Vodafone-Ideaದ 3 ಬಂಪರ್ ಯೋಜನೆಗಳು! ಕಡಿಮೆ ದರದಲ್ಲಿ ಸಿಗಲಿದೆ ಹೆಚ್ಚಿನ ಲಾಭ

Vi ಯ ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ನೀಡಲಾಗುತ್ತಿದೆ. ಯೋಜನೆಯ ಮತ್ತೊಂದು ವಿಶೇಷ ಸಂಗತಿಯೆಂದರೆ, Vi ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆಯನ್ನು ಸಹ ಅದರಲ್ಲಿ ನೀಡಲಾಗುತ್ತಿದೆ.

Last Updated : Dec 9, 2020, 08:57 AM IST
  • Vi ಗಾಗಿ ಉತ್ತಮ ರೀಚಾರ್ಜ್ ಯೋಜನೆಗಳು
  • ಕಡಿಮೆ ದರದಲ್ಲಿ ಸಾಕಷ್ಟು ಕೊಡುಗೆಗಳಿವೆ
  • ಅಗ್ಗದ ದರದ ಅತ್ಯುತ್ತಮ ಯೋಜನೆಗಳನ್ನು ತಿಳಿದುಕೊಳ್ಳಿ
Vodafone-Ideaದ 3 ಬಂಪರ್ ಯೋಜನೆಗಳು! ಕಡಿಮೆ ದರದಲ್ಲಿ ಸಿಗಲಿದೆ ಹೆಚ್ಚಿನ ಲಾಭ title=

ಬೆಂಗಳೂರು: 2020ರ ಕೊನೆಯ ತಿಂಗಳಲ್ಲಿ ಟೆಲಿಕಾಂ ಕಂಪನಿಗಳು ಭರ್ಜರಿ ಆಫರ್ ನೀಡುತ್ತಿವೆ. ಈ ಬಾರಿ ಹೊಸ ಕೊಡುಗೆ ವೊಡಾಫೋನ್-ಐಡಿಯಾದಿಂದ ಬಂದಿದೆ. ಗ್ರಾಹಕರನ್ನು ಆಕರ್ಷಿಸಲು ಕಂಪನಿಯು ಮೂರು ಸ್ಫೋಟಕ ಪ್ರಿಪೇಯ್ಡ್ ರೀಚಾರ್ಜ್ ಕೊಡುಗೆಗಳನ್ನು (Prepaid Recharge Offers) ನೀಡುತ್ತಿದೆ. ಈ ಯೋಜನೆಗಳಲ್ಲಿ ವಿಶೇಷತೆ ಏನು ಎಂದು ತಿಳಿಯೋಣ.

ವೊಡಾಫೋನ್- ಐಡಿಯಾ 129 ರೂ. ಯೋಜನೆ:
ನೀವು ವೊಡಾಫೋನ್- ಐಡಿಯಾದ (Vodafone-Idea) ಗ್ರಾಹಕರಾಗಿದ್ದರೆ ಈ ಸುದ್ದಿ ನಿಮಗೆ ನೆಮ್ಮದಿ ನೀಡಬಹುದು. ವೊಡಾಫೋನ್- ಐಡಿಯಾ ಅತ್ಯುತ್ತಮ ರೀಚಾರ್ಜ್ ಪ್ಯಾಕ್ ಅನ್ನು 129 ರೂ.ನಲ್ಲಿ ಪರಿಚಯಿಸಿದೆ. ಇದರಲ್ಲಿ ನೀವು ಪ್ರತಿದಿನ 2 ಜಿಬಿ ಇಂಟರ್ನೆಟ್ ಡೇಟಾವನ್ನು ಪಡೆಯುತ್ತೀರಿ. ಇದಲ್ಲದೆ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವೂ ಲಭ್ಯವಿದೆ.

ಜನವರಿ 1ರಿಂದ ಬದಲಾಗಲಿದೆ ಲ್ಯಾಂಡ್‌ಲೈನ್‌ನಿಂದ Mobile ಫೋನ್‌ಗೆ ಕರೆ ಮಾಡುವ ವಿಧಾನ

ವೊಡಾಫೋನ್ 148 ರೂ. ಯೋಜನೆ :
ವೊಡಾಫೋನ್- ಐಡಿಯಾದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು 148 ರೂ. ರೀಚಾರ್ಜ್ ಯೋಜನೆ. ಈ ಯೋಜನೆಯ ಸಿಂಧುತ್ವವು 18 ದಿನಗಳು. ಅಂತಹ ಕಡಿಮೆ ಬೆಲೆಯ ರೀಚಾರ್ಜ್‌ನಲ್ಲಿಯೂ ಸಹ ಕಂಪನಿಯು ಪ್ರತಿದಿನ 1 ಜಿಬಿ ಡೇಟಾವನ್ನು ನೀಡುತ್ತಿದೆ. ಒಟ್ಟಾರೆಯಾಗಿ ಈ ಯೋಜನೆಯಲ್ಲಿ ಬಳಕೆದಾರರಿಗೆ 18 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಇತರ ಯೋಜನೆಗಳಂತೆ ಕಂಪನಿಯು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್ಲಿಮಿಟೆಡ್ ಕಾಲಿಂಗ್ ಅನ್ನು ಸಹ ನೀಡುತ್ತದೆ.

Vodafone–Idea ಗ್ರಾಹಕರಿಗೆ ಬಿಗ್ ಶಾಕ್

149 ರೂ.ಗಳ ಅಗ್ಗದ ಯೋಜನೆ :
ವೊಡಾಫೋನ್- ಐಡಿಯಾದ ಈ ಯೋಜನೆ ಹಿಂದಿನ ಯೋಜನೆಗಿಂತ ಕೇವಲ 1 ರೂಪಾಯಿ ಹೆಚ್ಚು ದುಬಾರಿಯಾಗಿದೆ. ಆದರೆ ಇದರಲ್ಲಿ ಹೆಚ್ಚಿನ ಸೌಲಭ್ಯವೂ ಇದೆ. ಉದಾಹರಣೆಗೆ, 148 ರೂ. ಯೋಜನೆಯಲ್ಲಿ ನೀವು ಕೇವಲ 18 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ. ಆದರೆ 149 ರೂ.ಗಳ ಯೋಜನೆಯಲ್ಲಿ ಗ್ರಾಹಕರಿಗೆ 28 ​​ದಿನಗಳ ಮಾನ್ಯತೆಯನ್ನು ನೀಡಲಾಗುತ್ತದೆ. ಇದಲ್ಲದೆ ಪ್ರತಿದಿನ 3 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಯೋಜನೆಯ ಮತ್ತೊಂದು ವಿಶೇಷ ಸಂಗತಿಯೆಂದರೆ  Vi ಮೂವೀಸ್ ಮತ್ತು ಟಿವಿ ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆಯನ್ನು ಸಹ ಅದರಲ್ಲಿ ನೀಡಲಾಗುತ್ತಿದೆ.

Trending News