Tips and Tricks : ಪ್ರತಿ ವಾರ ಅಥವಾ 10 ದಿನಗಳಿಗೊಮ್ಮೆ ಬೈಕ್ ಪಾಲಿಶ್ ಮಾಡಲು ಸರ್ವೀಸ್ ಸೆಂಟರ್ ಗೆ ಹೋದರೆ 200 ರಿಂದ 500 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಈಗ ಅದರ ಅಗತ್ಯವಿಲ್ಲ. ನಾವು ಹೇಳುವ ಟಿಪ್ಸ್ ಬಳಸಿದರೆ, ಕೇವಲ 10 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಬೈಕ್ ಅನ್ನು ಹೊಳೆಯುವಂತೆ ಮಾಡಬಹುದು. ಕಡಿಮೆ ಖರ್ಚಿನಲ್ಲಿ ಬೈಕ್, ಸ್ಕೂಟರ್ ಸ್ಕ್ರಚ್ತೆಗೆಯುವ ಮತ್ತು ಫಳ ಫಳ ಹೊಳೆಯುವಂತೆ ಮಾಡುವ ಅದ್ಭುತ ಹ್ಯಾಕ್ ಇದಾಗಿದೆ. ಇದರಿಂದ ಸಿಗುವ ಹೊಳಪು ಪೋಲಿಷ್ ನಂತೆಯೇ ಹೋಲುತ್ತದೆ.
ಟೂತ್‌ಪೇಸ್ಟ್ ಅನ್ನು ಬಳಸಿಕೊಂಡು ನಿಮ್ಮ ಬೈಕ್, ಸ್ಕೂಟರ್ ಗೆ ಸುಲಭವಾಗಿ ಹೊಳಪು ನೀಡಬಹುದು. ಅದು ಕೂಡಾ ಕಡಿಮೆ ಖರ್ಚಿನಲ್ಲಿ. ಇದು ಬೈಕ್ ಮೇಲ್ಮೈಯಿಂದ ಕೊಳಕು, ಸ್ಕ್ರಾಚ್ ಮತ್ತು ಆಕ್ಸಿಡೀಕರಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಅತ್ಯಂತ ಕಮ್ಮಿ ಬೆಲೆಗೆ 365 ದಿನದ ವರೆಗೂ ವ್ಯಾಲಿಡಿಟಿ ಘೋಷಣೆ ಮಾಡಿದ್ದ Airtel: Jio, BSNLಗೆ ಬಿಸಿ!
ಬೇಕಾಗುವ ಸಾಮಗ್ರಿ :
ಬಿಳಿ ಟೂತ್ಪೇಸ್ಟ್
ಮೃದುವಾದ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆ
ನೀರು
ಬಳಸುವ ವಿಧಾನ :
ಬೈಕ್ ಕ್ಲೀನ್ ಮಾಡಿ : ಮೊದಲು ಬೈಕ್ ನ ಮೇಲ್ಮೈಯನ್ನು ಒದ್ದೆ ಬಟ್ಟೆಯಿಂದ ಸ್ವಚ್ಛಗೊಳಿಸಿ ಧೂಳು ಮತ್ತು ಕೊಳೆ ತೆಗೆಯಿರಿ.
ಟೂತ್‌ಪೇಸ್ಟ್ ಅನ್ನು ಹಚ್ಚಿ : ಸ್ವಲ್ಪ ಪ್ರಮಾಣದ ಬಿಳಿ ಟೂತ್‌ಪೇಸ್ಟ್ ಅನ್ನು ತೆಗೆದುಕೊಂಡು ಅದನ್ನು ಸ್ಕ್ರಾಚ್ ಅಥವಾ ಕಲೆಯಾಗಿರುವ ಜಾಗಕ್ಕೆ ಹಚ್ಚಿ.
ರಬ್: ಮೈಕ್ರೋಫೈಬರ್ ಅಥವಾ ಮೃದುವಾದ ಬಟ್ಟೆಯಿಂದ ವೃತ್ತಾಕಾರದ ಚಲನೆಯಲ್ಲಿ ನಿಧಾನವಾಗಿ ಉಜ್ಜಿಕೊಳ್ಳಿ. ಇದು ಗೀರುಗಳು ಮತ್ತು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕ್ಲೀನ್: ಉಜ್ಜಿದ ನಂತರ, ಅದನ್ನು ಸ್ವಚ್ಛ ಮತ್ತು ಒದ್ದೆಯಾದ ಬಟ್ಟೆಯಿಂದ ಒರೆಸಿ.
ಪೋಲಿಷ್: ಬೈಕು ಹೊಳೆಯುವಂತೆ ಮಾಡಲು ಒಣ ಬಟ್ಟೆಯಿಂದ ಒರೆಸಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಗಮನಿಸಬೇಕಾದ ವಿಷಯಗಳು:
1.ಲಘುವಾದ ಗೀರುಗಳು ಮತ್ತು ಲೋಹದ ಅಥವಾ ಪ್ಲಾಸ್ಟಿಕ್ ಮೇಲ್ಮೈಗಳಲ್ಲಿ ಮಾತ್ರ ಟೂತ್ಪೇಸ್ಟ್ ಬಳಸಿ.
2. ಪೇಯಿಂಟ್ ಇರುವ ಮೇಲ್ಮೈಗಳಲ್ಲಿ ಅದನ್ನು ತೀವ್ರವಾಗಿ ಉಜ್ಜಲು ಹೋಗಬೇಡಿ.
3 . ವೈಟ್ ನಿಂಗ್ ಏಜೆಂಟ್‌ಗಳನ್ನು ಒಳಗೊಂಡಿರುವ ಟೂತ್‌ಪೇಸ್ಟ್ ಬಳಸಬೇಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.