Jio ನೀಡುತ್ತಿದೆ ಮನೆಯಿಂದಲೇ ದುಡಿಯುವ ಅವಕಾಶ, ಆರಾಮದಾಯಕ ಕೆಲಸಕ್ಕೆ ಸಿಗುತ್ತದೆ ಕೈ ತುಂಬಾ ವೇತನ

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಕಂಪನಿಯು  ಹೊಸ ಪ್ಲಾಟ್ ಫಾರಂವೊಂದನ್ನು ಪ್ರಾರಂಭಿಸಿದೆ. ಇದು ಬಳಕೆದಾರರಿಗೆ ಖ್ಯಾತಿ ಮತ್ತು ಹಣವನ್ನು ಗಳಿಸುವ ಅವಕಾಶವನ್ನು ನೀಡುತ್ತದೆ.   

Written by - Ranjitha R K | Last Updated : Aug 10, 2022, 08:55 AM IST
  • ರಿಲಯನ್ಸ್ ಜಿಯೋ ಹೊಸ ಗೇಮ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್
  • ಬಳಕೆದಾರರಿಗೆ ಗೇಮಿಂಗ್ ಚಾನಲ್ ಅನ್ನು ಒದಗಿಸುತ್ತದೆ.
  • ಹೆಚ್ಚಿನ ಜನರಿಗೆ ಜನರಿಗೆ ಉದ್ಯೋಗವನ್ನು ಒದಗಿಸುವುದು ಇದರ ಉದ್ದೇಶ
Jio ನೀಡುತ್ತಿದೆ ಮನೆಯಿಂದಲೇ ದುಡಿಯುವ ಅವಕಾಶ, ಆರಾಮದಾಯಕ ಕೆಲಸಕ್ಕೆ ಸಿಗುತ್ತದೆ ಕೈ ತುಂಬಾ ವೇತನ  title=
JioGamesWatch (file photo)

ಬೆಂಗಳೂರು : ರಿಲಯನ್ಸ್ ಜಿಯೋ ಹೊಸ ಗೇಮ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಸೇರಿಸುವ ಮೂಲಕ ತನ್ನ ಗೇಮಿಂಗ್ ಆರ್ಕಿಟೆಕ್ಚರ್ ಅನ್ನು ವಿಸ್ತರಿಸುತ್ತಿದೆ. JioGamesWatch ಬಳಕೆದಾರರಿಗೆ ಲೈವ್ ಗೇಮ್‌ಪ್ಲೇ ಮತ್ತು ವೀಡಿಯೊ-ಆನ್-ಡಿಮಾಂಡ್ ಸ್ಟ್ರೀಮಿಂಗ್ ಸೇರಿದಂತೆ ಗೇಮಿಂಗ್ ಚಾನಲ್ ಅನ್ನು ಒದಗಿಸುತ್ತದೆ. ಹೊಸ ವೇದಿಕೆಯು ಅತ್ಯಾಕರ್ಷಕ ಆಟಗಳನ್ನು ವೀಕ್ಷಿಸಲು ಅವಕಾಶವನ್ನು ನೀಡುತ್ತದೆ. JioGames ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಇದು ಗೇಮಿಂಗ್ ಸಾಫ್ಟ್‌ವೇರ್ ಆಗಿದ್ದು, ಆಟಗಾರರು, ಡೆವಲಪರ್‌ಗಳು ಮತ್ತು ಪಬ್ಲಿಶರ್ ವರೆಗೆ ಪ್ರತಿಯೊಬ್ಬರನ್ನು ಕೂಡಾ ಆಕರ್ಷಿಸುತ್ತಿದೆ. ಇದು ಆನ್‌ಲೈನ್ ಗೇಮ್, ಟೂರ್ನಮೆಂಟ್   ಮತ್ತು  ಇ-ಕ್ರೀಡೆಗಳನ್ನು ಡೆವೆಲಪ್ ಮಾಡುವ ಅವಕಾಶಗಳನ್ನು ಒದಗಿಸುತ್ತದೆ.

