ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದಲು ಇಲ್ಲಿದೆ ಸುಲಭ ಟ್ರಿಕ್

WhatsApp: ಜಗತ್ತಿನ ತ್ವರಿತ ಮೆಸೇಜಿಂಗ್  ಅಪ್ಲಿಕೇಶನ್‌ ವಾಟ್ಸಾಪ್‌ನಲ್ಲಿ ನೀವು ಡಿಲೀಟ್ ಮಾಡಿರುವ ಸಂದೇಶಗಳನ್ನು ಕೂಡ ಓದಬಹುದು. ಹೇಗೆ ಅಂತೀರಾ ಇಲ್ಲಿದೆ ಸುಲಭ ಟಿಪ್ಸ್. 

Written by - Yashaswini V | Last Updated : Jun 12, 2024, 02:50 PM IST
  • ನಿಮಗೆಲ್ಲರಿಗೂ ತಿಳಿದಿರುವಂತೆ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್ ತನ್ನ ಬಳಕೆದಾರರಿಗೆ ಚಾಟ್ ಡಿಲೀಟ್ ವೈಶಿಷ್ಟ್ಯವನ್ನು ಸಹ ನೀಡುತ್ತದೆ.
  • ಇದರ ಸಹಾಯದಿಂದ ನಿಮಗೆ ಬಂದಿರುವ ಸಂದೇಶಗಳನ್ನಷ್ಟೇ ಅಲ್ಲ, ನೀವು ಕಳುಹಿಸಿದ ಸಂದೇಶವನ್ನು ಬೇರೆಯವರ ಚಾಟ್ ವಿಂಡೋದಿಂದಲೂ ಡಿಲೀಟ್ ಮಾಡಬಹುದು.
  • ಅಷ್ಟೇ ಸುಲಭವಾಗಿ, ನೀವು ಅಳಿಸಿರುವ ಸಂದೇಶವನ್ನು ನೀವು ಪುನಃ ಓದಬಹುದು.
ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದಲು ಇಲ್ಲಿದೆ ಸುಲಭ ಟ್ರಿಕ್ title=

WhatsApp Tips: ವಿಶ್ವದಲ್ಲೇ ತ್ವರಿತ ಸಂದೇಶ ಕಳುಹಿಸುವಿಕೆಗಾಗಿ ಪ್ರಸಿದ್ಧಿಯಾಗಿರುವ ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ತಪ್ಪಾದ ಸಂದೇಶ ರವಾನೆಯಾಗಿದ್ದರೆ, ಇಲ್ಲವೇ ನೀವು ಕಳುಹಿಸಿರುವ ಸಂದೇಶವನ್ನು ಅಳಿಸಬೇಕು ಎಂದಾದರೆ ಅದನ್ನು ಸುಲಭವಾಗಿ ಡಿಲೀಟ್ ಮಾಡಬಹುದು. ಅಷ್ಟೇ ಅಲ್ಲ, ನೀವು ಬಯಸಿದರೆ ಡಿಲೀಟ್ ಮಾಡಿರುವ ಸಂದೇಶಗಳನ್ನು ಕೂಡ ಓದಬಹುದು. 

ಹೌದು, ಕೆಲವೊಮ್ಮೆ, ಗೊತ್ತಿಲ್ಲದೆಯೇ ಪ್ರಮುಖ ಚಾಟ್ ಗಳನ್ನು ಅಳಿಸಿಬಿಡುತ್ತೇವೆ. ನಂತರ, ಈ ಸಂದೇಶವನ್ನು ಉಳಿಸಿಕೊಳ್ಳಬೇಕಿತ್ತು, ಮಿಸ್ ಆಗಿ ಡಿಲೀಟ್ ಆಗಿಹೋಯ್ತು ಎಂದು ಪರಿತಪಿಸುತ್ತೇವೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಮೊಬೈಲ್‌ನಲ್ಲಿ ಸಣ್ಣ ಟ್ರಿಕ್ ಬಳಸುವ ಮೂಲಕ ನೀವು ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಲಾದ ಸಂದೇಶವನ್ನು (WhatsApp Deleted Messages) ಕೂಡ ಓದಬಹುದು. 

ಇದನ್ನೂ ಓದಿ- Blue Traffic Light: ಟ್ರಾಫಿಕ್ ಲೈಟ್‌ನ ಸೆಟಪ್‌ನಲ್ಲಿ ನೀಲಿ ಲೈಟ್, ಏನಿದರ ಅರ್ಥ

ವಾಟ್ಸಾಪ್ ಚಾಟ್ ಡಿಲೀಟ್ ವೈಶಿಷ್ಟ್ಯ: 
ನಿಮಗೆಲ್ಲರಿಗೂ ತಿಳಿದಿರುವಂತೆ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್ (WhatsApp) ತನ್ನ ಬಳಕೆದಾರರಿಗೆ ಚಾಟ್ ಡಿಲೀಟ್ ವೈಶಿಷ್ಟ್ಯವನ್ನು ಸಹ ನೀಡುತ್ತದೆ. ಇದರ ಸಹಾಯದಿಂದ ನಿಮಗೆ ಬಂದಿರುವ ಸಂದೇಶಗಳನ್ನಷ್ಟೇ ಅಲ್ಲ, ನೀವು ಕಳುಹಿಸಿದ ಸಂದೇಶವನ್ನು ಬೇರೆಯವರ ಚಾಟ್ ವಿಂಡೋದಿಂದಲೂ ಡಿಲೀಟ್ ಮಾಡಬಹುದು. ಅಷ್ಟೇ ಸುಲಭವಾಗಿ, ನೀವು ಅಳಿಸಿರುವ ಸಂದೇಶವನ್ನು ನೀವು ಪುನಃ ಓದಬಹುದು. ಇದಕ್ಕಾಗಿ ಕೆಲವೇ ಕೆಲವು ಹಂತಗಳನ್ನು ಅನುಸರಿಸಬೇಕಾಗುತ್ತದೆ...

