ಮಾರುಕಟ್ಟೆಗೆ ಬಿಡುಗಡೆಯಾಗಲಿದೆ OnePlusನ ಹೊಸ ಫೋನ್! ವಿನ್ಯಾಸ, ಫೀಚರ್ ಎಲ್ಲವೂ ಅದ್ಭುತ

OnePlus ಜೂನ್ 24ರಂದು ಭಾರತದಲ್ಲಿ OnePlus Nord CE 4 Lite 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ.

Written by - Ranjitha R K | Last Updated : Jun 19, 2024, 03:05 PM IST
  • ಹೊಸ Nord ಸರಣಿಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದ
  • ತನ್ನ ಮಧ್ಯಮ ಶ್ರೇಣಿಯ OnePlus Nord CE4 Lite 5G ಸ್ಮಾರ್ಟ್‌ಫೋನ್
  • ಇದರ ವೈಶಿಷ್ಟ್ಯ ಮತ್ತು ಬೆಲೆ ಹೀಗಿರಲಿದೆ
ಮಾರುಕಟ್ಟೆಗೆ ಬಿಡುಗಡೆಯಾಗಲಿದೆ OnePlusನ ಹೊಸ ಫೋನ್! ವಿನ್ಯಾಸ, ಫೀಚರ್ ಎಲ್ಲವೂ ಅದ್ಭುತ    title=

ಬೆಂಗಳೂರು : OnePlus ತನ್ನ ಹೊಸ Nord ಸರಣಿಯ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ.ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿಯು ತನ್ನ ಮಧ್ಯಮ ಶ್ರೇಣಿಯ OnePlus Nord CE4 Lite 5G ಸ್ಮಾರ್ಟ್‌ಫೋನ್ ಅನ್ನು ದೇಶದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. OnePlus ಜೂನ್ 24ರಂದು ಭಾರತದಲ್ಲಿ OnePlus Nord CE 4 Lite 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ.

ಲೆಕ್ಕವಿಲ್ಲದಷ್ಟು ಪ್ರಯೋಜನಗಳೊಂದಿಗೆ, OnePlus Nord CE4 Lite 5G ಇತರ ಬಜೆಟ್ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿದೆ.ಈ ಫೋನ್ ಅತ್ಯುತ್ತಮ ಬ್ಯಾಟರಿ ಬಾಳಿಕೆ,ಅದ್ಭುತ ಫಾಸ್ಟ್ ಚಾರ್ಜಿಂಗ್, ಉತ್ತಮ ಡಿಸ್ಪ್ಲೇ,ಬೆಸ್ಟ್ ಫೋಟೋಗ್ರಫಿ ಅನುಭವವನ್ನು ನೀಡುತ್ತದೆ.ಈ ಎಲ್ಲಾ ಫೀಚರ್ ಇರುವ ಫೋನ್ ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. 

ಇದನ್ನೂ ಓದಿ : Lava O2: ಬಜೆಟ್‌ ಬೆಲೆಯ ಈ ಲಾವಾ ಸ್ಮಾರ್ಟ್‌ಫೋನ್‌ ಮೇಲೆ ಭರ್ಜರಿ ಡಿಸ್ಕೌಂಟ್‌!

OnePlus ಹೊಸ Nord CE 4 Lite 5G ಫೋನ್ 5500 mAhನ ಶಕ್ತಿಯುತ ಬ್ಯಾಟರಿಯನ್ನು ಹೊಂದಿರುತ್ತದೆ. ಇದು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಎಂದು ಹೇಳಿದೆ.ಅಂದರೆ ಫೋನ್ ತಕ್ಷಣವೇ ಚಾರ್ಜ್ ಆಗುತ್ತದೆ. ಇಷ್ಟೇ ಅಲ್ಲ,ಈ ಫೋನ್ 5W ರಿವರ್ಸ್ ಚಾರ್ಜಿಂಗ್ ವೈಶಿಷ್ಟ್ಯದೊಂದಿಗೆ ಬರಲಿದೆ. ಇದರರ್ಥ ಇತರ ಫೋನ್‌ಗಳನ್ನು ಅದರ ಬ್ಯಾಟರಿಯಿಂದ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ.ಇದಲ್ಲದೆ,ಈ ಫೋನ್ 120Hz ರಿಫ್ರೆಶ್ ದರದೊಂದಿಗೆ AMOLED ಡಿಸ್ಪ್ಲೇ ಪರದೆಯನ್ನು ಹೊಂದಿರುತ್ತದೆ.

OnePlus Nord CE 4 Lite 5Gನಲ್ಲಿರುವ ವೈಶಿಷ್ಟ್ಯಗಳು :
ಮುಂಬರುವ OnePlus Nord CE 4 Lite 5G ಫೋನ್ 6.67 ಇಂಚಿನ ಪೂರ್ಣ HD+ ಡಿಸ್ಪ್ಲೇಯೊಂದಿಗೆ ಬರಬಹುದು.ಇದು Qualcomm Snapdragon 6s Gen 3 ಪ್ರೊಸೆಸರ್ ಅನ್ನು ಹೊಂದಿರುತ್ತದೆ ಎನ್ನಲಾಗಿದೆ.ಈ ಫೋನ್ 8GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿರುವ ನಿರೀಕ್ಷೆಯಿದೆ. 

ಇದನ್ನೂ ಓದಿ : Smartphone Blast: ಮೊಬೈಲ್ ಫೋನ್‌ಗಳು ಸ್ಫೋಟಗೊಳ್ಳಲು ಇವೇ ಪ್ರಮುಖ ಕಾರಣಗಳು

ಈ ಫೋನ್ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸ್ಕ್ರೀನ್ ಮೇಲೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು  ಹೊಂದಿರುತ್ತದೆ.ಈ ಫೋನ್ 50MP ಮೇನ್ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್ ಅನ್ನು ಹಿಂಭಾಗದಲ್ಲಿ ಹೊಂದಿರಲಿದೆ ಎನ್ನಲಾಗಿದೆ.ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮರಾವನ್ನು ಒದಗಿಸಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News