ʼBird Singing: ಹ್ಯಾರಿ ಪಾಟರ್‌ ಫ್ಯಾನ್‌ ಈ ಪಕ್ಷಿ: ಶಿಲ್ಲೆ ಹೊಡೆಯುತ್ತಾ ಹಾಡುತ್ತೆ ಈ ʼಜೆಫಿರ್‌ʼ

ಹ್ಯಾರಿ ಪಾಟರ್‌ ಸಿನಿಮಾದ ಮೊದಲ ಪಾರ್ಟ್‌ ರಿಲೀಸ್‌ ಆಗಿ 20 ವರ್ಷಗಳಾಗಿದೆ. ಆದರೆ ಆ ಸಿನಿಮಾದ ಕ್ರೇಜ್‌ ಮಾತ್ರ ಇನ್ನೂ ಕಡಿಮೆಯಾಗಿಲ್ಲ.

Written by - Bhavishya Shetty | Last Updated : Apr 25, 2022, 03:27 PM IST
  • ಹ್ಯಾರಿ ಪಾಟರ್‌ ಥೀಮ್‌ ಸಾಂಗ್‌ ಹಾಡುವ ಪಕ್ಷಿ
  • ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
  • 20 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ
ʼBird Singing: ಹ್ಯಾರಿ ಪಾಟರ್‌ ಫ್ಯಾನ್‌ ಈ ಪಕ್ಷಿ: ಶಿಲ್ಲೆ ಹೊಡೆಯುತ್ತಾ ಹಾಡುತ್ತೆ ಈ ʼಜೆಫಿರ್‌ʼ title=
Harry Potter Theme Song

ಕೆಲವು ಸಂಗೀತ ಪ್ರತಿಭೆಗಳು ಹಾಡುವುದನ್ನು ಕೇಳುವಾಗ ಕಿವಿಗೆ ಇಂಪನಿಸುತ್ತದೆ. ಇನ್ನು ನಾವೆಲ್ಲರೂ ಮನುಷ್ಯರು ಮೈಕ್‌ ಹಿಡಿದುಕೊಂಡು ಹಾಡೋದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಲ್ಲೊಂದು ಪಕ್ಷಿ ನಿರರ್ಗಳವಾಗಿ ಶಿಲ್ಲೆ ಹಾಕುವ ಮೂಲಕ ಹ್ಯಾರಿ ಪಾಟರ್‌ ಸಿನಿಮಾದ ಥೀಮ್‌ ಸಾಂಗ್‌ನ್ನು ಹಾಡುತ್ತಿದೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನು ಓದಿ: Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ

ಹ್ಯಾರಿ ಪಾಟರ್‌ ಸಿನಿಮಾದ ಮೊದಲ ಪಾರ್ಟ್‌ ರಿಲೀಸ್‌ ಆಗಿ 20 ವರ್ಷಗಳಾಗಿದೆ. ಆದರೆ ಆ ಸಿನಿಮಾದ ಕ್ರೇಜ್‌ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದೀಗ ಈ ಸಿನಿಮಾದ ಹಾಡನ್ನು ಹಾಡುವ ಮೂಲಕ ಪಕ್ಷಿಯೊಂದು ಮನೆ ಮಾತಾಗಿದೆ. 

ಯುರೋಪಿಯನ್‌ ಸ್ಟಾರ್‌ಲಿಂಗ್‌ ಜಾತಿಯ ಈ ಪಕ್ಷಿಯನ್ನು ಫರಿಜುವಾನ ಎಂಬವರು ಸಾಕುತ್ತಿದ್ದಾರೆ. ಇದರ ಹೆಸರು ಜೆಫಿರ್‌. ಸದ್ಯ ಈ ಪಕ್ಷಿ ತನ್ನ ಪ್ರತಿಭೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಫರಿಜುವಾನ ಪಕ್ಷಿಯ ವಿಡಿಯೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಈಗಾಗಲೇ  20 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಗಳಿಸಿದೆ. ಸದ್ಯ ಎಲ್ಲರನ್ನು ಮೋಡಿ ಮಾಡಿರುವ ಈ ಪಕ್ಷಿ ಟ್ರೆಂಡಿಂಗ್‌ನಲ್ಲಿದೆ. ಆರಂಭದಲ್ಲಿ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋವನ್ನು ಇದೀಗ animalsdoingthings ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. 

ಹಾಲಿವುಡ್‌ನ ಬಹುಪ್ರಸಿದ್ಧಿ ಪಡೆದ ಸಿನಿಮಾಗಳಲ್ಲಿ ಹ್ಯಾರಿ ಪಾಟರ್ ಚಲನಚಿತ್ರ ಕೂಡ ಒಂದು. ಸಾಕಷ್ಟು ಮಂದಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಈ ಸಿನಿಮಾಗೆ ಈಗ ಹಕ್ಕಿಗಳೂ ಫ್ಯಾನ್ಸ್‌ ಆಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

ಇದನ್ನು ಓದಿ: Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ

ಈ ವರ್ಷದ ಆರಂಭದಲ್ಲಿ ʼರಿಟರ್ನ್‌ ಟು ಹಾಗ್‌ವಾರ್ಟ್‌ʼಎಂಬ ಟೈಟಲ್‌ ಮೂಲಕ ಸಿನಿಮಾ ತೆರೆಗೆ ಬಂದಿತ್ತು. ಇದು ಹ್ಯಾರಿ ಪಾಟರ್‌ ಸಿನಿಮಾದ ಭಾಗವಾಗಿತ್ತು. ಈ ಚಿತ್ರ ಅಭಿಮಾನಿಗಳನ್ನು ಮತ್ತೆ ಹ್ಯಾರಿಪಾಟರ್‌ ಸಿನಿಮಾ ಜಗತ್ತಿಗೆ ಕೊಂಡೊಯ್ಯುವಂತೆ ಮಾಡಿದ್ದಂತು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News