ಬಿಹಾರ: ಪ್ರೀತಿ ಎಂದರೆ ಹಾಗೆ, ಅದಕ್ಕೆ ಅದನ್ನೂ ಯಾವಾಗಲೂ ಕುರುಡು ಎಂದು ಹೇಳುತ್ತಾರೆ, ಈಗ ಶಿಕ್ಷಕನೊಬ್ಬ ತನ್ನ 20 ವರ್ಷದ ವಿದ್ಯಾರ್ಥಿನಿಯನ್ನೇ ಮದುವೆಯಾದ ಘಟನೆ ಬಿಹಾರದಲ್ಲಿ ನಡೆದಿದೆ.
ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗಿದೆ.ಈ ವಿಡಿಯೋದಲ್ಲಿ ದಂಪತಿಗಳಿಬ್ಬರು ಅಗ್ನಿಯ ಸುತ್ತಲು ಸುತ್ತುತ್ತಿರುವುದನ್ನು ಕಾಣಬಹುದು.
#Bihar #Marriage #love pic.twitter.com/2oCo8qCFIN
— RAJ (@Raj19972Raj) December 11, 2022
ವರದಿಗಳ ಪ್ರಕಾರ ವಿದ್ಯಾರ್ಥಿನಿಯು ಶಿಕ್ಷಕರ ಕೋಚಿಂಗ್ ತರಗತಿಗಳಲ್ಲಿ ಇಂಗ್ಲಿಷ್ ಕಲಿಯುತ್ತಿದ್ದಳು.ಈ ಸಮಯದಲ್ಲಿಇಬ್ಬರೂ ಪರಸ್ಪರ ಹತ್ತಿರವಾಗಿದ್ದರು ನಂತರ ಅದು ಕ್ರಮೇಣ ಪ್ರೀತಿಗೆ ತಿರುಗಿತು ಎನ್ನಲಾಗಿದೆ. ಇದಾದ ಬಳಿಕ ಶಿಕ್ಷಕಿ ಗುರುವಾರ ದೇವಸ್ಥಾನಕ್ಕೆ ತೆರಳಿ ಆಕೆಯನ್ನು ವಿವಾಹವಾಗಿದ್ದಾರೆ. ಶಿಕ್ಷಕರ ವಯಸ್ಸು 42 ವರ್ಷ ಮತ್ತು ವಿದ್ಯಾರ್ಥಿನಿಯ ವಯಸ್ಸು ಕೇವಲ 20 ವರ್ಷಗಳು ಎಂದು ತಿಳಿದುಬಂದಿದೆ. ಎರಡೂ ಮನೆಗಳ ಅಂತರ ಸುಮಾರು 800 ಮೀಟರ್ ದೂರದಲ್ಲಿದೆ ಎನ್ನಲಾಗಿದೆ. ಶಿಕ್ಷಕರ ಪತ್ನಿ ಹಲವು ವರ್ಷಗಳ ಹಿಂದೆ ನಿಧನರಾಗಿದ್ದರು ಎಂದು ತಿಳಿದುಬಂದಿದೆ.
ಸೋಶಿಯಲ್ ಮಿಡಿಯಾದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಕೆಲವರು ಇದನ್ನು ವಿರೋಧಿಸಿದರೆ ಕೆಲವರು ಇದನ್ನು ಬೆಂಬಲಿಸಿದ್ದಾರೆ.ಬಳಕೆದಾರರಲ್ಲಿ ಒಬ್ಬರು 'ಪ್ಯಾರ್ ಅಂಧಾ ಹೋತಾ ಹೈ ಎನ್ನುವುದು ಸಾಬೀತಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬ ಬಳಕೆದಾರರು 'ವಾವ್ ನೈಸ್' ಎಂದು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.