VIP Sim Card : 9999 ಅಥವಾ 7777 ನಂತಹ ಸಂಖ್ಯೆಯ ಉಚಿತ ಸಿಮ್ ಕಾರ್ಡ್ ಬೇಕೇ? ಈ ರೀತಿಯ ಬುಕ್ ಮಾಡಿ!

Sim Card : ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಒಂದೇ ರೀತಿಯ ಅಂಕಿಗಳು ಒಂದೇ ಅನುಕ್ರಮದಲ್ಲಿ ಬರಬೇಕೆಂದು ಬಯಸಿದರೆ ಆ ಸಿಮ್‌ ಕಾರ್ಡ್‌ ಪಡೆಯಲು ಒಂದು ಉಪಾಯವಿದೆ. ಇದನ್ನು ವಿಐಪಿ ಸಂಖ್ಯೆ ಎಂದೂ ಕರೆಯುತ್ತಾರೆ. ನೀವು ಸಹ ಇದೇ ರೀತಿಯ ಸಿಮ್ ಕಾರ್ಡ್ ಖರೀದಿಸಲು ಬಯಸಿದರೆ, ಇಲ್ಲಿ ಉಪಾಯವಿದೆ.

Written by - Chetana Devarmani | Last Updated : Nov 27, 2022, 11:21 PM IST
  • 9999 ಅಥವಾ 7777 ನಂತಹ ಸಂಖ್ಯೆಯ ಉಚಿತ ಸಿಮ್ ಕಾರ್ಡ್ ಬೇಕೇ?
  • ಇದನ್ನು ವಿಐಪಿ ಸಂಖ್ಯೆ ಎಂದೂ ಕರೆಯುತ್ತಾರೆ
  • ಆ ಸಿಮ್‌ ಕಾರ್ಡ್‌ ಪಡೆಯಲು ಒಂದು ಉಪಾಯವಿದೆ
VIP Sim Card : 9999 ಅಥವಾ 7777 ನಂತಹ ಸಂಖ್ಯೆಯ ಉಚಿತ ಸಿಮ್ ಕಾರ್ಡ್ ಬೇಕೇ? ಈ ರೀತಿಯ ಬುಕ್ ಮಾಡಿ! title=
ವಿಐಪಿ ಸಂಖ್ಯೆ

Booking Sim Card: ನೀವು ವಿಐಪಿ ನಂಬರ್ ಇರುವ ಸಿಮ್ ಕಾರ್ಡ್ ಅನ್ನು ಉಚಿತವಾಗಿ ಖರೀದಿಸಲು ಬಯಸಿದರೆ, ಈಗ ನೀವು ಅದಕ್ಕಾಗಿ ಹಣವನ್ನು ಖರ್ಚು ಮಾಡಬೇಕಾಗಿಲ್ಲ ಏಕೆಂದರೆ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ವಿಐಪಿ ನಂಬರ್ ಇರುವ ಸಿಮ್ ಕಾರ್ಡ್ ಅನ್ನು ಉಚಿತವಾಗಿ ನೀಡುತ್ತಿದೆ. ವಿಶೇಷವೆಂದರೆ ವಿಐಪಿ ನಂಬರ್ ಇರುವ ಸಿಮ್ ಕಾರ್ಡ್ ಗೆ ಹೋಮ್ ಡೆಲಿವರಿಯನ್ನೂ ಉಚಿತವಾಗಿ ನೀಡಲಾಗುತ್ತಿದೆ. ನೀವು ಸಹ ಅಂತಹ ಸಿಮ್‌ ಪಡೆಯಲು ಹೊರಟಿದ್ದರೆ, ಇಂದು ನಾವು ನಿಮಗೆ ಪ್ರಕ್ರಿಯೆಯ ಬಗ್ಗೆ ತಿಳಿಸಲಿದ್ದೇವೆ.

ಇದನ್ನೂ ಓದಿ : ಭರ್ಜರಿ ಡಿಸ್ಕೌಂಟ್ ಮೇಳ: ಕೇವಲ 849 ರೂ.ಗೆ ಖರೀದಿಸಿ 32 ಇಂಚಿನ LED ಟಿವಿ

ಈ ಕಂಪನಿಯು ವಿಐಪಿ ಸಿಮ್ ಕಾರ್ಡ್ ನೀಡುತ್ತಿದೆ : 

ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ವಿಐಪಿ ಸಂಖ್ಯೆಯನ್ನು ಅವರ ಮನೆಯ ವರೆಗೂ ಉಚಿತವಾಗಿ ಪಡೆಯಲು ಆಫರ್ ನೀಡಿದೆ. ಹಾಗಾಗಿ ನೀವು ಕೂಡ ಅಂತಹ ಮೊಬೈಲ್ ಸಂಖ್ಯೆಯನ್ನು ಪಡೆಯಲು ಬಯಸಿದರೆ, ಫ್ರೀ ಹೋಮ್‌ ಡಿಲೆವರಿ ಪಡೆಯಬಹುದು. ಈ ಸಂಖ್ಯೆಯು ತುಂಬಾ ವಿಶಿಷ್ಟವಾಗಿದೆ ಮತ್ತು ನೀವು ಇದನ್ನು ತುಂಬಾ ಇಷ್ಟಪಡುತ್ತೀರಿ.

ಈ ಸಂಖ್ಯೆಯನ್ನು ಪಡೆಯಲು, ನೀವು ಮೊದಲು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಅದರ ನಂತರ ನೀವು ಉಚಿತ ಫ್ಯಾನ್ಸಿ ಸಂಖ್ಯೆಯನ್ನು ಆಯ್ಕೆ ಮಾಡುವ ಅವಕಾಶ ಪಡೆಯುತ್ತೀರಿ. ನೀವು ಸಂಖ್ಯೆಯನ್ನು ಆಯ್ಕೆ ಮಾಡಿದ ಬಳಿಕ ನೀವು ಪೋಸ್ಟ್‌ಪೇಯ್ಡ್ ಅಥವಾ ಪ್ರಿಪೇಯ್ಡ್‌ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಇದರ ನಂತರ ನೀವು ಮನೆಯ ವಿಳಾಸ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಈಗ ನೀವು OTP ಯೊಂದಿಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಮತ್ತು ಸಿಮ್ ಅನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ನೀವು ಸುಲಭವಾಗಿ ಸಿಮ್ ಅನ್ನು ಮನೆಯವರೆಗೆ ಡೆಲಿವರಿ ಪಡೆಯಬಹುದು.  

ಇದನ್ನೂ ಓದಿ : Recharge Plan: ಕೇವಲ 25 ರೂ.ಗಳಲ್ಲಿ 2ಜಿಬಿ ಹೈಸ್ಪೀಡ್ ಇಂಟರ್ನೆಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News