WhatsApp Update: ಇನ್ಮುಂದೆ ನೀವು ಎಷ್ಟು ಹೊತ್ತು ಆನ್ಲೈನ್ ಆಗಿದ್ದೀರಿ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ!

WhatsApp Latest Update: WhatsApp ಶೀಘ್ರದಲ್ಲೇ ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ, ಇದರಿಂದಾಗಿ ಅಪ್ಲಿಕೇಶನ್‌ನ ಗೌಪ್ಯತಾ ಸೆಟ್ಟಿಂಗ್‌ಗಳು ಮತ್ತಷ್ಟು ಉತ್ತಮವಾಗಲಿವೆ. ಅಪ್ಲಿಕೇಶನ್‌ನಲ್ಲಿ ನೀವು ಎಷ್ಟು ಸಮಯ ಆನ್‌ಲೈನ್‌ನಲ್ಲಿದ್ದೀರಿ ಎಂಬುದು ಇದರಿಂದ ಯಾರಿಗೂ ತಿಳಿಯುವುದಿಲ್ಲ.  

Written by - Nitin Tabib | Last Updated : Apr 18, 2022, 04:21 PM IST
  • ಶೀಘ್ರದಲ್ಲಿಯೇ ವಾಟ್ಸ್ ಆಪ್ ನಿಂದ ಹೊಸ ವೈಶಿಷ್ಟ್ಯ ಬಿಡುಗಡೆ
  • ಇದರಿಂದ ನೀವು ನಿಮ್ಮ ಲಾಸ್ಟ್ ಸೀನ್ ಮಾಹಿತಿಯನ್ನು ಮರೆಮಾಚಬಹುದು
  • ಯಾವಾಗ ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ ತಿಳಿಯಲು ಸುದ್ದಿ ಓದಿ
WhatsApp Update: ಇನ್ಮುಂದೆ ನೀವು ಎಷ್ಟು ಹೊತ್ತು ಆನ್ಲೈನ್ ಆಗಿದ್ದೀರಿ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ! title=
WhatsApp Latest Update

WhatsApp Last Seen Settings Update: ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ WhatsApp ಹೊಸ ನವೀಕರಣವನ್ನು ಜಾರಿಗೆ ತರಲಿದೆ, ಇದು ಪ್ಲಾಟ್‌ಫಾರ್ಮ್‌ನ ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಪ್ರಮುಖ ಬದಲಾವಣೆಗಳನ್ನು ತರಲಿದೆ. ಇದರ ನಂತರ ನೀವು ಎಷ್ಟು ಸಮಯದವರೆಗೆ ಆನ್‌ಲೈನ್‌ನಲ್ಲಿ ಇದ್ದೀರಿ ಎಂದು ನಿಮಗೆ ಬೇಕಾದವರಿಂದ ನೀವು ಮರೆಮಾಡಲು ಸಾಧ್ಯವಾಗಲಿದೆ. ಈ ಹೊಸ ಅಪ್‌ಡೇಟ್ ಯಾವುದು ಮತ್ತು ಬಳಕೆದಾರರಿಗೆ ಇದು ಯಾಕೆ ಇಷ್ಟವಾಗಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

WhatsApp ಹೊಸ ನವೀಕರಣವನ್ನು ಬಿಡುಗಡೆ ಮಾಡಲಿದೆ
WABetaInfo ನ ಹೊಸ ವರದಿಯ ಪ್ರಕಾರ, WhatsApp ಹೊಸ ನವೀಕರಣವನ್ನು ಹೊರತರುತ್ತಿದೆ, ಇದು ಪ್ಲಾಟ್‌ಫಾರ್ಮ್‌ನ 'ಲಾಸ್ಟ್ ಸೀನ್' ವೈಶಿಷ್ಟ್ಯದ ಸೆಟ್ಟಿಂಗ್‌ಗಳಲ್ಲಿ ಪ್ರಮುಖ ಬದಲಾವಣೆಯನ್ನು ತರಲಿದೆ. ವರದಿಯ ಪ್ರಕಾರ, ವಾಟ್ಸ್ ಆಪ್ ನ ಈ ವೈಶಿಷ್ಟ್ಯದ ಮೇಲೆ  ಕಾರ್ಯನಿರ್ವಹಿಸುತ್ತಿದ್ದು, ಇದು ಬಳಕೆದಾರರಿಗೆ ಅವರು ಹೆಚ್ಚು ಇಷ್ಟಪಡದ ಅಥವಾ ಹೆಚ್ಚು ಕಿರಿಕಿರಿ ಕೊಡುವ ಜನರಿಂದ ತಮ್ಮ 'ಕೊನೆಯ ವೀಕ್ಷಣೆ' ಯನ್ನು ಮರೆಮಾಚಲು ಅನುಮತಿ ನೀಡಲಿದೆ.

