Bride Groom Video: ಮದುವೆಗಳು ಆಯಾಸ ಮತ್ತು ಒತ್ತಡವನ್ನು ಉಂಟುಮಾಡಬಹುದು. ಮದುವೆಯ ಸಮಯದಲ್ಲಿ, ಆಚರಣೆಗಳು ಮತ್ತು ಸಂಪ್ರದಾಯಗಳು ಗಂಟೆಗಳ ಕಾಲ ಸಮಯ ತೆಗೆದುಕೊಳ್ಳುತ್ತವೆ. ಆದರೆ, ಹಲವು ಬಾರಿ ವಧು - ವರರು ಬೇಸರಗೊಂಡು ಮಧ್ಯರಾತ್ರಿ ನಿದ್ದೆಗೆ ಜಾರುತ್ತಾರೆ. ಆದರೆ, ಅಸ್ಸಾಂನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮದುವೆಯ ವಿಧಿವಿಧಾನಗಳ ಸಮಯದಲ್ಲಿ ವರ ಕುಡಿದು ಮಲಗಿರುವುದನ್ನು ಕಾಣಬಹುದು. ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭದಲ್ಲಿ, ವರ ಪ್ರಸೇನ್‌ಜಿತ್ ಹಲೋಯ್ ಅವರ ಈ ಅವಾಂತರ ವೈರಲ್ ಆಗಿದೆ.
ವರನು ಎಚ್ಚರವಾಗಿರಲು ಕಷ್ಟಪಡುತ್ತಿರುವುದನ್ನು ನೋಡಬಹುದು. ವರ ಮತ್ತು ಆತನ ಜೊತಡಗಿರುವ ಹಿರಿಯರು ಮಿತಿ ಮೀರಿ ಕುಡಿದಿರುವುದನ್ನು ಕಂಡು ಮದುವೆಯಲ್ಲಿ ನೆರೆದಿದ್ದವರು ಆಶ್ಚರ್ಯಚಕಿತರಾದರು. ಆಚರಣೆಯ ಸಮಯದಲ್ಲಿ, ವರನು ಶಾಸ್ತ್ರಗಳನ್ನು ಪೂರ್ಣಗೊಳಿಸಲು ಒದ್ದಾಡುತ್ತಿದ್ದ. ಯಾಕೆಂದರೆ ಆತ ಕುಡಿದು ಫುಲ್ ಟೈಟಾಗಿದ್ದ. ವಧುವಿನ ಸಂಬಂಧಿಕರ ಪ್ರಕಾರ, ವರ ಮತ್ತು ಅವರ ತಂದೆ ಇಬ್ಬರೂ ವಿಧಿವಿಧಾನಗಳನ್ನು ನೆರವೇರಿಸುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ಮದುಮಗ ಅಲ್ಲೇ ಮದುವೆ ಮಂಟಪದಲ್ಲೇ ಮಲಗಿ ಬಿಟ್ಟ. ಇದನ್ನೆಲ್ಲ ಕಂಡ ವಧು ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದಳು.
#viralvideo: #Groom falls asleep during #wedding rituals, see how #bride reacts#assam #marriage #shocking #news #Trending
Subscribe to our YouTube page: https://t.co/bP10gHsZuP pic.twitter.com/jdfQehvdWC
— UnMuteINDIA (@LetsUnMuteIndia) March 12, 2023
ಇದನ್ನೂ ಓದಿ : Viral Video: “ನೀ ಜಾಣಮರಿ ಅಲಾ, ಮೊಬೈಲ್ ನೋಡ್ಬಾರ್ದು…”: 2 ವರ್ಷದ ಕಂದಮ್ಮ ಹೇಳೋ ಬುದ್ಧಿಮಾತು ಕೇಳ್ರೀ
ವರ ಮತ್ತು ಆತನ ತಂದೆಯ ಸ್ಥಿತಿ ಕಂಡು ವಧು ರೋಷಗೊಂಡಳು. ಅಂತಿಮವಾಗಿ, ಅವರು ಮದುವೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧರಿಸಿದರು. ಈ ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಕ್ಲಿಪ್‌ನಲ್ಲಿ, ವರನು ಆಚರಣೆಗಳ ಸಮಯದಲ್ಲಿ ಕುಳಿತಾಗ ತನ್ನನ್ನು ತಾನೇ ನಿಯಂತ್ರಿಸಲಾಗದೇ ಬೀಳುವುದನ್ನು ಕಾಣಬಹುದು. ಪಕ್ಕದಲ್ಲೇ ಇದ್ದ ಸಂಬಂಧಿಕರೊಬ್ಬರ ಮಡಿಲಲ್ಲಿ ಮಲಗುತ್ತಾನೆ. ವಧುವಿನ ಮನೆಯವರು ವರ ಮತ್ತು ಆತನ ಕುಟುಂಬದವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ವಧುವಿನ ಸಂಬಂಧಿಯೊಬ್ಬರು, "ಇಬ್ಬರೂ ಪಾನಮತ್ತರಾಗಿದ್ದರಿಂದ ವರ ಮಾತ್ರವಲ್ಲ, ಆತನ ತಂದೆಯೂ ಕಾರಿನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಪರಿಸ್ಥಿತಿ ನೋಡಿ ವಧುವೇ ಮದುವೆಯಾಗದಿರಲು ನಿರ್ಧರಿಸಿದ್ದಾರೆ" ಎಂದು ಹೇಳಿದ್ದಾರೆ.
ಮತ್ತೋರ್ವ ಸಂಬಂಧಿ, "ಮದುವೆ ಚೆನ್ನಾಗಿ ನಡೆಯುತ್ತಿತ್ತು. ನಾವು ಎಲ್ಲಾ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ್ದೇವೆ. ಮದುವೆಯನ್ನು ಪೂರ್ಣಗೊಳಿಸಲು ನಮ್ಮ ಕುಟುಂಬವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಪರಿಸ್ಥಿತಿ ಉಲ್ಬಣಗೊಂಡಾಗ, ಹುಡುಗಿ ಮದುವೆಗೆ ಹಾಜರಾಗದಿರಲು ನಿರ್ಧರಿಸಿದಳು." ಎಂದು ಹೇಳಿದ್ದಾರೆ. ಮದುವೆಯ ಆಘಾತಕಾರಿ ಘಟನೆಗಳಿಂದಾಗಿ, ವಧುವಿನ ತಂದೆ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಮತ್ತು ವೈದ್ಯಕೀಯ ಚಿಕಿತ್ಸೆಗೆ ಒಳಗಾಗಬೇಕಾಯಿತು. ವಧುವಿನ ಮನೆಯವರು ಘಟನೆಯ ಬಗ್ಗೆ ನಲ್ಬರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ : Viral Video: ಕ್ಲಾಸ್ ರೂಮ್‌ನಲ್ಲಿ ಈ ಹುಡುಗ... ಇದನ್ನು ನೋಡಿದ ಹುಡುಗಿಯರು ಬೆಚ್ಚಿಬಿದ್ರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.