ಡಿಲೀಟ್ ಮಾಡಲಾದ ವಾಟ್ಸಾಪ್ ಚಾಟ್ (WhatsApp Chat) ಓದಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
ಮೊದಲನೇ ವಿಧಾನ: 

ಹಂತ- 1: ವಾಟ್ಸಾಪ್‌ನಲ್ಲಿ ಡಿಲೀಟ್ ಆಗಿರುವ ಸಂದೇಶಗಳನ್ನು ಓದಲು ಮೊದಲಿಗೆ ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸಬೇಕು. 
ಹಂತ- 2: ಸ್ಮಾರ್ಟ್‌ಫೋನ್‌ನ ಸೆಟ್ಟಿಂಗ್‌ಗಳಲ್ಲಿ  'ಅಪ್ಲಿಕೇಶನ್‌ಗಳು ಮತ್ತು ಅಧಿಸೂಚನೆ' ಆಯ್ಕೆಯನ್ನು ಆರಿಸಿ. 
ಹಂತ- 3: ಇದರಲ್ಲಿ ಅಧಿಸೂಚನೆ ಎಂಬ ಆಯ್ಕೆಯನ್ನು ಆರಿಸಿ. 
ಹಂತ- 4: ಇದರಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ 'ಅಧಿಸೂಚನೆ ಇತಿಹಾಸ' ಎಂಬ ಆಯ್ಕೆ ಕಾಣಿಸುತ್ತದೆ. ಇದರ ಮೇಲೆ ಟ್ಯಾಪ್ ಮಾಡಿ. 
ಹಂತ- 5: ಅಧಿಸೂಚನೆ ಇತಿಹಾಸ ಆಯ್ಕೆಯನ್ನು ಟ್ಯಾಪ್ ಮಾಡಿದ ಕೂಡಲೇ ಟಾಗಲ್ ಅನ್ನು ಆನ್ ಮಾಡಿ.
ಹಂತ- 6: ಅಧಿಸೂಚನೆ ಇತಿಹಾಸದಲ್ಲಿ ಕಳೆದ 24 ಗಂಟೆಗಳಲ್ಲಿ ಸ್ವೀಕರಿಸಿರುವ ಅಧಿಸೂಚನೆಗಳ ಲಾಗ್ ಅನ್ನು ಪೊಯರಿಶೀಲಿಸಬಹುದು. 

ಇದನ್ನೂ ಓದಿ- T20 WorldCup: ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ವಾಟ್ಸಾಪ್, ಡೌನ್‌ಲೋಡ್ ಮಾಡಲು ಇಲ್ಲಿದೆ ಸುಲಭ ವಿಧಾನ

ಡಿಲೀಟ್ ವಾಟ್ಸಾಪ್ ಮೆಸೇಜ್ ಓದಲು ಎರಡನೇ ವಿಧಾನ: 
>> ನಿಮ್ಮ ಸ್ಮಾರ್ಟ್‌ಫೋನ್‌ನಿಂದ ವಾಟ್ಸಾಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ. 
>> ನಂತರ Google Play Store ಅಥವಾ App Store ನಿಂದ ವಾಟ್ಸಾಪ್ ಮರುಸ್ಥಾಪಿಸಿ .
>> ಬಳಿಕ ವಾಟ್ಸಾಪ್ ಅಪ್ಲಿಕೇಶನ್ ತೆರೆದು ನಿಮ್ಮ ಸಂಖ್ಯೆಯನ್ನು ನಮೂದಿಸಿ ಮತ್ತು ಲಭ್ಯವಿರುವ ಬ್ಯಾಕಪ್‌ಗಳನ್ನು ಪರಿಶೀಲಿಸಲು ಅನುಮತಿ ನೀಡಿ.
>> ಇತ್ತೀಚಿನ ಬ್ಯಾಕಪ್ ಮರುಸ್ಥಾಪಿಸು ಬಟನ್ ಮೇಲೆ ಟ್ಯಾಪ್ ಮಾಡಿ.
>> ಹಿನ್ನೆಲೆಯಲ್ಲಿ ಮಾಧ್ಯಮವು ಡೌನ್‌ಲೋಡ್ ಆಗುವಾಗ ಇದು ನಿಮ್ಮ ಎಲ್ಲಾ ಸಂದೇಶಗಳನ್ನು ಹಿಂಪಡೆಯುತ್ತದೆ. ಆದಾಗ್ಯೂ, ಕೊನೆಯ ಬ್ಯಾಕಪ್ ಒಂದು ದಿನದ ಹಿಂದೆ ಆಗಿದ್ದರೆ ಮತ್ತು ನೀವು ಒಂದು ಗಂಟೆಯ ಹಿಂದೆ ಅಳಿಸಿದ ಚಾಟ್ ಅನ್ನು ವೀಕ್ಷಿಸಲು ಪ್ರಯತ್ನಿಸುತ್ತಿದ್ದರೆ, ಅದು ಕಾರ್ಯನಿರ್ವಹಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News