Facebook: ಶೀಘ್ರದಲ್ಲಿಯೇ ಫೇಸ್ ಬುಕ್ ನಲ್ಲಿ ಶಾರ್ಟ್ ಫಾರ್ಮ್ ಸೌಂಡ್ ಬೈಟ್ಸ್ ಹಾಗೂ ಪಾಡಕಾಸ್ಟ್ ಗಳು ಬರಲಿವೆ !

Facebook Audio Products - ಶೀಘ್ರದಲ್ಲಿಯೇ ತನ್ನ ವೇದಿಕೆಯ ಮೇಲೆ ಹಲವು ಆಡಿಯೋ ಉತ್ಪನ್ನಗಳಾಗಿರುವ ಶಾರ್ಟ್ಫಾರ್ಮ್ ಸೌಂಡ್ ಬೈಟ್ಸ್ ಎಕ್ಸ್ಪೀರಿಯನ್ಸ್ ಹಾಗೂ ಪಾಡಕಾಸ್ಟ್ ಗಳು ಕಾಣಿಸಿಕೊಳ್ಳಲಿವೆ ಎಂದು ಫೇಸ್ ಬುಕ್ ಘೋಷಿಸಿದೆ.   

Written by - Nitin Tabib | Last Updated : Apr 19, 2022, 04:04 PM IST
  • ಫೇಸ್ ಬುಕ್ ನಲ್ಲಿ ಶೀಘ್ರದಲ್ಲಿಯೇ ಬರಲಿವೆ ಪಾಡಕಾಸ್ಟ್ ಹಾಗೂ ಶಾರ್ಟ್ ಫಾರ್ಮ್ ಸೌಂಡ್ ಬೈಟ್ಸ್
  • ಫೇಸ್ಬುಕ್ ಜಾರಿಗೆ ತರುತ್ತಿದೆ ಆಡಿಯೋ ಕ್ರಿಯೇಟರ್ ಫಂಡ್
  • FB ಪುಟದಲ್ಲಿಯೇ ಪಾಡ್ಕಾಸ್ಟ್ ಗಳನ್ನು ಆಲಿಸಬಹುದು
Facebook: ಶೀಘ್ರದಲ್ಲಿಯೇ ಫೇಸ್ ಬುಕ್ ನಲ್ಲಿ ಶಾರ್ಟ್ ಫಾರ್ಮ್ ಸೌಂಡ್ ಬೈಟ್ಸ್ ಹಾಗೂ ಪಾಡಕಾಸ್ಟ್ ಗಳು ಬರಲಿವೆ ! title=
Facebook Audio Products

ನವದೆಹಲಿ: Facebook Audio Products - ಜನಪ್ರಿಯ ಆಡಿಯೋ ಚಾಟ್ ಪ್ಲಾಟ್‌ಫಾರ್ಮ್ ಆಗಿರುವ ಕ್ಲಬ್‌ಹೌಸ್ ಗೆ ಭಾರಿ ಪೈಪೋಟಿ ನೀಡಲು ಫೇಸ್ ಬುಕ್ ನಿರ್ಧರಿಸಿದೆ, ಫೇಸ್‌ಬುಕ್ ತನ್ನ ಪ್ರಮುಖ ಪ್ಲಾಟ್‌ಫಾರ್ಮ್‌ನಲ್ಲಿ ಶೀಘ್ರದಲ್ಲಿಯೇ ಸೌಂಡ್‌ಬೈಟ್‌, ಪಾಡ್‌ಕಾಸ್ಟ್‌ ಸೇರಿದಂತೆ ಹಲವು ಆಡಿಯೋ ಉತ್ಪನ್ನಗಳನ್ನು ಜಾರಿಗೆ ತರುವುದಾಗಿ ಘೋಷಿಸಿದೆ.  ಶಾರ್ಟ್ ಸ್ಟೋರೀಸ್ ಗಳು, ಹಾಸ್ಯಗಳು, ಸ್ಫೂರ್ತಿಯ ಕ್ಷಣಗಳು, ಕವಿತೆಗಳು ಮತ್ತು ಹೆಚ್ಚಿನದನ್ನು ಕ್ಯಾಪ್ಚರ್ ಮಾಡಲು ಸೌಂಡ್ ಬೈಟ್ ಗಳು ಸಣ್ಣ-ರೂಪದ ಸೃಜನಶೀಲ ಆಡಿಯೊ ಕ್ಲಿಪ್‌ಗಳಾಗಿವೆ. ಈ ಕುರಿತು ಹೇಳಿಕೆ ನೀಡಿರುವ ಫೇಸ್ ಬುಕ್ ಅಪ್ಲಿಕೇಶನ್ ಮುಖ್ಯಸ್ಥರಾಗಿರುವ ಫಿಡ್ಜಿ ಸಿಮೊ "ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಸಣ್ಣ ಸಂಖ್ಯೆಯ ರಚನೆಕಾರರೊಂದಿಗೆ ಸೌಂಡ್‌ಬೈಟ್‌ಗಳ ಪರೀಕ್ಷೆಯನ್ನು ಆರಂಭಿಸುತ್ತಿದ್ದು, ಉತ್ಪನ್ನವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಮೊದಲು ಅವರ ಇನ್‌ಪುಟ್‌ನೊಂದಿಗೆ ನಮ್ಮ ಇನ್‌ಪುಟ್ ಅನ್ನು ನಾವು ಖಚಿತಪಡಿಸಲಿದ್ದೇವೆ" ಎಂದು ಹೇಳಿದ್ದಾರೆ. 

