2008 GO20 Asteroid: ತಾಜ್ ಮಹಲ್ ಗಿಂತ (Taj Mahal) ಗಾತ್ರದಲ್ಲಿ ಮೂರು ಪಟ್ಟು ದೊಡ್ಡದಾಗಿರುವ ಕ್ಷುದ್ರಗ್ರಹ ಅಥವಾ ಉಲ್ಕಾಶಿಲೆ (Asteroid)ಭೂಮಿಗೆ ಬಹಳ ಹತ್ತಿರದಿಂದ ಹಾದುಹೋಗಲಿದೆ. ನಾಸಾ (NASA) ಪ್ರಕಾರ, ಇದು ಭಾನುವಾರ ಭೂಮಿಗೆ ಹತ್ತಿರವಾಗಲಿದೆ. ಭೂಮಿಯ ಸಮೀಪವಿರುವ ಈ ವಸ್ತುವಿಗೆ 2008 GO20 ಎಂದು ಹೆಸರಿಸಲಾಗಿದೆ. ಇದು ಗಂಟೆಗೆ 29 ಲಕ್ಷ ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಬರುತ್ತಿದೆ. ಇದು ನಮ್ಮ ಗ್ರಹದಿಂದ ಸುಮಾರು 30 ರಿಂದ 40 ಲಕ್ಷ ಕಿಲೋಮೀಟರ್ ದೂರದಲ್ಲಿರಲಿದೆ. ಈ ಕ್ಷುದ್ರಗ್ರಹದ ಅಗಲ 97 ಮೀಟರ್ ಮತ್ತು ಉದ್ದ 230 ಮೀಟರ್ ಆಗಿದೆ. ಇದು ಬಹುತೇಕ ನಾಲ್ಕು ಫುಟ್ಬಾಲ್ ಮೈದಾನಗಳಿಗೆ ಸಮಾನವಾಗಿರುತ್ತದೆ. ಇದರ ಗಾತ್ರ ತಾಜ್‌ಮಹಲ್‌ಗಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ನಾಸಾ ಪ್ರಕಾರ, ಇವುಗಳನ್ನು Near-Earth Object (NEO) ಅಥವಾ ಉಲ್ಕಾಶಿಲೆ ಅಥವಾ ಧೂಮಕೇತು ಎಂದು ವ್ಯಾಖ್ಯಾನಿಸಲಾಗಿದೆ. ಭೂಮಿಯ ಮತ್ತು ಸೂರ್ಯನ ನಡುವಿನ ಅಂತರ 1.3 ಪಟ್ಟು ಕಡಿಮೆಯಾದಾಗ ಅದು ಭೂಮಿಯೊಂದಿಗೆ ಅಪ್ಪಳಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಈ ಕ್ಷುದ್ರಗ್ರಹದ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ಅದು ಭೂಮಿಗೆ ಅಷ್ಟೇನೂ ಹಾನಿ ಮಾಡುವುದಿಲ್ಲ ಎಂದು NASA ಹೇಳಿದೆ.
ಇದನ್ನೂ ಓದಿ-Sound Of Universe:ಬ್ರಹ್ಮಾಂಡದ ಹಮ್ಮಿಂಗ್ ಸೌಂಡ್ ವಿಡಿಯೋ ನೀವೂ ಈ ಮೊದಲು ನೋಡಿದ್ದೀರಾ?
ಭೂಮಿಗೆ ಅಪ್ಪಳಿಸುವುದಿಲ್ಲ
2008 GO20 ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆಯಿಲ್ಲದ ಕಾರಣ ಭಯಭೀತರಾಗುವ ಅವಶ್ಯಕತೆ ಇಲ್ಲ ಎಂದು ಭುವನೇಶ್ವರನ ಪಢನಿ ಸಮಾಂತಾ ತಾರಾಮಂಡಲದ ಉಪನಿರ್ದೇಶಕ ಡಾ. ಶುಭೆಂದು ಪಟ್ನಾಯಕ್ ಹೇಳಿದ್ದಾರೆ. ಹೀಗಾಗಿ ನಾವು ಕೋಲಾಹಲ ಸೃಷ್ಟಿಸುವ ಅವಶ್ಯಕತೆ ಇಲ್ಲ. ನಾವು ಸಂಪೂರ್ಣವಾಗಿ ಸುರಕ್ಷಿತವಾಗಿದ್ದೇವೆ. ಈ ಕ್ಷುದ್ರಗ್ರಹವು 1935 ರಲ್ಲಿ ಭೂಮಿಗೆ ತುಂಬಾ ಹತ್ತಿರದಿಂದ ಅಂದರೆ ಭೂಮಿಯಿಂದ 19 ಲಕ್ಷ ಕಿ.ಮೀ ದೂರದಿಂದ ಹಾದುಹೋಗಿತ್ತು, 1977 ರಲ್ಲಿ ಭೂಮಿಯಿಂದ 29 ಲಕ್ಷ ಕಿ.ಮೀ. ಮತ್ತು ಈ ಬಾರಿ ಅದು ಭೂಮಿಯಿಂದ 45 ಲಕ್ಷ ಕಿಲೋಮೀಟರ್ ದೂರದಲ್ಲಿದೆ. ಇದರರ್ಥ ಚಂದ್ರ ಹಾಗೂ ಭೂಮಿಯ ನಡುವೆ ಇರುವ ಅಂತರದ ಸುಮಾರು 11 ರಿಂದ 12 ಪಟ್ಟು ಹೆಚ್ಚು ಅಂತರದಿಂದ ಈ ಕ್ಷುದ್ರಗ್ರಹ ಭೂಮಿಯ ಬದಿಯಿಂದ ಹಾದುಹೋಗಲಿದೆ ಎಂದು ಡಾ. ಶುಭೆಂದು ಹೇಳಿದ್ದಾರೆ.
