WhatsApp : ವಾಟ್ಸಾಪ್ ಅಪ್ಲಿಕೇಶನ್ ಸೇವೆ ಸ್ಥಗಿತ.!! ಬಳಕೆದಾರರಿಗೆ ಬಿಗ್‌ ಶಾಕ್‌

 WhatsApp down : ಈ ಅಪ್ಲಿಕೇಶನ್ ಅನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಇದು ವಿಶೇಷವಾಗಿ ಭಾರತದಲ್ಲಿ ಅನೇಕ ಬಳಕೆದಾರರನ್ನು ಹೊಂದಿದೆ. 

Written by - Chetana Devarmani | Last Updated : Jul 20, 2023, 08:56 AM IST
  • ವಾಟ್ಸಾಪ್ ಅಪ್ಲಿಕೇಶನ್ ಸೇವೆ ಸ್ಥಗಿತ.!!
  • ನಿನ್ನೆ ರಾತ್ರಿ ಡೌನ್‌ ಆಗಿತ್ತು Whatsapp
  • ಸಾವಿರಾರು ಜನರಿಂದ ಬಂತು ಕಂಪ್ಲೇಂಟ್‌
WhatsApp : ವಾಟ್ಸಾಪ್ ಅಪ್ಲಿಕೇಶನ್ ಸೇವೆ ಸ್ಥಗಿತ.!! ಬಳಕೆದಾರರಿಗೆ ಬಿಗ್‌ ಶಾಕ್‌   title=

WhatsApp ಸಂದೇಶಗಳು, ವಿಡಿಯೋ - ಆಡಿಯೋ ಕರೆಗಳು ಮತ್ತು ಧ್ವನಿ ಸಂದೇಶಗಳಂತಹ ಹಲವಾರು ಸೇವೆಗಳನ್ನು ಒಳಗೊಂಡಿದೆ. ಈ ಅಪ್ಲಿಕೇಶನ್ ಅನ್ನು ಪ್ರಪಂಚದಾದ್ಯಂತ ಲಕ್ಷಾಂತರ ಜನರು ಬಳಸುತ್ತಾರೆ. ಇದು ವಿಶೇಷವಾಗಿ ಭಾರತದಲ್ಲಿ ಅನೇಕ ಬಳಕೆದಾರರನ್ನು ಹೊಂದಿದೆ. ನಿನ್ನೆ ಮಧ್ಯರಾತ್ರಿ 1.15ಕ್ಕೆ ವಾಟ್ಸಾಪ್ ಬಳಕೆದಾರರಿಗೆ ಕರೆ ಮತ್ತು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗಲಿಲ್ಲ. ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್‌ನಂತಹ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರು ಈ ಬಗ್ಗೆ ದೂರು ನೀಡಿದ್ದಾರೆ. ವಾಟ್ಸಾಪ್ ಸೇವೆ 40 ರಿಂದ 50 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ.

ಈ ಬಗ್ಗೆ ಕೆಲ ಬಳಕೆದಾರರು ಪ್ರತಿಕ್ರಿಯಿಸಿದ್ದು, ತಾಂತ್ರಿಕ ದೋಷದಿಂದ ವಾಟ್ಸಾಪ್ ಆಪ್ ಸೇವೆಗೆ ತೊಂದರೆಯಾಗಿರಬಹುದು ಎಂದಿದ್ದಾರೆ. ಈ ಸೇವೆಯನ್ನು ಸ್ಥಗಿತಗೊಳಿಸಿರುವುದರಿಂದ ಮೆಟಾ ಕಂಪನಿಗೆ ಕೊಂಚ ಅಡಚಣೆ ಉಂಟಾಗಬಹುದು ಎನ್ನಲಾಗಿದೆ.

ವಾಟ್ಸಾಪ್ ಆ್ಯಪ್ ಸ್ಥಗಿತ!

ವಾಟ್ಸಾಪ್ ಆ್ಯಪ್ ಸ್ಥಗಿತಗೊಂಡಿರುವುದು ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಐರೋಪ್ಯ ದೇಶಗಳಲ್ಲಿ ಅನೇಕ ಜನರು ವಾಟ್ಸಾಪ್ ಬಳಸುತ್ತಾರೆ. ಭಾರತದಲ್ಲಿ ಸುಮಾರು 15,000 ಜನರು ತಮ್ಮ WhatsApp ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿ ಮಾಡಿದ್ದಾರೆ.

ಇದನ್ನೂ ಓದಿ:Redmi Watch 3 Active ಟೀಸರ್ ಬಿಡುಗಡೆಗೊಳಿಸಿದ ಶಾವೋಮಿ, 3 ದಿನ ನೀರಿನಲ್ಲಿರಬಲ್ಲದು!

US ನಲ್ಲಿ ಸುಮಾರು 26,000 ಜನರು WhatsApp ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಅವರು ತಮ್ಮ ದೂರುಗಳನ್ನು ಮೆಟಾ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೆಟಾ ಕಂಪನಿ ಹೇಳುವುದೇನು?

ಬಳಕೆದಾರರ ದೂರುಗಳಿಗೆ ತಕ್ಷಣ ಸ್ಪಂದಿಸದ ಮೆಟಾ, ಸಂದೇಶಗಳನ್ನು ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ವಾಟ್ಸಾಪ್ ಸೇವೆಯ ಮೇಲೆ ಪರಿಣಾಮ ಬೀರಿದೆ. ಇದಕ್ಕೆ ಟೆಕ್ನಿಕಲ್‌ ಸಮಸ್ಯೆ ಕಾರಣ  ಎಂದು  ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ. ಇದಾದ ನಂತರ ವಾಟ್ಸಾಪ್ ಸೇವೆಯು ಹಳೆಯ ಸ್ಥಿತಿಗೆ ಮರಳಿತು.

