ಇವತ್ತು ಬೆಳಗ್ಗೆ ಆಗುಂಬೆ ಘಾಟಯಲ್ಲಿ, ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಬೆಳಗಿನ ಜಾವವೇ ಮರ ಬಿದ್ದಿದ್ದರಿಂದ, ಬೆಳಗ್ಗೆ ಆರುಗಂಟೆ ಸುಮಾರಿಗೇನೆ, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಸಣ್ಣಗೆ ಮಳೆಯು ಬರುತ್ತಿತ್ತು. ಮರಬಿದ್ದಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು.ಈ ನಡುವೆ ಕೆಲವು ಸಣ್ಣ ವಾಹನಗಳು, ಮರದ ಅಡಿಯಲ್ಲಿ ಇದ್ದ ಸ್ವಲ್ಪ ಜಾಗದಲ್ಲಿ ತಮ್ಮ ವಾಹನಗಳನ್ನು ಮುಂದಕ್ಕೆ ತೆಗೆದುಕೊಂಡು ಹೋದರು. ಇದು ಅಚ್ಚರಿ ಮೂಡಿಸ್ತಿತ್ತಾದರೂ, ಅಲ್ಲಿದ್ದವರು ಯಾವುದೇ ಅಪಾಯ ಆಗದ ಭರವಸೆ ನೀಡಿ, ವಾಹನಗಳನ್ನ ಮುಂದಕ್ಕೆ ಸಾಗಿಸುತ್ತಿದ್ರು. ಇದರಿಂದ ಸಂಚಾರ ದಟ್ಟಣೆ ಜಾಸ್ತಿಯಾಗುವುದು ಸಹ ತಪ್ಪಿತ್ತು.ಸ್ಥಳೀಯರ ಜೊತೆ ಕೈ ಜೋಡಿಸಿದ ವಾಹನ ಚಾಲಕರು ಇನ್ನೂ ಆಗುಂಬೆಯ ಮೂರನೇ ತಿರುವಿನಲ್ಲಿ ಮರಬಿದ್ದ ವಿಚಾರ ತಿಳಿಯುತ್ತಲೇ, ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಮರವನ್ನು ತೆರವುಗೊಳಿಸುವ ಕೆಲಸಕ್ಕೆ ಮುಂದಾದರು. ಇದರ ಜೊತೆಯಲ್ಲಿ ವಿವಿಧ ವಾಹನಗಳ ಚಾಲಕರು ಕೂಡ ಸೇರಿಕೊಂಡು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೃಹತ್ ಗಾತ್ರದ ಮರವನ್ನು ಕತ್ತರಿಸಿ, ರಸ್ತೆ ಪಕ್ಕಕ್ಕೆ ಸರಿಸಿದ್ರು.