Cheapest 5G JioPhone Launching Soon: ಈ ವರ್ಷದ ಆರಂಭದಲ್ಲಿ ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ 5ಜಿ ಜಿಯೋ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿತ್ತು. ಇದೀಗ ಈ ಫೋನ್ನ ಮೊದಲ್ ಚಿತ್ರ ಮುನ್ನಲೆಗೆ ಬಂದಿದೆ. JioPhone 5G ಯುನಿಟ್ ಅನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು ಇದರೊಂದಿಗೆ ಅದರ ಬಿಡುಗಡೆಯ ದಿನಾಂಕ ಮತ್ತು ಬೆಲೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಬಜೆಟ್ 5G ಫೋನ್:
ಲಭ್ಯವಿರುವ ಮಾಹಿತಿಯ ಪ್ರಕಾರ, ಈ 5ಜಿ ಫೋನ್ ಅನ್ನು ಬಜೆಟ್ 5ಜಿ ಫೋನ್ ಎಂದು ಹೇಳಲಾಗುತ್ತಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ ಸದ್ಯ ಲಭ್ಯವಿರುವ ಇತರ 5G ಫೋನ್ಗಳಿಗಿಂತ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಇದರ ಬೆಲೆ 10,000 ರೂ.ಗಿಂತ ಕಡಿಮೆಯಿರಬಹುದು ಎಂದು ಊಹಿಸಲಾಗಿದೆ. ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ 5G ಫೋನ್ ಆಗಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Google Secrets Tricks: ಗೂಗಲ್ ನ ಈ ಸೀಕ್ರೆಟ್ಸ್ ಬಗ್ಗೆ ಕೆಲವೇ ಮಂದಿಗಷ್ಟೇ ಗೊತ್ತು!
JioPhone 5G ವಿಶೇಷಣಗಳು:
* ಆಂಡ್ರಾಯ್ಡ್ ಸೆಂಟ್ರಲ್ ಪ್ರಕಾರ, JioPhone 5G 6.5-ಇಂಚಿನ IPS LCD HD+ ರೆಸಲ್ಯೂಶನ್ ಡಿಸ್ಪ್ಲೇ ಜೊತೆಗೆ 1600 x 720 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿರುತ್ತದೆ.
* ಫೋನ್ ಸೈಡ್-ಫೇಸಿಂಗ್ ಫಿಂಗರ್ಪ್ರಿಂಟ್ ಸ್ಕ್ಯಾನರ್, 8-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು 13-ಮೆಗಾಪಿಕ್ಸೆಲ್ + 2-ಮೆಗಾಪಿಕ್ಸೆಲ್ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ.
* ಫೋನ್ 5,000mAh ಬ್ಯಾಟರಿಯೊಂದಿಗೆ ಬರುತ್ತದೆ, ಇದು 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಮೈಕ್ರೊ SD ಕಾರ್ಡ್ ಸ್ಲಾಟ್, ಡ್ಯುಯಲ್ ಸಿಮ್ ಸ್ಲಾಟ್ ಮತ್ತು n3, n5, n28, n40, ಮತ್ತು n78 5G ಬ್ಯಾಂಡ್ಗಳಿಗೆ ಬೆಂಬಲವನ್ನು ಹೊಂದಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Instagram ಸ್ಟೋರಿಯನ್ನು ಡೌನ್ಲೋಡ್ ಮಾಡಿ ಸೇವ್ ಮಾಡುವುದು ಹೇಗೆ?
5ಜಿ ಜಿಯೋ ಫೋನ್ ವೈಶಿಷ್ಟ್ಯಗಳು:
>> ದುಬಾರಿ ಫೋನ್ಗಳನ್ನು ಖರೀದಿಸಲು ಹಿಂಜರಿಯುತ್ತಿರುವವರಿಗೆ ಇದು ಅತ್ಯುತ್ತಮ ಕೈಗೆಟುಕುವ 5ಜಿ ಫೋನ್ ಆಗಲಿದೆ.
>> ಇದರಲ್ಲಿ ಯಾವ ಚಿಪ್ಸೆಟ್ ಅನ್ನು ಬಳಸಲಾಗುವುದು ಎಂಬುದು ಸ್ಪಷ್ಟವಾಗಿಲ್ಲ. ಆದರೂ, ಫೋನ್ನಲ್ಲಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 13-ಮೆಗಾಪಿಕ್ಸೆಲ್ + 2-ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುತ್ತದೆ ಎಂದು ಸೋರಿಕೆಯಾಗಿರುವ ಮಾಹಿತಿಗಳಿಂದ ತಿಳಿದುಬಂದಿದೆ.
>> ಫೋನ್ನ ಮುಂಭಾಗದಲ್ಲಿ, ವಾಟರ್ಡ್ರಾಪ್ ನಾಚ್ ಡಿಸ್ಪ್ಲೇ ಇದೆ.
>> ಅದರ ಹಿಂಭಾಗದ ಪ್ಯಾನೆಲ್ ಲಂಬ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.
>> ಎಲ್ಇಡಿ ಫ್ಲ್ಯಾಷ್ ಮತ್ತು ಮಧ್ಯದಲ್ಲಿ ಜಿಯೋ ಲೋಗೋ ಇದೆ.
>> 'ಅಲ್ಟಿಮೇಟ್ ಸ್ಪೀಡ್, ಅನಿಯಮಿತ ಅನುಭವಗಳು' ಎಂದು ಕೆಳಗೆ ಬರೆಯಲಾಗಿದೆ. ಆದಾಗ್ಯೂ, ಇವೆಲ್ಲಾ ಸೋರಿಕೆ ಮಾಹಿತಿಯಾಗಿದ್ದು, ಇದರ ಬಗ್ಗೆ ಕಂಪನಿಯ ವತಿಯಿಂದ ಯಾವುದೇ ರೀತಿಯ ಮಾಹಿತಿಗಳನ್ನು ಹಂಚಿಕೊಂಡಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.