WhatsApp Stop Alert! WhatsApp ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ, ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಂದ್ !

WhatsApp Stop Alert! ಪ್ರಸ್ತುತ ವಿಶ್ವಾದ್ಯಂತ ಲಕ್ಷಾಂತರ ಜನ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಅನ್ನು ಬಳಸುತ್ತಾರೆ. ಕಂಪನಿಯು ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅವರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಆಪ್‌ಗೆ ನಿರಂತರವಾಗಿ ಅಪ್‌ಡೇಟ್‌ಗಳನ್ನು ಜಾರಿಗೆ ತರುತ್ತಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಗತಿ ನಿಮ್ಮಲ್ಲಿ ಹಲವರನ್ನು ಬೆಚ್ಚಿಬೀಳಿಸಲಿದೆ. 

Written by - Nitin Tabib | Last Updated : Sep 4, 2021, 02:45 PM IST
  • ಪ್ರಸ್ತುತ ವಿಶ್ವಾದ್ಯಂತ ಲಕ್ಷಾಂತರ ಜನ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಅನ್ನು ಬಳಸುತ್ತಾರೆ.
  • ಕಂಪನಿಯು ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅವರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಆಪ್‌ಗೆ ನಿರಂತರವಾಗಿ ಅಪ್‌ಡೇಟ್‌ಗಳನ್ನು ಜಾರಿಗೆ ತರುತ್ತಿದೆ.
  • ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಗತಿ ನಿಮ್ಮಲ್ಲಿ ಹಲವರನ್ನು ಬೆಚ್ಚಿಬೀಳಿಸಲಿದೆ.
WhatsApp Stop Alert! WhatsApp ಬಳಕೆದಾರರಿಗೊಂದು ಶಾಕಿಂಗ್ ಸುದ್ದಿ, ಶೀಘ್ರದಲ್ಲಿಯೇ ವಾಟ್ಸ್ ಆಪ್ ಬಂದ್ ! title=
WhatsApp Stop Alert (File Photo)

ನವದೆಹಲಿ: WhatsApp Stop Alert! ಪ್ರಸ್ತುತ ವಿಶ್ವಾದ್ಯಂತ ಲಕ್ಷಾಂತರ ಜನ ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಅನ್ನು ಬಳಸುತ್ತಾರೆ. ಕಂಪನಿಯು ತನ್ನ ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ಅವರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಆಪ್‌ಗೆ ನಿರಂತರವಾಗಿ ಅಪ್‌ಡೇಟ್‌ಗಳನ್ನು ಜಾರಿಗೆ ತರುತ್ತಿದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಸಂಗತಿ ನಿಮ್ಮಲ್ಲಿ ಹಲವರನ್ನು ಬೆಚ್ಚಿಬೀಳಿಸಲಿದೆ.  ಏಕೆಂದರೆ ಆಂಗ್ಲ ಮಾಧ್ಯಮದ ದಿನ ಪತ್ರಿಕೆಯೊಂದರ ಟೆಕ್ ವಿಭಾಗದಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ,  ಶೀಘ್ರದಲ್ಲೇ WhatsApp ಅನೇಕ ಮೊಬೈಲ್‌ಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಲಿದೆ ಎನ್ನಲಾಗಿದೆ. ಹೀಗಿರುವಾಗ ಅಪ್ಪ್ಲಿಕೆಶನ್ ಸ್ಥಗಿತಗೊಂಡ ನಂತರ ಬಳಕೆದಾರರು ತಮ್ಮ ಹಳೆ ಚಾಟ್ ಅನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.  WhatsApp ಯಾವ ಫೋನ್ ನಲ್ಲಿ ಮತ್ತು ಏಕೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ತಿಳಿದುಕೊಳ್ಳೋಣ ಬನ್ನಿ.

ಈ ಕಾರಣಕ್ಕಾಗಿ ಬ್ಯಾನ್ ಮಾಡಲಾಗುತ್ತಿದೆ
ನಿಮ್ಮ ವೇಳೆ ನಿಮ್ಮ ಫೋನ್ ಕೂಡ ಹಳೆ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ವಾಟ್ಸಾಪ್ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಆಪ್ ತಯಾರಕರನ್ನು ಹೇಳುವ ಪ್ರಕಾರ, ಸ್ಮಾರ್ಟ್‌ಫೋನ್ ಅಪ್‌ಡೇಟ್ ಮಾಡದ ಜನರು ವಾಟ್ಸಾಪ್ ಪ್ರವೇಶವನ್ನು ಕಳೆದುಕೊಳ್ಳಬಹುದು. ಅಪ್ಲಿಕೇಶನ್ ತಯಾರಕರು ತಮ್ಮ ಸಾಧನಗಳನ್ನು ಆಪರೇಟಿಂಗ್ ಸಿಸ್ಟಂನ ಮೇಲಿನ ಆವೃತ್ತಿಗೆ ಅಪ್‌ಡೇಟ್ ಮಾಡುವುದನ್ನು ಮುಂದುವರಿಸಲು ಬಳಕೆದಾರರಿಗೆ ಸಲಹೆ ನೀಡಿದ್ದಾರೆ. ಅಪ್‌ಡೇಟ್ ಮಾಡದವರು ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕು ಅಥವಾ ವಾಟ್ಸಾಪ್ ಹೊರತುಪಡಿಸಿ ಬೇರೆ ಅಪ್ಲಿಕೇಶನ್‌ಗಾಗಿ ನೋಡಬೇಕು. ವಾಟ್ಸಾಪ್ ಬಳಕೆದಾರರಿಗೆ ಹೊಸ ಮೊಬೈಲ್ ಖರೀದಿಸಲು ಕೇವಲ ಎರಡು ತಿಂಗಳುಗಳಿವೆ. ಹೀಗೆ ಮಾಡಲು ಒಂದು ವೇಳೆ ಅವರು ವಿಫಲವಾದರೆ, ಅವರು ತಮ್ಮ ಖಾತೆಗೆ ಪ್ರವೇಶವನ್ನು ಕಳೆದುಕೊಳ್ಳಬಹುದು. ಅವರು ಹೊಸ ಮೊಬೈಲ್ ಖರೀದಿಸಲು ಸಾಧ್ಯವಾದರೆ ಪರವಾಗಿಲ್ಲ, ಆದರೆ ಸಾಧ್ಯವಾಗದಿದ್ದರೆ ಅವರಿಗೆ ತೊಂದರೆ ಎದುರಾಗಲಿದೆ.

