Baby elephant playing football video : ಪ್ರತಿದಿನ ನಾವು ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಮತ್ತು ತಮಾಷೆಯ ಸಂಗತಿಗಳನ್ನು ನೋಡುತ್ತೇವೆ. ಅದನ್ನು ನೋಡಿದ ನಂತರ ಬಳಕೆದಾರರ ಮುಖದಲ್ಲಿನ ನಗು ಮೂಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಪ್ರತಿದಿನ ಇಂತಹ ವಿಡಿಯೋಗಳಿಗಾಗಿ ಕಾಯುತ್ತಿರುತ್ತಾರೆ. ಇತ್ತೀಚೆಗೆ, ಅಂತಹ ಒಂದು ತಮಾಷೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಮರಿ ಆನೆ ಫುಟ್‌ಬಾಲ್‌ನೊಂದಿಗೆ ಆಡುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : Vira Video: ಚಿರತೆಯಿಂದ ಸೂರ್ಯ ನಮಸ್ಕಾರ : ವಿಡಿಯೋ ಸಖತ್ ವೈರಲ್
ಸಾಮಾನ್ಯವಾಗಿ ಆನೆಗಳು ಕಾಡುಗಳಲ್ಲಿ ತಿರುಗಾಡುವುದು, ತಮ್ಮ ಶಕ್ತಿಯಿಂದ ದೊಡ್ಡ ಮರಗಳನ್ನು ಬೀಳಿಸುವುದು ಮತ್ತು ತಮ್ಮ ಮಕ್ಕಳನ್ನು ನೋಡಿಕೊಳ್ಳುವುದು ಕಂಡುಬರುತ್ತದೆ. ಅದೇ ಸಮಯದಲ್ಲಿ, ದೈತ್ಯ ಆನೆಗಳ ಮಕ್ಕಳು ತುಂಬಾ ಮುದ್ದು ಮುದ್ದಾಗಿರುತ್ತವೆ. ಹೆಚ್ಚಾಗಿ ಕಿಡಿಗೇಡಿತನ ಮಾಡುವುದನ್ನು ನೋಡಬಹುದು. ಇಂತಹ ಪರಿಸ್ಥಿತಿಯಲ್ಲಿ ಮೃಗಾಲಯಗಳಲ್ಲಿ ವಾಸಿಸುವ ಆನೆಗಳ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿಯೂ ಇಂತಹದೊಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.
Baby elephant having fun.. 😊 pic.twitter.com/NkKU2VKUqB
— Buitengebieden (@buitengebieden) March 22, 2023
ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಮರಿ ಆನೆಯೊಂದು ಮೋಜು ಮಸ್ತಿ ಮಾಡುತ್ತಿದೆ. ಫುಟ್‌ಬಾಲ್‌ನೊಂದಿಗೆ ಆನೆ ಮರಿ ಆಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ, ಮರಿ ಆನೆಯು ಫುಟ್‌ಬಾಲ್ ಅನ್ನು ಕೆಲವೊಮ್ಮೆ ತನ್ನ ಕಾಲುಗಳಿಂದ ಮತ್ತು ಕೆಲವೊಮ್ಮೆ ತನ್ನ ಸೊಂಡಿಲಿನಿಂದ ತಳ್ಳುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ ಫುಟ್ಬಾಲ್ ಆಡುತ್ತ ಆನೆ ಮರಿ ಜಾರಿಬೀಳುತ್ತದೆ. ಇದಾದ ನಂತರ ಎದ್ದು ಮತ್ತೆ ಆಟವನ್ನು ಮುಂದುವರಿಸುವುದನ್ನು ಕಾಣಬಹುದು.
ಇದನ್ನೂ ಓದಿ : Viral Video: ಅಜ್ಜನ ಬೈಕ್ ಸ್ಟಂಟ್ ಸೂಪರೋ ಸೂಪರ್.. ಹರೆಯದ ಹುಡುಗರನ್ನೂ ಮೀರಿಸಿದ ತಾತ!
ಮರಿ ಆನೆಯ ಈ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸುದ್ದಿ ಬರೆಯುವವರೆಗೆ 3 ಮಿಲಿಯನ್‌ಗಿಂತಲೂ ಹೆಚ್ಚು, ಸುಮಾರು 30 ಲಕ್ಷ ಬಾರಿ ನೋಡಲಾಗಿದೆ. ಅದೇ ಸಮಯದಲ್ಲಿ, 56 ಸಾವಿರಕ್ಕೂ ಹೆಚ್ಚು ಬಳಕೆದಾರರು ಇದನ್ನು ಇಷ್ಟಪಟ್ಟಿದ್ದಾರೆ. ವಿಡಿಯೋಗೆ ಕಮೆಂಟ್ ಮಾಡಿ, ಖುಷಿಯಾಗಿರುವ ಬಳಕೆದಾರರು ಇದೊಂದು ತುಂಬಾ ಮುದ್ದಾದ ವಿಡಿಯೋ ಎಂದು ಬಣ್ಣಿಸಿದ್ದಾರೆ. ಮತ್ತೊಂದೆಡೆ, ಆನೆ ಮರಿಗಳು ತುಂಬಾ ಮುದ್ದಾದವು ಎಂದು ಕೆಲವರು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.