ಫೇಸ್‌ಬುಕ್ ಆಡಿಯೋ ಕ್ರಿಯೇಟರ್ಸ್ ಫಂಡ್ ಜಾರಿಗೆ ತರುತ್ತಿದೆ
ಸೌಂಡ್‌ಬೈಟ್‌ಗಳನ್ನು ಪ್ರಾರಂಭಿಸಲು, ಫೇಸ್‌ಬುಕ್ 'ಆಡಿಯೋ ಕ್ರಿಯೇಟರ್ಸ್ ಫಂಡ್' ಅನ್ನು ಆರಂಭಿಸಲಿದೆ, ಇದು ಉದಯೋನ್ಮುಖ ಆಡಿಯೊ ರಚನೆಕಾರರನ್ನು ಬೆಂಬಲಿಸಲಿದೆ ಮತ್ತು ತನ್ನ ಹೊಸ ಉತ್ಪನ್ನದ ಅನುಭವ ಕುರಿತು ಅವರ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಿದೆ. ಪ್ರಸ್ತುತ, 170 ಮಿಲಿಯನ್‌ಗಿಂತಲೂ ಹೆಚ್ಚು ಜನರು ಫೇಸ್‌ಬುಕ್‌ನಲ್ಲಿ ನೂರಾರು ಸಾವಿರ ಪಾಡ್‌ಕ್ಯಾಸ್ಟ್ ಪುಟಗಳಿಗೆ ಸಂಪರ್ಕ ಹೊಂದಿದ್ದಾರೆ ಮತ್ತು 35 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪಾಡ್‌ಕ್ಯಾಸ್ಟ್ ಅಭಿಮಾನಿ ಗುಂಪುಗಳಿಗೆ  ಸದಸ್ಯರಾಗಿದ್ದಾರೆ.

ಇದನ್ನೂ ಓದಿ-Job Opportunity: ಒಂದು ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಿರುವ ಗೇಮಿಂಗ್ ಪ್ಲಾಟ್ ಫಾರ್ಮ್ Winzo