ಈ ಮೊಬೈಲ್ ಗಳ ಮೇಲೆ WhatsApp ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ
40 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳಿದ್ದು, ಅವುಗಳಲ್ಲಿ ವಾಟ್ಸಾಪ್ (WhatsApp) ತನ್ನ ಕಾರ್ಯನಿರ್ವಹಿಸುವಿಕೆಯನ್ನು ಸ್ಥಗಿತಗೊಳಿಸಲಿದೆ.  ಈ ಫೋನ್‌ಗಳಲ್ಲಿ  ಐಒಎಸ್ (iPhones) ಮತ್ತು ಆಂಡ್ರಾಯ್ಡ್ (Android Phones) ಎರಡೂ ಶಾಮೀಲಾಗಿವೆ.' ದಿ ಸನ್' ನ ವರದಿಯ ಪ್ರಕಾರ, ಆಂಡ್ರಾಯ್ಡ್ 4.0.4 ಮತ್ತು ಹಳೆಯ ರೂಪಾಂತರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಾರ್ಟ್ ಫೋನ್ ಬಳಕೆದಾರರು ವಾಟ್ಸಪ್ ಬೆಂಬಲವನ್ನು ಪಡೆಯುವುದನ್ನು ಕಳೆದುಕೊಳ್ಳಲಿದ್ದಾರೆ. ಆಪಲ್‌ ವಿಷಯಕ್ಕೆ ಬಂದರೆ, , ಐಒಎಸ್ 9ರಲ್ಲಿ  ಚಾಲನೆಯಲ್ಲಿರುವ ಐಫೋನ್‌ಗಳು ಬೂಟ್ ಆಗಲಿವೆ. ಈ ವರ್ಚುವಲ್ ವಾಟ್ಸಾಪ್ ನಿಷೇಧಕ್ಕೆ ಒಳಗಾಗುವ ಮೊಬೈಲ್‌ಗಳ ಪಟ್ಟಿ (WhatsApp Ban List) ಇಲ್ಲಿದೆ,

ಇದನ್ನೂ ಓದಿ-Child Safety Updates: ತೀವ್ರ ಟೀಕೆಯ ನಂತರ ವಿಳಂಬಗೊಳಿಸಲು ಮುಂದಾದ Apple

>> Samsung Galaxy S3 Mini, Trend II, Trend Lite, Core, Ace 2

>> LG Optimus F7, F5, L3 II Dual, F7 II, F5 II

>> Soney Experia

>> Huawei Ascend Mate and Ascend D2

>> Apple iPhone SE, 6S, ಹಾಗೂ 6S Plus

ಇದನ್ನೂ ಓದಿ-ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟ Redmi 10 Prime..! ವೈಶಿಷ್ಟಗಳು ಇಲ್ಲಿವೆ

ವಾಟ್ಸಾಪ್ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಮತ್ತು ಇನ್ನೂ ಹಲವು ವೈಶಿಷ್ಟ್ಯಗಳನ್ನೂ ಲಾಂಚ್ ಮಾಡುವ ಗುರಿಯೊಂದಿಗೆ, ಈ ಹಳೆಯ ಫೋನ್‌ಗಳು ನಿರುಪಯುಕ್ತವಾಗಲಿವೆ ಮತ್ತು ಆಪ್ ಅನ್ನು ಸರಿಯಾಗಿ ರನ್ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಈ ಫೋನ್‌ಗಳಿಗೆ ಸರಿಯಾದ ಭದ್ರತೆ ಅಥವಾ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸೌಲಭ್ಯವನ್ನು ಒದಗಿಸಲು WhatsApp ಗೆ ಸಾಧ್ಯವಾಗದಿರಬಹುದು ಎನ್ನಲಾಗಿದೆ. 

ಇದನ್ನೂ ಓದಿ-ಗ್ರಾಹಕರಿಗೆ ಶಾಕ್ ..! Samsung Galaxy A52 ಬೆಲೆ ಏರಿಸಿದ ಕಂಪನಿ, ಖರೀದಿಗೂ ಮುನ್ನ ತಿಳಿಯಿರಿ ಹೊಸ ದರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News