WhatsApp New Privacy Policy: WhatsApp ಹೊಸ ಆಟ ಆರಂಭ! ಗೌಪ್ಯತಾ ನೀತಿ ಒಪ್ಪಿಕೊಳ್ಳದ ಬಳಕೆದಾರದಿಗೆ ಎದುರಾದ ಅಡಚಣೆಗಳು

WhatsApp New Privacy Policy - ತನ್ನ ನೂತನ ಗೌಪ್ಯತಾ ನೀತಿ ಹಾಗೂ ನಿಯಮಗಳನ್ನು ಒಪ್ಪಿಕೊಳ್ಳದ ಕೆಲ ಗ್ರಾಹಕರ ಆಡಿಯೋ ಹಾಗೂ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಸ್ಥಗಿತಗೊಳಿಸಿದೆ. ಇದೀಗ ಅವರೆಲ್ಲರ ಮೊಬೈಲ್ ಸ್ಕ್ರೀನ್ ಮೇಲೆ ನೀತಿ ಒಪ್ಪಿಕೊಳ್ಳಲು ರಿಮೈಂಡರ್ ಬರುತ್ತಿವೆ.

Written by - Nitin Tabib | Last Updated : May 24, 2021, 10:18 PM IST
  • ಹೊಸ ನೀತಿ ಒಪ್ಪಿಕೊಳ್ಳದ ಗ್ರಾಹಕರ ವೈಶಿಷ್ಟ್ಯ ತಗ್ಗಿಸಲು ಆರಂಭಿಸಿದ ವಾಟ್ಸ್ ವಾಪ್.
  • ಆಡಿಯೋ, ವಿಡಿಯೋ ಕರೆಗಳನ್ನು ಮಾಡಲು ಹೋದ ಬಳಕೆದಾರರಿಗೆ ಎದುರಾದ ಅಡಚಣೆ.
  • ಸಾಮಾಜಿಕ ಮಾಧ್ಯಮಗಳ ಮೂಲಕ ಅಳಲು ತೋಡಿಕೊಂಡ ಬಳಕೆದಾರರು.
WhatsApp New Privacy Policy: WhatsApp ಹೊಸ ಆಟ ಆರಂಭ!  ಗೌಪ್ಯತಾ ನೀತಿ ಒಪ್ಪಿಕೊಳ್ಳದ ಬಳಕೆದಾರದಿಗೆ ಎದುರಾದ ಅಡಚಣೆಗಳು  title=
WhatsApp New Privacy Policy (File Photo)

ನವದೆಹಲಿ: WhatsApp New Privacy Policy - ತನ್ನ ನೂತನ ಗೌಪ್ಯತೆ ನೀತಿಯನ್ನು (New Privacy Policy) ಒಪ್ಪಿಕೊಳ್ಳಲು ವಾಟ್ಸಾಪ್  (WhatsApp)ಮತ್ತೊಮ್ಮೆ ತನ್ನ ಗ್ರಾಹಕರಿಗೆ ಅಧಿಸೂಚನೆಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ನೀತಿಯನ್ನು ಒಪ್ಪಿಕೊಳ್ಳದ ಕೆಲ ಗ್ರಾಹಕರು ವಾಟ್ಸ್ ಆಪ್ ಮೇಲೆ ಆಡಿಯೋ ಹಾಗೂ ವಿಡಿಯೋ  ಕರೆ (WhatsApp Audio Calling & WhatsApp Video Calling) ಮಾಡಲು ತೊಂದರೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ- Fake SIM Card: ಎಚ್ಚರಿಕೆ! ನಿಮ್ಮ ಹೆಸರಲ್ಲೂ ನಕಲಿ SIM ಚಾಲ್ತಿಯಲ್ಲಿದೆಯಾ? ಈ ರೀತಿ ಬ್ಲಾಕ್ ಮಾಡಿ

