Viral news : ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಜನರ ಮನಸ್ಥಿತಿಯು ಹಲವಾರು ಬದಲಾವಣೆಗಳನ್ನು ಕಂಡಿದೆ. ಮದುವೆಯಾಗಿ ಲೈಫ್ ಸೆಟ್ ಆಗದಿದ್ದರೆ, ವಿಚ್ಛೇದನ ನೀಡಿ ಸರಳವಾಗಿ ಸಂಬಂಧ ಕಡಿದುಕೊಳ್ಳುವ ಪದ್ದತಿ ಹೆಚ್ಚಾಗುತ್ತಿದೆ. ಪ್ರೀತಿಗೆ ಕಣ್ಣಿಲ್ಲ ಎನ್ನುವ ಹಾಗೆ ಮದುವೆಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನವಂತಾಗಿದೆ ಇಂದಿನ ಪರಿಸ್ಥಿತಿ. ಇದಕ್ಕೆ ಉದಾರಹಣೆಂತೆ ವೃದ್ಧರೊಬ್ಬರು ತನ್ನ 103ನೇ ವಯಸ್ಸಿನಲ್ಲಿ 3ನೇ ಮದುವೆಯಾಗಿದ್ದಾರೆ.
ಹೌದು.. ಹಬೀಬ್ ನಾಸರ್ ಮಧ್ಯಪ್ರದೇಶದ ಭೋಪಾಲ್‌ನ ಇದ್ವಾರದವರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮೊದಲು ಮದುವೆಯಾಗಿದ್ದು ಮಹಾರಾಷ್ಟ್ರದ ನಾಸಿಕ್‌ನ ಮಹಿಳೆಯನ್ನು. ಮದುವೆಯಾದ ಕೆಲವೇ ವರ್ಷಗಳಲ್ಲಿ ಪತ್ನಿ ತೀರಿಕೊಂಡ ನಂತರ ಉತ್ತರ ಪ್ರದೇಶದ ಲಕ್ನೋ ಮೂಲದ ಮಹಿಳೆಯನ್ನು ವಿವಾಹವಾದರು. ಆದ್ರೆ ಅವರೂ ತೀರಿಕೊಂಡರು.
ಇದನ್ನೂ ಓದಿ:ಜನರ ಪ್ರಾಣಕ್ಕೆ ಅಪಾಯ ತರಲಿದೆ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗ! L&T ಗೆ PWD ಸೂಚನೆ
ಇಬ್ಬರು ಪತ್ನಿಯರು ಸತ್ತಿದ್ದರಿಂದ, ಹಬೀಬ್ ನಾಸರ್ ಏಕಾಂಗಿಯಾಗಿ ನರಳುತ್ತಿದ್ದರು. ತನ್ನನ್ನು ನೋಡಿಕೊಳ್ಳಲು ಮತ್ತು ತಮ್ಮ ಜೊತೆಗೆ ಯಾರೂ ಇಲ್ಲ ಎಂದು ಯೋಚಿಸಿ ಹಬೀಬ್ 3ನೇ ಮದುವೆಯಾಗಲು ನಿರ್ಧರಿಸಿದ್ದರು. ಅಲ್ಲದೆ, ಫಿರೋಜ್ ಜಗನ್ ಎಂಬ ಮಹಿಳೆಯನ್ನು ವಿವಾಹವಾದರು. ಈ ಮಹಿಳೆಗೆ 49 ವರ್ಷ. ಕಳೆದ ವರ್ಷ ಫಿರೋಜ್ ಮತ್ತು ಹಬೀಬ್ ವಿವಾಹವಾದರು. ಇದಾದ ಬಳಿಕ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮುದುಕನನ್ನು ಮದುವೆಯಾದ ಫಿರೋಜ್ ಜಹಾನ್ ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದು ತಮ್ಮ ಸ್ವಂತ ನಿರ್ಧಾರವಾಗಿದ್ದು, ತನ್ನನ್ನು ಮದುವೆಯಾಗುವಂತೆ ಯಾರೂ ಬಲವಂತ ಮಾಡಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ಪತಿಗೆ ದೇಹದಲ್ಲಿ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಅಂತ ವಿವರಿಸಿದ್ದಾಳೆ.
ಇದನ್ನೂ ಓದಿ:ಇಡಿ ದಾಳಿಗಳ ನಡುವೆ ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ನೀಡಿದ ಗೋವಾ ಹೈಕೋರ್ಟ್
ಇನ್ನು ಮೂರನೇ ಬಾರಿಗೆ ಮದುವೆಯಾಗಿರುವ ಹಬೀಬ್ ಕೂಡ ಈ ಬಗ್ಗೆ ಮಾತನಾಡಿದ್ದು, ನನ್ನ ಇಬ್ಬರೂ ಪತ್ನಿಯರು ತೀರಿಕೊಂಡ ಬಳಿಕ ಜೀವನದಲ್ಲಿ ಒಂಟಿಯಾಗಿದೆ ಎನ್ನುವ ಭಾವನೆ ಮೂಡಿತು. ಜೊತೆಗಾರ್ತಿ ಬೇಕು ಎನಿಸಿದ ಕಾರಣಕ್ಕಾಗಿಯೇ ಮೂರನೇ ಮದುವೆಯಾಗಿದ್ದಾಗಿ ಮಾಹಿತಿ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.