ನವದೆಹಲಿ : Meizu, Meizu 18s, Meizu 18s Pro ಮತ್ತು Meizu 18x ಅನ್ನು ಬಿಡುಗಡೆ ಮಾಡಿದೆ. 18s ಮಾದರಿಗಳು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ Meizu 18 ಮತ್ತು 18 Pro ಫೋನ್‌ಗಳ ಅಪ್‌ಗ್ರೇಡ್ ಆವೃತ್ತಿಗಳಾಗಿವೆ. Meizu 18x ಸಂಪೂರ್ಣವಾಗಿ ಹೊಸ ವಿಶೇಷತೆಯೊಂದಿಗೆ ಹೊಸ ಸ್ಮಾರ್ಟ್ಫೋನ್ ಆಗಿದೆ. 18x ನ ಕೆಲವು ಪ್ರಮುಖ ಅಂಶಗಳೆಂದರೆ, 120Hz AMOLED ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 870 ಚಿಪ್ ಮತ್ತು 64 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ. Meizu 18x ನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ
Meizu 18x ನ ವಿಶೇಷತೆಗಳು:
Meizu 18x ಅಳತೆ 165.1 x 76.35 x 7.99 ಮಿಮೀ ಮತ್ತು ತೂಕ 189 ಗ್ರಾಂಗಳಷ್ಟಿದೆ. . ಇದು 6.67-ಇಂಚಿನ OLED ಪ್ಯಾನಲ್ ಅನ್ನು ಹೊಂದಿದೆ. ಇದು ಪೂರ್ಣ HD + ರೆಸಲ್ಯೂಶನ್, 20: 9 ಆಕಾರ ಅನುಪಾತ, 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ರೇಟ್ , 395ppi ಪಿಕ್ಸೆಲ್ ಡೆನ್ಸಿಟಿ, 10-ಬಿಟ್ ಬಣ್ಣಗಳು, 700nits ಪೀಕ್ ಬ್ರೈಟ್ ನೆಸ್ ಮತ್ತು ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ : WhatsApp Update- ಮೆಸೆಂಜರ್ ರೂಮ್ಸ್ ಶಾರ್ಟ್ಕಟ್ ವೈಶಿಷ್ಟ್ಯವನ್ನು ಕೈಬಿಟ್ಟ ವಾಟ್ಸಾಪ್
Meizu 18x ಕ್ಯಾಮೆರಾ :
Meizu 18x ಸ್ನಾಪ್‌ಡ್ರಾಗನ್ 870 ಚಿಪ್‌ಸೆಟ್‌ನೊಂದಿಗೆ ಬರುವ ಕಂಪನಿಯ ಮೊದಲ ಫೋನ್ (Smartphone)ಆಗಿದೆ. ಇದು ಫ್ಲೈಮ್ 9.2 ಯುಐ ಆಧಾರಿತ ಆಂಡ್ರಾಯ್ಡ್ 11 ಓಎಸ್ ಅನ್ನು ಬೂಟ್ ಮಾಡುತ್ತದೆ. Meizu 18x ನ ರಿಯರ್ ಕ್ಯಾಮೆರಾ ಸಿಸ್ಟಮ್ 64-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ GW3 ಮೈನ್ ಸೆನ್ಸರ್, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಅಸಿಸ್ಟ್ ಲೆನ್ಸ್ ಅನ್ನು ಒಳಗೊಂಡಿದೆ. ಸೆಲ್ಫಿಗಾಗಿ, ಇದು 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.
Meizu 18x ಬ್ಯಾಟರಿ :
Meizu 18x 4,300mAh ಬ್ಯಾಟರಿಯನ್ನು ಹೊಂದಿದ್ದು, 30W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಡ್ಯುಯಲ್ ಸಿಮ್, 5 ಜಿ, ವೈ-ಫೈ 6, ಬ್ಲೂಟೂತ್ 5.2, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್ ಮತ್ತು 1217 ಸೂಪರ್ ಲೀನಿಯರ್ ಸ್ಪೀಕರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : New Telecom Reforms: ಮೊಬೈಲ್‌ಗೆ ಸಂಬಂಧಿಸಿದ ಈ ನಿಯಮಗಳನ್ನು ಸರಳಗೊಳಿಸಿದ ಸರ್ಕಾರ; ಈಗ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಸಿಮ್
Meizu 18x ಬೆಲೆ :
Meizu 18x ನ 8 GB RAM + 128 GB ಸ್ಟೋರೇಜ್ ವೇರಿಯಂಟ್ ಬೆಲೆ 29,682 ರೂ. 8 GB RAM + 256 GB ಸ್ಟೋರೇಜ್ ವೇರಿಯಂಟ್ ಬೆಲೆ 31,967 ರೂ. ಮತ್ತು 12 GB RAM + 256 GB ಸ್ಟೋರೇಜ್ ವೇರಿಯಂಟ್ ವೆಚ್ಚ 34,251 ರೂಪಾಯಿಗಳು ಆಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.