದಿದೆ ಎಂದು ವಾದ ಶುರುವಾಗಿತ್ತು.. ಇಂತಹ ಟೀಕೆಗಳಿಗೆ ಅಂತ್ಯ ಹಾಡಲು ಮತ್ತು ತಮ್ಮ ವೈಯಕ್ತಿಕ ಕಾರಣಗಳಿಂದ ಕಮಲ್ ಬಿಗ್ ಬಾಸ್ ಸೀಸನ್ 8 ರಿಂದ ಹೊರಬಂದರು. ಸದ್ಯ ವಿಜಯ್ ಸೇತುಪತಿ ತಮ್ಮದೇ ಶೈಲಿಯಲ್ಲಿ ಬಿಗ್ ಬಾಸ್ ಶೋ ನಡೆಸಿಕೊಡುತ್ತಿದ್ದರೂ ಸ್ಪರ್ಧಿಗಳಿಗೆ ಮಾತನಾಡಲು ಜಾಗ ನೀಡುತ್ತಿಲ್ಲ ಎಂಬ ಆರೋಪ ಅವರ ಮೇಲಿದೆ.

ಹೀಗಿರುವಾಗ ಬಿಗ್ ಬಾಸ್ ಶೋ 76 ದಿನ ತಲುಪಿದೆ.. ಜೊತೆಗೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗಿದ್ದಾರೆ ಅನ್ನೋದು ಬಹಿರಂಗವಾಗಿದೆ. ಅದರಂತೆ, ಈ ವಾರ ಅಂಶಿತಾ ಕೊನೆಯ ಸ್ಥಾನದಲ್ಲಿದ್ದು ಅವರು ಹೊರಹೋಗುವ ಸಾಧ್ಯತೆ ಇದೆ ಎಂದು ನೆಟಿಜನ್‌ಗಳು ಹೇಳುತ್ತಿರುವಾಗಲೇ, ಈ ವಾರ ಅನಿರೀಕ್ಷಿತ ಸ್ಪರ್ಧಿ 'ರಂಜಿತ್' ನಿರ್ಗಮಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳದೆ ಸದ್ದಿಲ್ಲದೆ ಆಡುತ್ತಿದ್ದ ರಂಜಿತ್, ಎಲ್ಲ ಸ್ಪರ್ಧಿಗಳೊಂದಿಗೆ ಸಂಬಂಧಿಕರಂತೆ ಸಂವಾದ ನಡೆಸಿದರು. ಹಾಗಾಗಿ ಇತರ ಮನೆಯವರು ಅವರ ಹೊರಹಾಕುವಿಕೆಯನ್ನು ಕಣ್ಣೀರಿನಿಂದ ಒಪ್ಪಿಕೊಂಡಿದ್ದಾರೆ ಎಂಬುದು ಗಮನಾರ್ಹ. 

ಇದನ್ನೂ ಓದಿ-ವಿಚ್ಚೇದಿತ ಸೆಲೆಬ್ರಿಟಿಯೊಂದಿಗೆ ಮದುವೆಗೆ ರೆಡಿಯಾದ ಖ್ಯಾತ ನಟಿ!   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News