ನವದೆಹಲಿ: Gaming Platform Winz - ಗೇಮಿಂಗ್ ಸ್ಟಾರ್ಟ್ಅಪ್ Winzo ಮುಂದಿನ ಒಂದು ವರ್ಷದೊಳಗೆ ಒಂದು ಲಕ್ಷಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಕಂಪನಿಯ ಸಹ-ಸಂಸ್ಥಾಪಕಿ ಸೌಮ್ಯ ಸಿಂಗ್ ರಾಥೋಡ್, “ಆಟಗಳ ಸಂಖ್ಯೆಯಲ್ಲಿನ ಹೆಚ್ಚಳದೊಂದಿಗೆ, ಕಂಪನಿಯು ಗೃಹಿಣಿಯರು, ಶಿಕ್ಷಕರು ಮತ್ತು ಪ್ರಭಾವಿಗಳನ್ನು ಕೆಲಸ ಆಧಾರಿತ ಪಾವತಿ ವ್ಯವಸ್ಥೆಯಡಿಯಲ್ಲಿ ವಿವಿಧ ಕಾರ್ಯಗಳಿಗಾಗಿ ತೊಡಗಿಸಿಕೊಳ್ಳುತ್ತಿದೆ ಮತ್ತು ಮುಂಬರುವ ದಿನಗಳಲ್ಲಿ ಅದರ ಮೇಲೆ ಕಾರ್ಯನಿರ್ವಹಿಸಲಿದೆ. ಮುಂದಿನ ಒಂದು ವರ್ಷದಲ್ಲಿ ಈ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ಫ್ಲುಯೇನ್ಸರ್ ಗಳಿಗೆ 5 ರಿಂದ 10 ಲಕ್ಷ ರೂ
"ಎರಡು ವರ್ಷಗಳ ಹಿಂದೆ, ವಿಂಜೊ ತಿಂಗಳಿಗೆ ಸುಮಾರು 30,000-40,000 ರೂ ಗಳಿಸುವ 25,000 ಮೈಕ್ರೋ ಪ್ರಭಾವಶಾಲಿಗಳೊಂದಿಗೆ ಕೆಲಸ ಮಾಡುತ್ತಿದ್ದು, ಇದೀಗ ಈ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆಯಾಗಿದ್ದು, ಅವರು ತಿಂಗಳಿಗೆ ಸರಾಸರಿ 75 ಸಾವಿರದಿಂದ 1 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಈ ಸಂಖ್ಯೆ ಎರಡು ಲಕ್ಷಕ್ಕೆ ದ್ವಿಗುಣಗೊಳ್ಳಲಿದೆ ಮತ್ತು ಅವರ ಆದಾಯವೂ ಎರಡರಿಂದ ಎರಡೂವರೆ ಪಟ್ಟು ಹೆಚ್ಚಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸೌಮ್ಯಾ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ-WhatsApp Update: ಇನ್ಮುಂದೆ ನೀವು ಎಷ್ಟು ಹೊತ್ತು ಆನ್ಲೈನ್ ಆಗಿದ್ದೀರಿ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ!
ವಿಂಜೊ ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ಬೆಂಗಾಲಿ ಮತ್ತು ಭೋಜ್‌ಪುರಿ ಸೇರಿದಂತೆ ಒಟ್ಟು 12 ಭಾಷೆಗಳಲ್ಲಿ ಆಟಗಳನ್ನು ಒದಗಿಸುತ್ತದೆ ಮತ್ತು 80 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿ-Largest Comet Towards Earth: ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಇದುವರೆಗಿನ ಅತಿ ದೊಡ್ಡ ಧೂಮಕೇತು
ಅನುವಾದಕರಿಗೆ 35-50 ಸಾವಿರ ರೂ
ಪ್ರಾಜೆಕ್ಟ್ ಆಧಾರದ ಮೇಲೆ ಕೆಲಸ ಮಾಡುವ ಹಲವಾರು ಭಾಷಾಂತರಕಾರರನ್ನು ವೇದಿಕೆಯು ಜೋಡಿಸಿದೆ ಎಂದು ರಾಥೋರ್ ಹೇಳಿದ್ದಾರೆ. ಎರಡು ವರ್ಷಗಳ ಹಿಂದೆ ವಿಂಜೊ 300-400 ಅನುವಾದಕರೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಈಗ ದೇಶಾದ್ಯಂತ 7 ಸಾವಿರ ಅನುವಾದಕರಿದ್ದಾರೆ. ಮುಂದಿನ ವರ್ಷ ಅನುವಾದಕರ ಸಂಖ್ಯೆ ಕನಿಷ್ಠ 1.5 ರಿಂದ 2 ಪಟ್ಟು ಹೆಚ್ಚಾಗುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ. ಅನುವಾದಕರು ತಿಂಗಳಿಗೆ ಸರಾಸರಿ 35-50 ಸಾವಿರ ರೂ. ಹಣ ಗಳಿಕೆ ಮಾಡುತ್ತಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.