ನೀವು FB ಪುಟದಲ್ಲಿ ಮಾತ್ರ ಪಾಡ್‌ಕಾಸ್ಟ್‌ಗಳನ್ನು ಕೇಳಲು ಸಾಧ್ಯವಾಗುತ್ತದೆ
ಈ ಮೊದಲು ಈ ಪಾಡ್‌ಕಾಸ್ಟ್‌ಗಳನ್ನು ಆಲಿಸಲು ಫೇಸ್‌ಬುಕ್ ಅಪ್ಲಿಕೇಶನ್‌ನಿಂದ ಹೊರಹೊಗಬೇಕಾಗುತ್ತಿತ್ತು, ಆದರೆ, ಇನ್ಮುಂದೆ ನೀವು ನಿಮ್ಮ ಫೇಸ್‌ಬುಕ್ ಪುಟದಲ್ಲಿಯೇ ಪಾಡ್‌ಕಾಸ್ಟ್‌ಗಳನ್ನು ಆಲಿಸಬಹುದು ಎಂದು ಫೇಸ್‌ಬುಕ್ ಹೇಳಿದೆ. "ನಾವು ಲೈವ್ ಆಡಿಯೊ ಕೊಠಡಿಗಳನ್ನು ಪರೀಕ್ಷಿಸಲು ಆರಂಭಿಸುತ್ತಿದ್ದು, ಬೇಸಿಗೆಯ ವೇಳೆಗೆ ಅವು ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಎಲ್ಲರಿಗೂ ಲಭ್ಯವಾಗುವ ನಿರೀಕ್ಷೆಯನ್ನು ಹೊಂದಿದ್ದೇವೆ " ಎಂದು ಸಿಮೊ ಹೇಳಿದ್ದಾರೆ. ಫೇಸ್‌ಬುಕ್,  ಗ್ರೂಪ್ ಗಳಲ್ಲಿ ಲೈವ್ ಆಡಿಯೊ ರೂಮ್ ಗಳನ್ನು ಪರೀಕ್ಷಿಸುತ್ತಿದೆ, ನಂತರ ಅದು ಪ್ರತಿ ತಿಂಗಳು ಗ್ರೂಪ್ ಗಳನ್ನು ಬಳಸುವ 1.8 ಬಿಲಿಯನ್ ಜನರಿಗೆ ಮತ್ತು ಫೇಸ್‌ಬುಕ್‌ನಲ್ಲಿರುವ ಲಕ್ಷಾಂತರ ಸಕ್ರಿಯ ಸಮುದಾಯಗಳಿಗೆ ಲಭ್ಯವಾಗುವಂತೆ ಮಾಡಲಿದೆ.

ಇದನ್ನೂ ಓದಿ-WhatsApp Update: ಇನ್ಮುಂದೆ ನೀವು ಎಷ್ಟು ಹೊತ್ತು ಆನ್ಲೈನ್ ಆಗಿದ್ದೀರಿ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ!

ಲೈವ್ ಆಡಿಯೊ ಕೊಠಡಿಗಳನ್ನು ಸಹ ಬಿಡುಗಡೆ ಮಾಡಲಾಗುವುದು
ಇದರ ಜೊತೆಗೆ, ಇದೇ ಬೇಸಿಗೆಯಲ್ಲಿ ಮೆಸೆಂಜರ್‌ನಲ್ಲಿ ಲೈವ್ ಆಡಿಯೊ ರೂಮ್‌ಗಳನ್ನು ಬಿಡುಗಡೆ ಮಾಡಲು ಕಂಪನಿಯು ಯೋಜನೆ ರೂಪಿಸಿದೆ. ಕಂಪನಿಯು ಹೊಸ ಆಡಿಯೋ ರಚನೆ ಟೂಲ್ ಸೆಟ್ ಅನ್ನು ನಿರ್ಮಿಸುತ್ತಿದೆ ಎಂದು ಹೇಳಿಕೊಂಡಿದೆ. ಹೆಚ್ಚುವರಿಯಾಗಿ, ಫೇಸ್ಬುಕ್ ಎಲ್ಲಾ ಆಡಿಯೊ ಅನುಭವಗಳನ್ನು ಎಲ್ಲರಿಗೂ ಪ್ರವೇಶಿಸುವಂತೆ ಶೀರ್ಷಿಕೆ ನೀಡಲಿದೆ. ಲೈವ್ ಆಡಿಯೊ ರೂಮ್‌ಗಳು ಆರಂಭಗೊಂಡ ಬಳಿಕ, ಅಭಿಮಾನಿಗಳು ತಮ್ಮ ನೆಚ್ಚಿನ ರಚನೆಕಾರರಿಗೆ ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಸ್ಟಾರ್‌ಗಳನ್ನು ನೀಡುವ  ಮೂಲಕ ಬೆಂಬಲಿಸಲು ಸಾಧ್ಯವಾಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News