Free Online Classroom: ಆನ್ಲೈನ್ ನಲ್ಲಿ ಉಚಿತ ಮಕ್ಕಳ ವಿದ್ಯಾಭ್ಯಾಸ, ಹೆಚ್ಚಿನ ಮಾಹಿತಿಗೆ ವರದಿ ಓದಿ

 Free Online Classroom ಕರೋನಾ ಅವಧಿಯಲ್ಲಿ ಮಕ್ಕಳ ಶಿಕ್ಷಣದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದೆ. ವೈರಸ್ ಸೋಂಕನ್ನು ತಡೆಗಟ್ಟಲು ದೇಶದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. 

Written by - Nitin Tabib | Last Updated : Dec 23, 2020, 03:42 PM IST
  • ಇನ್ಮುಂದೆ ಉಚಿತವಾಗಿ ಆನ್ಲೈನ್ ಶಿಕ್ಷಣ ಪಡೆಯಬಹುದು
  • Tata Sky Classroom ಸೇವೆಯನ್ನು ಉಚಿತಗೊಳಿಸಿದೆ Tata Sky.
  • ಇದರಿಂದ ಲಾಭ ಏನು ಎಂಬುದನ್ನು ಇಲ್ಲಿ ತಿಳಿಯಿರಿ.
Free Online Classroom: ಆನ್ಲೈನ್ ನಲ್ಲಿ ಉಚಿತ ಮಕ್ಕಳ ವಿದ್ಯಾಭ್ಯಾಸ, ಹೆಚ್ಚಿನ ಮಾಹಿತಿಗೆ ವರದಿ ಓದಿ title=
Tata Sky Classroom (File Image)

ನವದೆಹಲಿ: Free Online Classroom ಕರೋನಾ ಅವಧಿಯಲ್ಲಿ ಮಕ್ಕಳ ಶಿಕ್ಷಣದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದೆ. ವೈರಸ್ ಸೋಂಕನ್ನು ತಡೆಗಟ್ಟಲು ದೇಶದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಟಾಟಾ ಸ್ಕೈ ಡೈರೆಕ್ಟ್ ಟು ಹೋಮ್ (Tata Sky DTH) ಸೇವೆಯಡಿಯಲ್ಲಿ ಉತ್ತಮ ಕೊಡುಗೆಯೊಂದನ್ನು ಪರಿಚಯಿಸಿದೆ. ಹೌದು, ಮಕ್ಕಳ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಟಾಟಾ ಸ್ಕೈ ತನ್ನ ಕ್ಲಾಸ್‌ರೂಮ್ ಚಾನೆಲ್ ಅನ್ನು ಉಚಿತವಾಗಿಸಿದೆ. ಇದಕ್ಕಾಗಿ ಈಗ ಯಾವುದೇ ರೀತಿಯ ಹಣವನ್ನು ಪಾವತಿಸಬೇಕಾಗಿಲ್ಲ.

ಇದನ್ನು ಓದಿ- AIRTEL ಮತ್ತು TATA SKY ಡಿಟಿಎಚ್ ಬಳಕೆದಾರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ

Tata Sky Classroom ಉಚಿತ ಸೇವೆ
ಟೆಕ್ ಸೈಟ್ telecomtalk ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ ಟಾಟಾ ಸ್ಕೈ (Tata Sky), ಆನ್ಲೈನ್ ತರಗತಿಗಳಿಗಾಗಿ ತೆರೆದಿರುವ ತನ್ನ ಟಾಟಾ ಸ್ಕೈ ಕ್ಲಾಸ್ ರೂಮ್ ಅನ್ನು ಉಚಿತಗೊಳಿಸಿದೆ. ಟಾಟಾ ಸ್ಕೈ ಬಳಕೆದಾರರು ಇನ್ಮುಂದೆ ಈ ಚಾನೆಲ್ ವಿಕ್ಷೀಸಲು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ. ಟಾಟಾ ಸ್ಕೈ ಕ್ಲಾಸ್ ರೂಮ್ ನಿಂದ ಇನ್ಮುಂದೆ ನೀವು ಯಾವುದೇ ಕ್ಲಾಸ್ ಅಧ್ಯಯನವನ್ನು ನೇರವಾಗಿ ಟಿವಿ ಮೇಲೆ ವಿಕ್ಷೀಸಬಹುದು. ಈ ಮೊದಲು ಈ ಸೇವೆ ಬಳಸಲು ಬಳಕೆದಾರರು ನಿತ್ಯ ರೂ.3 ಅಂದರೆ ತಿಂಗಳಿಗೆ 90 ರೂಪಾಯಿ ಪಾವತಿಸಬೇಕಾಗಿತ್ತು.

ಇದನ್ನು ಓದಿ- ಇನ್ಮುಂದೆ ನಿಮ್ಮ ನೆಚ್ಚಿನ ಚಾನಲ್‌ಗಳನ್ನು ಆಯ್ಕೆ ಮಾಡುವುದು ಇನ್ನೂ ಸುಲಭ

ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಟಾಟಾ ಸ್ಕೈ ತರಗತಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿದೆ. ಬಳಕೆದಾರರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಮಕ್ಕಳಿಗೆ ಭಾಷೆಯನ್ನು ಆಯ್ಕೆ ಮಾಡಬಹುದು. ಟಾಟಾ ಸ್ಕೈ ಚಂದಾದಾರರು ಮಕ್ಕಳಿಗೆ ನಿಯಮಿತ ಕೋರ್ಸ್‌ಗೆ ಹೆಚ್ಚುವರಿಯಾಗಿ ಪಠ್ಯಕ್ರಮ ಆಧಾರಿತ ಆಟಗಳು ಮತ್ತು ಮಾದರಿ ಪತ್ರಿಕೆಗಳನ್ನು ಬಳಸಬಹುದು.

ಇದನ್ನು ಓದಿ- ಈಗ ಅಗ್ಗದ ದರದಲ್ಲಿ ವೀಕ್ಷಿಸಿ ನಿಮ್ಮ ನೆಚ್ಚಿನ TV ಚಾನೆಲ್

Tata Sky Classroom ಸೇವೆ ಬಳಸಲು ಚಾನೆಲ್ ಸಂಖ್ಯೆ  653 ಕ್ಕೆ ಭೇಟಿ ನೀಡಿ. ಟಾಟಾ ಸ್ಕೈ ತರಗತಿ ಕೋಣೆ ನಗರ ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು ತಲುಪುವುದು ಇದರ ಪ್ರಮುಖ ಉದ್ದೇಶವಾಗಿದೆ. ಇದಲ್ಲದೆ, ಆನ್‌ಲೈನ್ ತರಗತಿಗಳಿಗೆ ಇಂಟರ್ನೆಟ್ ಸೇವೆ ಲಭ್ಯವಾಗುವುದು ಕಡ್ಡಾಯವಾಗಿದೆ. ದೂರದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆ ಅಷ್ಟೊಂದು ಸರಿಯಾಗಿಲ್ಲ ಎಂಬುದು ಕೂಡ ಇಲ್ಲಿ ಉಲ್ಲೇಖನೀಯ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News