JioGamesWatch :
JioGamesWatch ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಇದೀಗ ಲೈವ್ ಆಟಗಳನ್ನು ಪ್ರಸಾರ ಮಾಡಲು  ಗೇಮರ್ ಗಳಿಗೆ ಅನುಮತಿ ನೀಡುವ ಮೂಲಕ JioGamesನ  ಕಾರ್ಯಕ್ಷಮತೆಯನ್ನು ವಿಸ್ತರಿಸುತ್ತಿದೆ. ಕಡಿಮೆ ಸುಪ್ತತೆಯೊಂದಿಗೆ ಯಾವುದೇ ಸಾಧನದೊಂದಿಗೆ ತಮ್ಮ ಕಂಟೆಂಟ್ ಅನ್ನು  ಲೈವ್-ಸ್ಟ್ರೀಮ್ ಮಾಡಲು ಕ್ರಿಯೇಟರ್ ಗಳಿಗೆ ಸಹಾಯವಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. JioGames ಹೊಸ ಸ್ಟ್ರೀಮಿಂಗ್ ಸೇವೆಯಲ್ಲಿ ಲಕ್ಷಾಂತರ ವೀಕ್ಷಕರನ್ನು ನಿರೀಕ್ಷಿಸುತ್ತದೆ. ಜಿಯೋ ಗೇಮ್ಸ್ ವಾಚ್‌ನ ಉದ್ದೇಶವು ಗೇಮಿಂಗ್ ಜಗತ್ತಿಗೆ ಸಂಬಂಧಿಸಿದ ಜನರಿಗೆ ಉದ್ಯೋಗವನ್ನು ಒದಗಿಸುವುದು ಮತ್ತು ಆನ್‌ಲೈನ್ ಗೇಮಿಂಗ್‌ಗೆ ಸುಲಭವಾದ ರೀತಿಯಲ್ಲಿ ವೇದಿಕೆಯನ್ನು ಒದಗಿಸುವುದಾಗಿದೆ ಎನ್ನುತ್ತದೆ ಕಂಪನಿ. 

ಇದನ್ನೂ ಓದಿ : Future Smartphone: ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳು ಹೇಗಿರಲಿವೆ ಗೊತ್ತಾ? ವಿಡಿಯೋ ನೋಡಿ ಗೊತ್ತಾಗುತ್ತದೆ

ಎಲ್ಲೆಡೆ ಲಭ್ಯವಿದೆ JioGamesWatch : 
JioGamesWatch ಪ್ಲಾಟ್‌ಫಾರ್ಮ್ ಪ್ರೇಕ್ಷಕರ ಸಮೀಕ್ಷೆಗಳು ಮತ್ತು ಭಾವನೆಗಳ ಮೂಲಕ ಅಭಿಮಾನಿಗಳ ಬೆಂಬಲ ಸೇರಿದಂತೆ ವೀಕ್ಷಕರಿಗೆ ಸಾಕಷ್ಟು ಸಂವಾದಾತ್ಮಕ ಅವಕಾಶಗಳನ್ನು ನೀಡುತ್ತದೆ. Android, iOS ಮತ್ತು ಸೆಟ್-ಟಾಪ್-ಬಾಕ್ಸ್  ಸಾಧನಗಳಲ್ಲಿ ಇದು ಲಭ್ಯವಿದೆ. ಬಳಕೆದಾರರು, ಕ್ರಿಯೇಟರ್ಸ್, ಮತ್ತು  ಇನ್ಫ್ಲುಯೆನ್ಸರ್  VOD ಗೆ ಚಂದಾದಾರರಾಗಬಹುದು.

ಪ್ಲಾಟ್‌ಫಾರ್ಮ್  ಗೇಮ್ ಕ್ರಿಯೇಟರ್ ಗಳಿಗೆ ಮೊಬೈಲ್ ಸ್ಟ್ರೀಮಿಂಗ್‌ಗಾಗಿ ವಿವಿಧ ರೆಸಲ್ಯೂಶನ್ ಆಯ್ಕೆಗಳಲ್ಲಿ ಆಟಗಳನ್ನು ಸ್ಟ್ರೀಮ್ ಮಾಡಲು ಅನುಮತಿಸುತ್ತದೆ. JioGamesWatch ಆದರ್ಶ ಸ್ಟ್ರೀಮ್ ಸೆಟ್ಟಿಂಗ್ ಅನ್ನು ಹೊಂದಿದೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ಅನೇಕ ಕ್ರಿಯೇಟರ್ ಗಳ ಸಂಪನ್ಮೂಲಗಳು ಲಭ್ಯವಿದೆ. ಹೊಂದಾಣಿಕೆಯ ಸಾಧನಗಳನ್ನು ಹೊಂದಿರುವ ಬಳಕೆದಾರರು ಭಾರತದಲ್ಲಿ JioGamesWatch ಸೇವೆಯನ್ನು ಆನಂದಿಸಬಹುದು.

ಇದನ್ನೂ ಓದಿ : ತಕ್ಷಣ WhatsApp update ಮಾಡಿಕೊಳ್ಳಿ, ಬಂದಿದೆ ಬಹು ನಿರೀಕ್ಷಿತ ವೈಶಿಷ್ಟ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News