WhatsApp ಅನ್ನು ಹೆಚ್ಚು ಬಳಸುವ ದೇಶಗಳು:

WhatsApp ಅನ್ನು 2009 ರಲ್ಲಿ ಪ್ರಾರಂಭಿಸಲಾಯಿತು. WhatsApp ಭಾರತದಲ್ಲಿ ಹೆಚ್ಚು ಬಳಕೆಯಾಗುವ ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಆಗಿದೆ. ಭಾರತದಲ್ಲಿ ಅತಿ ಹೆಚ್ಚು WhatsApp ಬಳಕೆದಾರರನ್ನು ಹೊಂದಿದೆ ಎಂದು ಡೇಟಾ ತೋರಿಸುತ್ತದೆ. ಏಪ್ರಿಲ್ 2023 ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಸುಮಾರು 487.5 ಮಿಲಿಯನ್ ವಾಟ್ಸಾಪ್‌ ಬಳಕೆದಾರರು ಭಾರತದಲ್ಲಿ ಇದ್ದಾರೆ.

ಇದನ್ನೂ ಓದಿ: ಆಲಿಯಾ - ರಣಬಿರ್‌ ವಿಚ್ಛೇದನ? ಕಂಗನಾ ನಂತರ, ನೀತು ಕಪೂರ್ ಪೋಸ್ಟ್ ಹೆಚ್ಚಿಸಿತು ಆತಂಕ!

ಭಾರತದ ನಂತರ ಅತಿ ಹೆಚ್ಚು ವಾಟ್ಸಾಪ್ ಬಳಕೆದಾರರನ್ನು ಹೊಂದಿರುವ ದೇಶ ಬ್ರೆಜಿಲ್. ಒಟ್ಟು 118.5 ಮಿಲಿಯನ್ ಜನರು ವಾಟ್ಸಾಪ್ ಬಳಸುತ್ತಿದ್ದಾರೆ. ಇಂಡೋನೇಷ್ಯಾ, ಅಮೇರಿಕಾ, ರಷ್ಯಾ, ಮೆಕ್ಸಿಕೋ ದೇಶಗಳು ನಂತರದ ಸ್ಥಾನದಲ್ಲಿವೆ. ಶೇ.69 ರಷ್ಟು ಇಂಟರ್ನೆಟ್ ಬಳಕೆದಾರರು ವಾಟ್ಸಾಪ್ ಬಳಸುತ್ತಾರೆ ಎಂದು ಹೇಳಲಾಗಿದೆ. WhatsApp ಅನ್ನು 180 ದೇಶಗಳಲ್ಲಿ 60 ವಿವಿಧ ಭಾಷೆಗಳಲ್ಲಿ ಬಳಸಲಾಗುತ್ತದೆ.

WhatsApp ನಿಷೇಧಿತ ದೇಶಗಳು

ಕೆಲವು ಭದ್ರತಾ ಕಾರಣಗಳಿಗಾಗಿ ಪ್ರಪಂಚದಾದ್ಯಂತದ ಕೆಲವು ದೇಶಗಳು WhatsApp ಅಪ್ಲಿಕೇಶನ್ ಅನ್ನು ನಿಷೇಧಿಸಿವೆ. ಆದರೆ ಬದಲಾಗಿ ಅವರು ಇದೇ ರೀತಿಯ ಇತರ ಕೆಲವು ಅಪ್ಲಿಕೇಶನ್‌ಗಳನ್ನು ಬಳಸುತ್ತಾರೆ. ಕತಾರ್‌ನಲ್ಲಿ ವಾಟ್ಸಾಪ್, ಸ್ಕೈಪ್, ಫೇಸ್‌ಬುಕ್, ಫೇಸ್ ಟೈಮ್‌ನಂತಹ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ಇಲ್ಲಿ ಈ ಅಪ್ಲಿಕೇಶನ್‌ಗಳನ್ನು ಬಳಸುವುದು ಕ್ರಿಮಿನಲ್ ಅಪರಾಧ.

ದಕ್ಷಿಣ ಕೊರಿಯಾದಲ್ಲಿ ಸಹ ವಾಟ್ಸಾಪ್ ಅನ್ನು ನಿಷೇಧಿಸಲಾಗಿದೆ. ಈ ಆಪ್ ಮೂಲಕ ಶತ್ರು ರಾಷ್ಟ್ರಗಳು ತಮ್ಮ ದೇಶಗಳ ಮಾಹಿತಿಯನ್ನು ಕದಿಯುತ್ತವೆ ಎಂಬ ಅನುಮಾನ ಈ ದೇಶದ ಸರ್ಕಾರಕ್ಕೆ ಇರುವುದರಿಂದ ಇಲ್ಲಿ ಇದರ ಸೇವೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.

ಚೀನಾ ಸರ್ಕಾರವು ತನ್ನ ನಾಗರಿಕರ ಮೊಬೈಲ್ ಫೋನ್‌ಗಳಲ್ಲಿ ಬರುವ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಕೆಲವು ವರದಿಗಳು ಹೊರಹೊಮ್ಮಿವೆ. ಆದರೆ ವಾಟ್ಸಾಪ್ ಬಳಕೆದಾರರ ಸಂದೇಶಗಳನ್ನು ಓದಲು ಸಾಧ್ಯವಾಗದ ಕಾರಣ ದೇಶದಲ್ಲಿ ಇದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News