ನವದೆಹಲಿ : ಸ್ಯಾಮ್‌ಸಂಗ್ (Samsung) ಈ ವರ್ಷ ಮಾರ್ಚ್‌ನಲ್ಲಿ ಗ್ಯಾಲಕ್ಸಿ ಎ 52 (Samsung Galaxy A52) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಈ ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಕಾಂಫಿಗರಶನ್ ಮತ್ತು ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ಬಿಡುಗಡೆಯಾದ 5 ತಿಂಗಳ ನಂತರ, ಕಂಪನಿಯು ಈ ಫೋನಿನ ಬೆಲೆಯನ್ನು ಹೆಚ್ಚಿಸಿದೆ.
Samsung Galaxy A52 ಹೊಸ ಬೆಲೆ :
ಸ್ಯಾಮ್‌ಸಂಗ್ (Samsung) ಭಾರತದಲ್ಲಿ ಗ್ಯಾಲಕ್ಸಿ ಎ 52 ಬೆಲೆಯನ್ನು 1,000 ರೂಪಾಯಿ ಹೆಚ್ಚಿಸಿದೆ. ಗ್ಯಾಲಕ್ಸಿ A52s 5G ಅನ್ನು ಬಿಡುಗಡೆ ಮಾಡಿದ ನಂತರ ಈ ಬೆಲೆ ಏರಿಕೆ ಮಾಡಲಾಗಿದೆ. ಹೊಸ ಬೆಲೆ ಪ್ರಸ್ತುತ Samsung.com ನಲ್ಲಿ ಲೈವ್ ಆಗಿದೆ. ಗ್ಯಾಲಕ್ಸಿ A52 ನ ಬೇಸ್ ವೇರಿಯಂಟ್ 6GB + 128GB ಬೆಲೆ ರೂ 26,499 ಮತ್ತು 8GB + 128GB ವೇರಿಯಂಟ್ ಬೆಲೆ ರೂ 27,999 ಆಗಿತ್ತು. ಆದರೆ, ಈಗ ಇದೇ ಫೋನ್ ಗೆ 27,499 ರೂ ಮತ್ತು 28,999 ರೂ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ : WhatsApp ಯಾವ ಕ್ಷಣದಲ್ಲಾದರೂ ಪರಿಚಯಿಸಬಹುದು ಈ ವೈಶಿಷ್ಟ್ಯ, ನಿಮಗೆಷ್ಟು ಲಾಭದಾಯಕ ತಿಳಿಯಿರಿ
ಬೆಲೆ ಏರಿಕೆಗೆ ಕಾರಣವೇನು? :
ಗ್ಯಾಲಕ್ಸಿ A52 ಸ್ಯಾಮ್‌ಸಂಗ್ 2021 ರಲ್ಲಿ ಬಿಡುಗಡೆ ಮಾಡಿದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ (Smartphone) ಒಂದಾಗಿದೆ. ಆದರೆ ಜಾಗತಿಕ ಸೆಮಿಕಂಡಕ್ಟರ್‌ಗಳ ಕೊರತೆಯಿಂದಾಗಿ ಭಾರತದಲ್ಲಿ ಈ ಫೋನ್ ಔಟ್ ಆಫ್ ಸ್ಟಾಕ್ ಆಗಿದೆ.
Samsung Galaxy A52 ವಿಶೇಷತೆಗಳು :
Galaxy A52 6.5-ಇಂಚಿನ FHD+ ಇನ್ಫಿನಿಟಿ-O ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. 90Hz ರಿಫ್ರೆಶ್ ರೇಟ್ ನೊಂದಿಗೆ ಈ ಫೋನ್ ಬರುತ್ತದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 720G SoC ನಿಂದ ಚಾಲಿತವಾಗಿದೆ. ಫೋನ್ 4,500mAh ಬ್ಯಾಟರಿಯನ್ನು ಒಳಗೊಂಡಿದೆ. ಇದು 25W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.
ಇದನ್ನೂ ಓದಿ : Redmi 10 Prime, Redmi TWS Earbuds ಇಂದು ಭಾರತದಲ್ಲಿ ಬಿಡುಗಡೆ, ಇಲ್ಲಿದೆ ಫುಲ್ ಡೀಟೇಲ್ಸ್
Samsung Galaxy A52 ಕ್ಯಾಮೆರಾ :
ಈ ಡಿವೈಸ್ 64MP (ವೈಡ್, OIS) + 12MP (ಅಲ್ಟ್ರಾ-ವೈಡ್) + 5MP (ಮ್ಯಾಕ್ರೋ) + 5MP (ಡೆಪ್ತ್ ) ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು ಮತ್ತು 32MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇದು ಮೂರು ವರ್ಷಗಳ ಓಎಸ್ ಅಪ್‌ಗ್ರೇಡ್‌ಗಳು ಮತ್ತು ಕನಿಷ್ಠ ನಾಲ್ಕು ವರ್ಷಗಳಸುರಕ್ಷಾ ಅಪ್‌ಡೇಟ್‌ಗಳೊಂದಿಗೆ ಆಂಡ್ರಾಯ್ಡ್ 11 ಆಧಾರಿತ ಒನ್ ಯುಐ 3.1 ಅನ್ನು ರನ್ ಮಾಡುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ನ ಇತರ ವೈಶಿಷ್ಟ್ಯಗಳು
ಫೋನಿನ ಇತರ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಸ್ಟೀರಿಯೋ ಸ್ಪೀಕರ್‌ಗಳು, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್, ಸ್ಯಾಮ್‌ಸಂಗ್ ಪೇ ಮತ್ತು ಧೂಳು/ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಸೇರಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.