ಜ್ಯೋತಿಷಿ ಮಾತು ಕೇಳಿ ಹಾವಿನ ಜೊತೆ ಇದೆಂಥಾ ಹುಚ್ಚಾಟ? ಆಗಿದ್ದೇನು ನೋಡಿ.!

Snake Bite On Tongue: ಈ ಘಟನೆ ಮುನ್ನೆಲೆಗೆ ಬಂದ ನಂತರ ಜನರು ಭಯಗೊಂಡಿದ್ದು, ಜ್ಯೋತಿಷಿಗಳ ಮೊರೆ ಹೋಗುವುದೇ ಬೇಡ ಎಂದು ಯೋಚಿಸುವಂತಾಗಿದೆ. ಏಕೆಂದರೆ ಜ್ಯೋತಿಷಿಯ ಸಲಹೆಯು ಈ ವ್ಯಕ್ತಿಯ ಜೀವಕ್ಕೇ ಕುತ್ತು ತಂದಿತ್ತು. 

Written by - Chetana Devarmani | Last Updated : Nov 26, 2022, 07:15 PM IST
  • ಹಾವು ಕಚ್ಚಿದ ಅನೇಕ ಪ್ರಕರಣಗಳನ್ನು ನೀವು ಕೇಳಿರಬಹುದು
  • ಜ್ಯೋತಿಷಿ ಮಾತು ಕೇಳಿ ಹಾವಿನ ಜೊತೆ ಇದೆಂಥಾ ಹುಚ್ಚಾಟ?
  • ಜೀವನವನೇ ಪಣಕ್ಕಿಟ್ಟ ರೈತನ ಸ್ಥಿತಿ ನೋಡಿ!
ಜ್ಯೋತಿಷಿ ಮಾತು ಕೇಳಿ ಹಾವಿನ ಜೊತೆ ಇದೆಂಥಾ ಹುಚ್ಚಾಟ? ಆಗಿದ್ದೇನು ನೋಡಿ.! title=
ಹಾವು

Snake Bite On Tongue: ಹಾವು ಕಚ್ಚಿದ ಅನೇಕ ಪ್ರಕರಣಗಳನ್ನು ನೀವು ಕೇಳಿರಬಹುದು, ಆದರೆ ತಮಿಳುನಾಡಿನಿಂದ ಬೆಳಕಿಗೆ ಬಂದಿರುವ ಪ್ರಕರಣವು ಇಲ್ಲಿಯವರೆಗೆ ನಡೆಯದ ವಿಚಿತ್ರ ಘಟನೆಯಾಗಿದೆ. ಇಲ್ಲಿ ಹಾವೊಂದು ರೈತನ ನಾಲಿಗೆಯನ್ನು ಕಚ್ಚಿದ್ದು, ಆತ ತನ್ನ ಧ್ವನಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾನೆ. ಜ್ಯೋತಿಷಿಯೊಬ್ಬರು ರೈತನಿಗೆ ತನ್ನ ನಾಲಿಗೆಯನ್ನು ಹಾವಿನ ಮುಂದೆ ಇಡುವಂತೆ ಹೇಳಿದ್ದರಂತೆ. ಜ್ಯೋತಿಷಿಯ ಈ ಮಾತನ್ನು ಕೇಳಿ ಹಾವಿನ ಜೊತೆ ಇಂತಹ ಹುಚ್ಚಾಟವಾಡಿದ್ದಾನೆ. 

ಇದನ್ನೂ ಓದಿ : ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಕಾನೂನು ಹೋರಾಟಕ್ಕೆ ಸಕಲ ಸಿದ್ಧತೆ: ಸಿಎಂ ಬೊಮ್ಮಾಯಿ

ಈ ಘಟನೆ ತಮಿಳುನಾಡಿನ ಈರೋಡ್‌ನಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಇಲ್ಲಿನ ರಾಜಾ ಎಂಬ ರೈತನಿಗೆ ಪದೇ ಪದೇ ಕನಸುಗಳು ಬರುತ್ತಿದ್ದು, ಆತನ ಕನಸಿನಲ್ಲಿ ಯಾವುದೋ ಹಾವು ಕಚ್ಚಿರುವುದು ಗೋಚರಿಸಿದೆ. ಅವನು ತನ್ನ ಕನಸಿನಿಂದ ಮತ್ತೆ ಮತ್ತೆ ಭೀತಿಗೊಳಗಾಗಿದ್ದಾನೆ. ಕೊನೆಗೆ ಜ್ಯೋತಿಷಿಯೊಬ್ಬರ ಬಳಿ ಹೋಗಿ ಕಥೆಯನ್ನೆಲ್ಲ ಹೇಳಿದ್ದಾನೆ. ಕೆಟ್ಟ ಕನಸುಗಳ ಪರಿಹಾರಕ್ಕಾಗಿ ನಾಗ ದೇವಾಲಯಕ್ಕೆ ಹೋಗಿ ಕೆಲವು ಆಚರಣೆಗಳನ್ನು ಮಾಡಲು ಜ್ಯೋತಿಷಿ ರೈತನಿಗೆ ಸಲಹೆ ನೀಡಿದರು.

ಆ ನಂತರ ರೈತ ಸಮೀಪದ ನಾಗ ದೇವಾಲಯಕ್ಕೆ ತೆರಳಿ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ಜ್ಯೋತಿಷಿ ಹೇಳಿದ ವಿಧಿವಿಧಾನಗಳ ಪ್ರಕಾರ, ದೇವಸ್ಥಾನದಲ್ಲಿದ್ದ ನಾಗರಹಾವಿನ ಮುಂದೆ ರೈತ ತನ್ನ ನಾಲಿಗೆಯನ್ನು ಮೂರು ಬಾರಿ ಚಾಚಿದನು. ಅದೇ ಸಮಯದಲ್ಲಿ ಆ ಹಾವು ರೈತನ ನಾಲಿಗೆಗೆ ಕಚ್ಚಿತು ಮತ್ತು ರೈತ ಅಳಲು ಪ್ರಾರಂಭಿಸಿದನಂತೆ.

ಇದನ್ನೂ ಓದಿ : ತುಂಬಾ Dominating ಆಗಿರುತ್ತಾರೆ ಈ ರಾಶಿಯ ಹುಡುಗಿಯರು!

ಜನರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೊತ್ತಿಗಾಗಲೇ ತಡವಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಈರೋಡ್‌ನ ಮಣಿಯನ್ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಧ್ವನಿ ಸಂಪೂರ್ಣವಾಗಿ ಹೋಗಿದ್ದು, ಅವನಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ರೈತನಿಗೆ ಮಾತು ಬರುವುದಿಲ್ಲ ಎಂದು ಕೆಲವರು ಹೇಳುತ್ತಿದ್ದಾರಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News