Vira News: ಪ್ರಪಂಚದ ಅಪಾಯಕಾರಿ ಪ್ರಾಣಿಗಳ ವಿಷಯ ಚರ್ಚೆಗೆ ಬಂದಾಗ ಜನರ ಮೈಂಡ್ ನಲ್ಲಿ ಮೊದಲು ಬರುವ ಪ್ರಾಣಿಗಳೆಂದರೆ ಅವು ನರಭಕ್ಷಕ ಪ್ರಾಣಿಗಳಾದ ಚಿರತೆ, ಹುಲಿ, ಸಿಂಹ, ತೋಳ, ತಿಮಿಂಗಲು ಇತ್ಯಾದಿ. ಸಾಮಾನ್ಯವಾಗಿ ಹರಿತವಾದ ಹಲ್ಲುಗಳು ಮತ್ತು ಉಗುರುಗಳನ್ನು ಹೊಂದಿರುವ ಪ್ರಾಣಿಗಳು ಅಪಾಯಕಾರಿಯಾಗಿರುತ್ತವೆ ಮತ್ತು ಪ್ರಾಣಕ್ಕೆ ಕುತ್ತು ತರುತ್ತವೆ ಎಂದು ನಾವು ಭಾವಿಸುತ್ತೇವೆ.
ಆದರೆ, ಜಗತ್ತಿನ ಅತ್ಯಂತ ಅಪಾಯಕಾರಿ ಪ್ರಾಣಿ ಯಾವುದು ಎಂಬುದು ನಿಮಗೆ ನಿಜಕ್ಕೂ ತಿಳಿದಿದೆಯೇ? ಅದು ಒಂದು ವರ್ಷದಲ್ಲಿ ಎಷ್ಟು ಜನರ ಪ್ರಾಣ ತೆಗೆಯುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇತ್ತೀಚೆಗಷ್ಟೇ ಪ್ರಾಣಿ ತಜ್ಞರೊಬ್ಬರು ಅದರ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿ ಪ್ರಾಣಿಗಳಿಂದ ನಡೆದ ಹಲ್ಲೆಗಳು ಹಾಗೂ ಆ ಹಲ್ಲೆಗಳಿಂದ ಸಂಭವಿಸಿದ ಸಾವು-ನೋವುಗಳ ಅಂಕಿ ಅಂಶಗಳನ್ನು ಆಧರಿಸಿದೆ.
ಇದನ್ನೂ ಓದಿ-CCTV Footage: Sonali Phogat ಸಾವಿಗೂ ಕೆಲ ಕ್ಷಣಗಳ ಮೊದಲಿನ CCTV ಫೂಟೇಜ್ ಬಹಿರಂಗ! ವಿಡಿಯೋ ನೋಡಿ
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಈ ಪಟ್ಟಿಯ ಪ್ರಕಾರ ಬಸವನ ಹುಳುವನ್ನು ಅತ್ಯಂತ ಅಪಾಯಕಾರಿ ಎಂದು ಹೇಳಲಾಗಿದೆ. ನೋಡಲು ತುಂಬಾ ಚಿಕ್ಕದಾಗಿರುವ ಈ ಕೀಟ ಹುಲಿ, ಸಿಂಹ ಅಥವಾ ಯಾವುದೇ ಒಂದು ಶಾರ್ಕ್ ಗಿಂತಲೂ ಕೂಡ ಅಪಾಯಕಾರಿಯಾಗಿದೆ ಎನ್ನಲಾಗಿದೆ. ಬಿಡುಗಡೆ ಮಾಡಲಾಗಿರುವ ಅಂಕಿ-ಅಂಶಗಳನ್ನು ನಂಬುವುದಾದರೆ, ಬಸವನ ಹುಳು ಒಂದು ವರ್ಷದಲ್ಲಿ ಸುಮಾರು 2 ಲಕ್ಷ ಜನರ ಪ್ರಾಣ ತೆಗೆಯುತ್ತದೆ ಎನ್ನಲಾಗಿದೆ.
ಇದನ್ನೂ ಓದಿ-PM Modi ಜನಪ್ರೀಯತೆಯ ಮುಂದೆ ಘಟಾನುಘಟಿಗಳು ಫೇಲ್, ವಿಶ್ವದ 22 ನಾಯಕರ ಪಟ್ಟಿಯಲ್ಲಿ ನಂ.1 ಸ್ಥಾನ
ತೆವಳಿಕೊಂಡು ಸಾಗುವ ಈ ಹುಳುವಿನ ಶರೀರದಲ್ಲಿ ಪರಾವಲಂಬಿಗಳು ಆಂಟಿಕೊಂಡಿರುತ್ತವೆ ಮತ್ತು ಅವು ಮಾನವನ ಶರೀರಕ್ಕೆ ಪ್ರವೇಶಿಸಿದರೆ, ವ್ಯಕ್ತಿ ಸಾವನ್ನಪ್ಪುತ್ತಾನೆ. ಹೀಗಾಗಿ ಕೋನದಂತೆ ಕಾಣಿಸುವ ಬಸವನ ಹುಳು ತುಂಬಾ ಅಪಾಯಕಾರಿ ಹುಳು ಎನ್ನಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.