ಮಾರುಕಟ್ಟೆಗೆ ಬಂತು 8 ಸಾವಿರ ರೂಪಾಯಿ ಬೆಲೆಯ 32 ಇಂಚಿನ ಟಿವಿ.!

ಈಗ ಈ US ಬ್ರ್ಯಾಂಡ್ ತನ್ನ ಪೋರ್ಟ್‌ಫೋಲಿಯೊದಲ್ಲಿ ಮೂರು ಹೊಸ ಮಾದರಿಗಳನ್ನು ಪರಿಚಯಿಸಿದೆ.  32-ಇಂಚಿನ ನಾನ್-ಸ್ಮಾರ್ಟ್ ಟಿವಿ, 43-ಇಂಚಿನ UHD ಮತ್ತು 50-ಇಂಚಿನ UHD ಸ್ಮಾರ್ಟ್ ಟಿವಿ. 

Written by - Ranjitha R K | Last Updated : Jun 9, 2022, 03:23 PM IST
  • ಕೇವಲ 7999 ರೂ.ಗೆ 32 ಇಂಚಿನ ಟಿವಿ
  • ವೆಸ್ಟಿಂಗ್‌ಹೌಸ್ ಬಿಡುಗಡೆ ಮಾಡಿದೆ ಮೂರೂ ಮಾದರಿ ಟಿವಿ
  • ಏನಿರಲಿದೆ ಈ ಟಿವಿಯ ವೈಶಿಷ್ಟ್ಯ
ಮಾರುಕಟ್ಟೆಗೆ ಬಂತು 8 ಸಾವಿರ ರೂಪಾಯಿ ಬೆಲೆಯ  32 ಇಂಚಿನ ಟಿವಿ.!   title=
westinghouse tv 32 (file photo)

ಬೆಂಗಳೂರು : ವೆಸ್ಟಿಂಗ್‌ಹೌಸ್ ಕಳೆದ ವರ್ಷ ಭಾರತದಲ್ಲಿ ತನ್ನ ಸ್ಮಾರ್ಟ್ ಮತ್ತು ನಾನ್ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿತ್ತು. ಈಗ ಈ US ಬ್ರ್ಯಾಂಡ್ ತನ್ನ ಪೋರ್ಟ್‌ಫೋಲಿಯೊದಲ್ಲಿ ಮೂರು ಹೊಸ ಮಾದರಿಗಳನ್ನು ಪರಿಚಯಿಸಿದೆ.  32-ಇಂಚಿನ ನಾನ್-ಸ್ಮಾರ್ಟ್ ಟಿವಿ, 43-ಇಂಚಿನ UHD ಮತ್ತು 50-ಇಂಚಿನ UHD ಸ್ಮಾರ್ಟ್ ಟಿವಿ. ಇದರ ಆರಂಭಿಕ ಬೆಲೆ 7999 ರೂ. ಈ ಮೂರು ಮಾದರಿಗಳು ಜೂನ್ 13 ರಿಂದ Amazonನಲ್ಲಿ ಗ್ರಾಹಕರಿಗೆ ಲಭ್ಯವಿರಲಿದೆ.

ಕೇವಲ 7999 ರೂ.ಗೆ 32 ಇಂಚಿನ ಟಿವಿ :
7,999  ರೂಪಾಯಿ ಬೆಲೆಯ 32 ಇಂಚಿನ ನಾನ್ ಸ್ಮಾರ್ಟ್ ಟಿವಿ ಮಾದರಿಯಲ್ಲಿ LED ಸ್ಕ್ರೀನ್, HD ರೆಸಲ್ಯೂಶನ್ ಮತ್ತು 2 HDMI, 2 USB ಪೋರ್ಟ್‌ಗಳೊಂದಿಗೆ ಬರುತ್ತದೆ. ಮಾದರಿಯು 20W ನ ಆಡಿಯೊ ಔಟ್‌ಪುಟ್‌ನೊಂದಿಗೆ 2 ಸ್ಪೀಕರ್‌ಗಳನ್ನು ಹೊಂದಿದ  MP3/WMA ಆಡಿಯೊ ಸ್ವರೂಪಗಳನ್ನು ಬೆಂಬಲಿಸುವ ಆಡಿಯೊ ಈಕ್ವಲೈಜರ್, 350 ನಿಟ್‌ಗಳ ಬ್ರೈಟ್ ನೆಸ್ ಮತ್ತು ಅಸಾಧಾರಣ ದೃಶ್ಯಗಳನ್ನು ನೀಡುವ ಸ್ಥಿರ ಕಾಂಟ್ರಾಸ್ಟ್  ರೆಶಿಯೋದೊಂದಿಗೆ ಬರುತ್ತದೆ. 