ಸ್ಕ್ರೀನ್ ಮೇಲೆ ಅಧಿಸೂಚನೆಗಳು ಬರುತ್ತಿವೆ
ಇದುವರೆಗೆ ಬಂದ ವರದಿಗಳ ಪ್ರಕಾರ, 'ಹೊಸ ಗೌಪ್ಯತೆ ನೀತಿಯನ್ನು ಅಂಗೀಕರಿಸದಿದ್ದಲ್ಲಿ ವಾಟ್ಸಾಪ್‌ನ ಆಡಿಯೋ ಮತ್ತು ವಿಡಿಯೋ ಕರೆ ಕಾರ್ಯನಿರ್ವಹಿಸುವುದಿಲ್ಲ' ಎಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ಹೇಳಿಕೊಂಡಿದ್ದಾರೆ. ಪ್ರತಿ ಬಾರಿ ನೀವು ಕರೆ ಮಾಡಲು ಪ್ರಯತ್ನಿಸಿದಾಗ, ನೀವು ಒಂದೇ ಸಂದೇಶವನ್ನು ಪಡೆಯುತ್ತೀರಿ, ಅದು ಕರೆ ಮಾಡಲು ಹೊಸ ವಾಟ್ಸಾಪ್ ನೀತಿಯನ್ನು ಸ್ವೀಕರಿಸಬೇಕಾಗುತ್ತದೆ ಎಂದು ಹೇಳುತ್ತಿದೆ. ಹೊಸ ನೀತಿಯ ಅಧಿಸೂಚನೆಯನ್ನು ಸ್ವೀಕರಿಸಿದ ಗ್ರಾಹಕರಿಗೆ ಮಾತ್ರ ಈ ಸಮಸ್ಯೆ ಎದುರಾಗುತ್ತಿದ್ದು, ಅವರು ಅಧಿಸೂಚನೆಯನ್ನು ಒಪ್ಪಿಕೊಳ್ಳುತ್ತಿಲ್ಲ.

ಇದನ್ನೂ ಓದಿ-Google Chrome ಸ್ಪೀಡ್ ಕಡಿಮೆಯಾಗಿದೆಯೇ? ಹಾಗಿದ್ರೆ ಹೀಗೆ ಮಾಡಿ!

ಕ್ರಮೇಣ ವೈಶಿಷ್ಟ್ಯಗಳನ್ನು ತಗ್ಗಿಸಲಾಗುವುದು
ಈ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಕಳೆದ ವಾರವಷ್ಟೇ ಐಟಿ ಸಚಿವಾಲಯ ವಾಟ್ಸ್‌ಆ್ಯಪ್‌ಗೆ ಸೂಚನೆ ನೀಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ. ಕೇಂದ್ರ ಸರ್ಕಾರ ಹೊರಡಿಸಿದ ಆದೇಶದಲ್ಲಿ, ವಾಟ್ಸಾಪ್ ಮುಂಬರುವ ಎರಡು ವಾರಗಳಲ್ಲಿ ಸ್ಪಂಧಿಸದೆ ಹೋದಲ್ಲಿ ಸರ್ಕಾರ ಕೂಡ ಇದರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗಿದೆ. ಇನ್ನೊಂದೆಡೆ ವಾಟ್ಸ್ ಆಪ್ ಕೂಡ ಮೇ 15 ರೊಳಗೆ ನೀತಿಯನ್ನು ಒಪ್ಪಿಕೊಳ್ಳದ ಗ್ರಾಹಕರ ವೈಶಿಷ್ಟ್ಯವನ್ನು ಕ್ರಮೇಣ ತಗ್ಗಿಸಲಾಗುವುದು ಎಂದು ಸ್ಪಷ್ಟಪಡಿಸಿದೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-ಆಕ್ಸಿಮೀಟರ್ ಬೇಕಾಗಿಲ್ಲ.!ಮೊಬೈಲ್ ನಲ್ಲೇ ನೋಡಬಹುದು ಆಕ್ಸಿಜನ್ ಲೆವೆಲ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News