ಈ ವೈಶಿಷ್ಟ್ಯವನ್ನು ಈ ರೀತಿ ಬಳಸಿ
ಈ ಹೊಸ ಅಪ್‌ಡೇಟ್‌ನಲ್ಲಿ ಬರುವ ವೈಶಿಷ್ಟ್ಯದೊಂದಿಗೆ, ನೀವು ನಿಮ್ಮ ಕೊನೆಯ ವೀಕ್ಷಣೆಯ ಮಾಹಿತಿಯನ್ನು ಮರೆಮಾಚಲು ಬಯಸುವ ಜನರನ್ನು ನೀವು ಆಯ್ಕೆ ಮಾಡಬಹುದು. ಈ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ತಮ್ಮ ಕೆಲ ಕಾಂಟ್ಯಾಕ್ಟ್ ಗಳಿಗೆ  'ಲಾಸ್ಟ್ ಸೀನ್' ಮರೆಮಾಡಲು ಆಯ್ಕೆಯನ್ನು ನೀಡಲಿದೆ. ಅಪ್ಲಿಕೇಶನ್‌ನ ಗೌಪ್ಯತೆಯ ಅಡಿಯಲ್ಲಿ ಈ ವೈಶಿಷ್ಟ್ಯವನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ, ಬಳಕೆದಾರರು 'ಲಾಸ್ಟ ಸೀನ್' ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಬೇಕಾಗಲಿದೆ ಮತ್ತು ನಂತರ  ಮೈ ಕಾಂಟಾಕ್ಟ್ ಗೆ ಭೇಟಿ ನೀಡಿ, ಯಾರನ್ನು ಅಥವಾ ಯಾವ ಸಂಪರ್ಕಗಳು ಹೊರತುಪಡಿಸಿ ಇದನ್ನು ಅನ್ವಯಿಸಬೇಕು ಎಂಬುದನ್ನು ಆಯ್ದುಕೊಳ್ಳಬೇಕು. ಈ ರೀತಿಯಾಗಿ ನಿಮಗೆ ಬೇಕಾದವರಿಂದ ನಿಮ್ಮ 'ಲಾಸ್ಟ್ ಸೀನ್' ಮಾಹಿತಿಯನ್ನು ಮರೆಮಾಡಲು ನಿಮಗೆ ಸಾಧಯ್ವಾಗಲಿದೆ.

ಇದನ್ನೂ ಓದಿ-Largest Comet Towards Earth: ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿದೆ ಇದುವರೆಗಿನ ಅತಿ ದೊಡ್ಡ ಧೂಮಕೇತು

ನವೀಕರಣದಲ್ಲಿ ಹಲವು ಹೊಸ ವೈಶಿಷ್ಟ್ಯಗಳು ಲಭ್ಯವಿರುತ್ತವೆ
'ಲಾಸ್ಟ್ ಸೀನ್' ಹೊರತುಪಡಿಸಿ, ಈ ಹೊಸ ಅಪ್‌ಡೇಟ್‌ನಲ್ಲಿ ಹಲವು ಆಸಕ್ತಿದಾಯಕ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಾಗುತ್ತಿದೆ. 'ಕೊನೆಯ ವೀಕ್ಷಣೆ' ಗೌಪ್ಯತೆ ನವೀಕರಣವನ್ನು ಇದೀಗ ಪ್ರೊಫೈಲ್ ಫೋಟೋ ಮತ್ತು ನಿಮ್ಮ 'ಅಬೌಟ್' ವಿಭಾಗಕ್ಕೂ ಕೂಡ ಅನ್ವಯಿಸಲಿದೆ.ಇದಲ್ಲದೆ, ಗ್ರೂಪ್ ಅಡ್ಮಿನ್ ಕೂಡ ವಿಶೇಷ ಅಧಿಕಾರವನ್ನು ಪಡೆಯಲಿದ್ದಾರೆ, ಇದರಿಂದ ಅವರು ಗ್ರೂಪ್ ನಲ್ಲಿ ಬರುವ ಸಂದೇಶಗಳನ್ನು ಗ್ರೂಪ್ ನ ಎಲ್ಲಾ ಸದಸ್ಯರಿಗೆ ಡಿಲೀಟ್ ಮಾಡಲು ಸಾಧ್ಯವಾಗಲಿದೆ. ಈ ಹೊಸ ನವೀಕರಣದ ನಂತರ, ಬಳಕೆದಾರರು WhatsApp ನಲ್ಲಿ ಒಳಬರುವ ಸಂದೇಶಗಳಲ್ಲಿ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿದೆ.

ಇದನ್ನೂ ಓದಿ-Amazon Smartphone Sale: 75 ಸಾವಿರ ಬೆಲೆಯ Samsung 5G ಸ್ಮಾರ್ಟ್ಫೋನ್ ಮೇಲೆ 53 ಸಾವಿರ ರೂ.ಗಳ ರಿಯಾಯಿತಿ!

ಪ್ರಸ್ತುತ ಈ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಲಾಗಿಲ್ಲ ಮತ್ತು ಅವುಗಳ ಪರೀಕ್ಷೆ ನಡೆಯುತ್ತಿದೆ. ಆದರೆ ಈ ಹೊಸ ಅಪ್‌ಡೇಟ್ ಶೀಘ್ರದಲ್ಲೇ ಬಳಕೆದಾರರಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News