ಇದನ್ನೂ ಓದಿ : ಸ್ಯಾಮ್‌ಸಂಗ್ ತರುತ್ತಿದೆ 200MP ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ..! ಹೊಸ ಫೋನ್ ವಿಡಿಯೋ ಇಲ್ಲಿದೆ

43-ಇಂಚು ಮತ್ತು 50-ಇಂಚಿನ ಸ್ಮಾರ್ಟ್ ಟಿವಿ :
43-ಇಂಚಿನ UHD/4K ಮಾದರಿಯ ಬೆಲೆ  20,999 ರೂ. ಮತ್ತು 50-ಇಂಚಿನ UHD/4K ಟಿವಿ ಬೆಲೆ  27,999 ರೂ. ಇದು 2GB RAM, 8GB ROM, 3 HDMI ಪೋರ್ಟ್‌ಗಳು ಮತ್ತು 2 USB ಪೋರ್ಟ್‌ಗಳನ್ನು ಬೆಂಬಲಿಸುತ್ತದೆ. ಈ ಮಾದರಿಗಳು HDR10, Chromecastನೊಂದಿಗೆ ಬರುತ್ತವೆ. ಎರಡೂ ಮಾದರಿಗಳು 2 ಸ್ಪೀಕರ್‌ಗಳು, ಡಿಜಿಟಲ್ ಸೌಂಡ್ ಫಿಲ್ಟರ್ ಮತ್ತು ಸರೌಂಡ್ ಸೌಂಡ್ ತಂತ್ರಜ್ಞಾನವನ್ನು ಬೆಂಬಲಿಸುವ 40-ವ್ಯಾಟ್ ಸ್ಪೀಕರ್ ಔಟ್‌ಪುಟ್ ಅನ್ನು ಒಳಗೊಂಡಿವೆ.

ಸ್ಮಾರ್ಟ್ ಟಿವಿಗಳು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಿಂದ ಚಾಲಿತವಾಗಿದ್ದು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಅನೇಕ ಅಪ್ಲಿಕೇಶನ್‌ಗಳು ಮತ್ತು ಗೇಮ್ ಗಳಿಗೆ ಅಕ್ಸೆಸ್ ಪಡೆಯಬಹುದು. ಅಲ್ಲದೆ, , ಬಳಕೆದಾರರು ರಿಮೋಟ್‌ನ ಒಂದೇ ಟಚ್ ಮೂಲಕ Amazon Prime, YouTube ಮತ್ತು Sony Livಗೂ ಅಕ್ಸೆಸ್ ಪಡೆಯಬಹುದು.  

ಇದನ್ನೂ ಓದಿ : Moto G62 5G: ಕೈಗೆಟುಕುವ ಬೆಲೆಯಲ್ಲಿ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಮೋಟೋರೊಲಾ

ಗ್ರಾಹಕರು 43-ಇಂಚಿನ ಮತ್ತು 50-ಇಂಚಿನ ಟಿವಿ  500 ನಿಟ್ಸ್ ಬ್ರೈಟ್‌ನೆಸ್, ಬೆಜೆಲ್-ಲೆಸ್ ವಿನ್ಯಾಸ, 4K ರೆಸಲ್ಯೂಶನ್, ಗೂಗಲ್ ಅಸಿಸ್ಟೆಂಟ್, ಐಪಿಎಸ್‌ನೊಂದಿಗೆ ಬರುತ್ತದೆ. ಎರಡೂ ಟಿವಿಗಳು ಪ್ಯಾನೆಲ್‌ಗಳು, ಡ್ಯುಯಲ್-ಬ್ಯಾಂಡ್ ವೈ-ಫೈ, 6000+ ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳು, ಅಲಾಯ್ ಸ್ಟ್ಯಾಂಡ್‌ನೊಂದಿಗೆ ಹೊಸ ವಿನ್ಯಾಸವನ್ನು ಹೊಂದಿವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.a

Trending News