ಇದನ್ನೂ ಓದಿ-NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA
ಭೂಮಿಯ ಕಕ್ಷೆಗೆ ಪ್ರವೇಶಿಸುವ ಮುನ್ನವೇ ಬೂದಿಯಾಗಿ ಮಾರ್ಪಡುತ್ತವೆ ಕೆಲ ಕ್ಷುದ್ರಗ್ರಹಗಳು
2008 GO20 ಕ್ಷುದ್ರಗ್ರಹ, ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ರಾತ್ರಿ 11.21 ಕ್ಕೆ ಭೂಮಿಗೆ ಹತ್ತಿರವಾಗಲಿದೆ. ಈ ಕ್ಷುದ್ರಗ್ರಹವು ಗಂಟೆಗೆ 29 ಸಾವಿರ ಕಿಲೋಮೀಟರ್ ವೇಗದಲ್ಲಿ ಭೂಮಿಯ ಕಡೆಗೆ ಬರುತ್ತಿದೆ ಡಾ. ಶುಭೆಂದು ಹೇಳಿದ್ದಾರೆ. ಅಷ್ಟು ವೇಗದಲ್ಲಿ ಬರುವ ಕ್ಷುದ್ರಗ್ರಹದ ಹಾದಿಯಲ್ಲಿ ಏನಾದರೂ ಬಂದರೆ ಅದು ನಾಶವಾಗುತ್ತದೆ. ಜೂನ್ 20, 2008 ರಂದು ಕೊನೆಯ ಬಾರಿಗೆ ಕ್ಷುದ್ರಗ್ರಹವೊಂದು ಭೂಮಿಗೆ ತುಂಬಾ ಹತ್ತಿರದಿಂದ ಹಾದುಹೋಗಿತ್ತು. ಮುಂದಿನ ಬಾರಿ ಇದು ಜುಲೈ 25, 2034 ರಂದು ಮತ್ತೊಮ್ಮೆ ಭೂಮಿಯ ಹತ್ತಿರ ಹಾದುಹೋಗಲಿದೆ. ಲಕ್ಷಾಂತರ ಕ್ಷುದ್ರಗ್ರಹಗಳು ಮಂಗಳ ಮತ್ತು ಗುರುಗಳ ನಡುವೆ ಸೂರ್ಯನನ್ನು ಸುತ್ತುತ್ತಿವೆ. ಕೆಲವೊಮ್ಮೆ ಅವು ಭೂಮಿಯ ಗುರುತ್ವಾಕರ್ಷಣೆಯ ಬಲದಿಂದ ಹತ್ತಿರ ಬರುತ್ತವೆ. ಈ ಕ್ಷುದ್ರಗ್ರಹಗಳಲ್ಲಿ ಶೇ. 99.99 ರಷ್ಟು ಕ್ಷುದ್ರಗ್ರಹಗಳು ಭೂಮಿಯ ಕಕ್ಷೆ ತಲುಪುವ ಮುನ್ನವೇ ಬೂದಿಯಾಗುತ್ತವೆ ಎಂದು ಡಾ. ಶುಭೆಂದು ಹೇಳುತ್ತಾರೆ.
ಇದನ್ನೂ ಓದಿ-Spiders On Mars: ವಿಜ್ಞಾನಿಗಳ ನಿದ್ದೆಗೆಡಿಸಿದ ಮಂಗಳನ ಅಂಗಳದ ಜೇಡರಹುಳ ಆಕೃತಿಗಳ ರಹಸ್ಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